Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬುಲ್‌ಡೋಜರ್ ನಿಯಮಗಳು

ಬುಲ್‌ಡೋಜರ್ ನಿಯಮಗಳು

ಟಿ. ನವೀನ್ಟಿ. ನವೀನ್24 April 2022 12:11 AM IST
share

ಇತ್ತೀಚಿನ ದಿನಗಳಲ್ಲಿ ಸರಣಿ ಘಟನೆಗಳು ನಡೆಯುತ್ತಿವೆ. ಮುಸ್ಲಿಮರ ಪ್ರದೇಶಗಳಿಗೆ ಬುಲ್‌ಡೋಜರ್‌ಗಳನ್ನು ನುಗ್ಗಿಸಲಾಗುತ್ತಿದೆ. ಬುಲ್‌ಡೋಜರ್‌ಗಳು ಮಧ್ಯಪ್ರದೇಶದಲ್ಲಿ ಆರ್ಭಟಿಸಲು ಆರಂಭಿಸಿದವು. ಬಳಿಕ ದಿಲ್ಲಿಯ ಜಹಾಂಗೀರ್‌ಪುರಿಗೆ ಕಾಲಿಟ್ಟವು. ಈ ಎರಡೂ ಪ್ರಕರಣಗಳಲ್ಲಿ ಅನುಸರಿಸಲಾದ ಮಾದರಿ ಒಂದೇ. ರಾಮನವಮಿ ಅಥವಾ ಹನುಮಾನ್ ಜಯಂತಿಯ ಸಂದರ್ಭದಲ್ಲಿ ಯಾತ್ರೆಯ ನೆಪದಲ್ಲಿ ಹಿಂದೂ ಗುಂಪುಗಳು ಮುಸ್ಲಿಮರ ಸ್ಥಳಗಳಿಗೆ ಹೋಗುವುದು. ಹಬ್ಬದ ಸಂದರ್ಭದಲ್ಲಿ ಗುಂಪುಗಳು ದೇವಸ್ಥಾನಗಳಿಗೆ ಹೋಗುವ ಬದಲು, ದ್ವೇಷವನ್ನು ತುಂಬಿಕೊಂಡು, ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತಾ ಮತ್ತು ಮಾತುಗಳಿಂದ ನಿಂದಿಸುತ್ತಾ ಮುಸ್ಲಿಮರ ಸ್ಥಳಗಳಿಗೆ ಹೋಗುತ್ತವೆ. ಈ ಮೆರವಣಿಗೆಗಳಲ್ಲಿ ಖಡ್ಗಗಳು ಮತ್ತು ದೊಣ್ಣೆಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ. ಆ ಗುಂಪುಗಳು ಮಸೀದಿಯನ್ನು ಪ್ರವೇಶಿಸುತ್ತವೆ, ಅಲ್ಲಿರುವ ಅಲ್ಪಸಂಖ್ಯಾತರನ್ನು ನಿಂದಿಸುತ್ತವೆ ಹಾಗೂ ಮಸೀದಿಯ ಮೇಲೆ ದಾಳಿ ನಡೆಸುವ ಮತ್ತು ಅಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಸ್ಪಷ್ಟ ಸೂಚನೆಯನ್ನು ನೀಡುತ್ತವೆ. ಆಕ್ರಮಣಶೀಲತೆ ಮತ್ತು ದ್ವೇಷ ಪ್ರದರ್ಶನಕ್ಕೆ ಪೊಲೀಸರು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ಆತ್ಮರಕ್ಷಣೆಗಾಗಿ ಇನ್ನೊಂದು ಕಡೆಯಿಂದ ಯಾವುದಾದರೂ ಪ್ರತಿಕ್ರಿಯೆ ಬಂದರೆ, ಅವರನ್ನು ದೊಂಬಿಕೋರರು ಮತ್ತು ಕಲ್ಲೆಸೆಯುವವರು ಎಂಬುದಾಗಿ ಬಿಂಬಿಸಲಾಗುತ್ತದೆ. 'ಮುಸ್ಲಿಮ್' ಪ್ರದೇಶದ ನಿವಾಸಿಗಳು ಕಲ್ಲೆಸೆಯುವವರು, ದೊಂಬಿಕೋರರು ಹಾಗೂ ಅವರು 'ಶಾಂತಿಯುತ' ಶೋಭಾಯಾತ್ರಿಗಳ ಮೇಲೆ ದಾಳಿ ನಡೆಸಿದರು ಎಂಬುದಾಗಿ ಕೇಸರಿ ಸಾಮಾಜಿಕ ಮಾಧ್ಯಮಗಳು ಮತ್ತು ಗೋದಿ ಮಾಧ್ಯಮಗಳು ಪ್ರಚಾರ ಮಾಡುತ್ತವೆ.

ಕಾನೂನಿನ ಅನುಮೋದನೆ ಮತ್ತು ಒಪ್ಪಿಗೆಯಿಲ್ಲದೆ ಬುಲ್‌ಡೋಜರ್‌ಗಳು ಪ್ರವೇಶಿಸುತ್ತವೆ ಹಾಗೂ ಮನೆಗಳು ಮತ್ತು ಸಣ್ಣ ಉದ್ಯಮಗಳನ್ನು ಧ್ವಂಸಗೊಳಿಸುತ್ತವೆ. ಇದಕ್ಕೆ ಕೊಡಲಾಗುವ ಸಮರ್ಥನೆಯೆಂದರೆ, ಅವುಗಳು ಅಕ್ರಮ ಕಟ್ಟಡಗಳಾಗಿದ್ದವು; ಹಾಗಾಗಿ ಅವುಗಳನ್ನು ತೆರವುಗೊಳಿಸಬೇಕಾಗಿತ್ತು ಎನ್ನುವುದು.

ಎರಡನೇ ಸಮರ್ಥನೆಯೆಂದರೆ, ದೊಂಬಿ ಕೋರರೊಂದಿಗೆ ವ್ಯವಹರಿಸುವಾಗ ಸರಕಾರ ಯಾವುದೇ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ ಎನ್ನುವುದು. ಮುಸ್ಲಿಮರ ಮನೆಗಳನ್ನು ನೆಲಸಮ ಮಾಡುವುದರ ಜೊತೆಗೆ ಬಡ ನಿವಾಸಿಗಳ ಮನೆಗಳನ್ನೂ ಧ್ವಂಸಗೊಳಿಸಲಾಗಿದೆ. ಆ ಬಡವರು ಬೀದಿ ವ್ಯಾಪಾರಿಗಳು, ಸಣ್ಣ ಕಿರಾಣಿ ಅಂಗಡಿಗಳನ್ನು ನಡೆಸುತ್ತಿದ್ದವರು ಮತ್ತು ನಗರಗಳ ಉದ್ಯಮಗಳು ಮತ್ತು ಮನೆಗಳಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸಗಳನ್ನು ಮಾಡುತ್ತಿದ್ದವರು. ಈ ದ್ವೇಷ ಕೃತ್ಯದಲ್ಲಿ ಮುಸ್ಲಿಮ್ ವಿರೋಧಿ ಮತ್ತು ಬಡವರ ವಿರೋಧಿ- ಎರಡೂ ಅಂಶಗಳಿವೆ. ದೊಂಬಿ ಮತ್ತು ಕಲ್ಲೆಸೆತಕ್ಕಾಗಿ ಬಂಧನಕ್ಕೊಳಗಾದವರಲ್ಲಿ ಕೈಯಿಲ್ಲದವರೂ ಇದ್ದಾರೆ.
'ಬುಲ್‌ಡೋಜರ್' ಆಡಳಿತವು ಅಲ್ಪಸಂಖ್ಯಾತರ ವಿರುದ್ಧ ವ್ಯಕ್ತಪಡಿಸಲಾಗುತ್ತಿರುವ ದ್ವೇಷದ ವಿಸ್ತೃತ ರೂಪವೇ? ಇದು ಮುಂಬರುವ ದಿನಗಳಲ್ಲಿ, ಸಂಘ ಪರಿವಾರವು ಯಾವಾಗಲೂ ಹೇಳುತ್ತಿರುವಂತೆ, 'ಅವರಿಗೆ ಅವರ ಸ್ಥಾನವನ್ನು ತೋರಿಸುವ' ಹೊಸ ಮಾದರಿಯೇ? ಅಲ್ಪಸಂಖ್ಯಾತರ ಮತ್ತು ಬಡವರ ಮನೆಗಳನ್ನು ಕೆಡಹುವ ಮೂಲಕ ಆನಂದವನ್ನು ಪಡೆಯಲು ಬಿಜೆಪಿ ಪ್ರತಿನಿಧಿಗಳು ಪರಸ್ಪರ ಸ್ಪರ್ಧಿಸುತ್ತಿದ್ದಾರೆ. ಹಾಗಾದರೆ, ಭಾರತದಾದ್ಯಂತ ಇಂಥ ಎಷ್ಟು ಬುಲ್‌ಡೋಝ್ ಘಟನೆಗಳು ನಡೆಯಬಹುದು?

ಮಧ್ಯಮ ವರ್ಗವು ವಾಸ್ತವಿಕತೆಯ ನಂಟನ್ನು ಕಡಿದುಕೊಂಡಿದೆ. 'ಅನ್ಯ'ರಿಂದ 'ನಮಗೆ' ರಕ್ಷಣೆಯ ಅಗತ್ಯವಿದೆ; ಹಾಗಾಗಿ, ಬುಲ್‌ಡೋಜರ್‌ಗಳ ಅಗತ್ಯವಿದೆ ಎಂಬ ಸುಳ್ಳು ಪ್ರಚಾರಗಳಲ್ಲಿ ಮಧ್ಯಮ ವರ್ಗದ ಹೆಚ್ಚಿನ ವರ್ಗಗಳು ತೊಡಗಿಕೊಂಡಿವೆ. ಇದೇ ಆಧಾರದಲ್ಲಿ ಬುಲ್‌ಡೋಜರ್‌ಗಳು ಮನೆಗಳು ಮತ್ತು ಅಂಗಡಿಗಳನ್ನು ಕೆಡಹುತ್ತಿವೆ. 'ನಾವು' ಮತ್ತು 'ಅನ್ಯರು' ಎಂಬ ಆಧಾರದಲ್ಲಿ ನಡೆಯುತ್ತಿರುವ ಈ ವಿಭಜನೆಯು ಮಾನವರ ಮೂಲ ಅಸ್ತಿತ್ವದ ಮೇಲೆಯೇ ದಾಳಿ ನಡೆಸುತ್ತಿದೆ. ಹಾಗಾಗಿ, ದ್ವೇಷ ತುಂಬಿಸಿಕೊಂಡ ಬೃಹತ್ ಜನ ವರ್ಗವು ಬುಲ್‌ಡೋಜರ್‌ಗಳ ಮೂಲಕ ನಡೆಸಲಾಗುತ್ತಿರುವ ಧ್ವಂಸವನ್ನು ಆನಂದಿಸುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಈ ಕೃತ್ಯಗಳು ಸಮರ್ಥನೀಯವಾಗಿವೆ ಮತ್ತು ಅವರಿಗೆ ಅವರ ಸ್ಥಾನವನ್ನು ತೋರಿಸಬೇಕು ಎಂಬುದಾಗಿ ಅವರು ಭಾವಿಸುತ್ತಾರೆ.

ಇಂಥ ಘಟನೆಗಳನ್ನು ತಡೆಯಲು ವಕೀಲರಾದ ದುಶ್ಯಂತ ದವೆ ಮತ್ತು ಪ್ರಶಾಂತ್ ಭೂಷಣ್ ತೆಗೆದುಕೊಂಡಿರುವ ಕಾನೂನು ಕ್ರಮಗಳು ತಕ್ಷಣಕ್ಕೆ ಮಹತ್ವದ್ದಾಗಿದೆ. ಮುಂಬರುವ ದಿನಗಳಲ್ಲಿ, ಕೇಸರಿ ಪಡೆಗಳು ಅನುಸರಿಸುತ್ತಿರುವ 'ಹಿಂದೂ ಜಾಗೃತಿ'ಯನ್ನು ಎದುರಿಸಲು 'ಮಾನವ ಜಾಗೃತಿ'ಯಂಥ ಕಾರ್ಯಕ್ರಮಗಳನ್ನು ನಡೆಸುವುದು ಅನಿವಾರ್ಯವಾಗಿದೆ. 'ಮಾನವ ಜಾಗೃತಿ'ಯು ತನ್ನದೇ ಆದ 'ನಾವು' ಮತ್ತು 'ಅನ್ಯರು'ಗಳನ್ನು ಒಳಗೊಂಡಿದೆ. ಇಲ್ಲಿನ 'ನಾವು' ಪ್ರೀತಿ ಮತ್ತು ಸಾಮರಸ್ಯದಲ್ಲಿ ನಂಬಿಕೆಯಿರಿಸಿದವರನ್ನು ಪ್ರತಿನಿಧಿಸಿದರೆ, 'ಅನ್ಯರು' ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವವರನ್ನು ಪ್ರತಿನಿಧಿಸುತ್ತಾರೆ. 'ಹಿಂದೂ ಜಾಗೃತಿ' ಅಥವಾ ಇತರ ಯಾವುದೇ ರೂಪದ ಆಡಂಬರದ ಘೋಷಣೆಗಳನ್ನು ತಡೆಯಲು 'ಮಾನವ ಜಾಗೃತ್ತಿ'ಗಾಗಿ ಆಂದೋಲನ ನಡೆಸುವುದು ಅಗತ್ಯವಾಗಿದೆ.

ಕೃಪೆ: countercurrents.org

share
ಟಿ. ನವೀನ್
ಟಿ. ನವೀನ್
Next Story
X