ಮಂಗಳೂರು : ಎ. 26ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಮಂಗಳೂರು: ನೀರು ಸರಬರಾಜು ಮಾಡುವ ಕೊಳವೆ ದುರಸ್ತಿಗೊಳಿಸುವ ಕಾರಣ ಎ.26ರಂದು ಮಂಗಳೂರಿ ನಲ್ಲಿ ನೀರು ನಿಲುಗಡೆಯಾಗಲಿದೆ ಎಂದು ಮಹಾನಗರ ಪಾಲಿಕೆಯ ಪ್ರಕಟನೆ ತಿಳಿಸಿದೆ.
ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಸ್ಥಾವರದ ಪಂಪಿಂಗ್ ಮಾಡುವ ಮುಖ್ಯ ಕೊಳವೆ ಪಣಂಬೂರು ಕೆಐಒಸಿಎಲ್ ಗೇಟ್ ಹತ್ತಿರ ಒಡೆದು ಸೋರಿಕೆ ಉಂಟಾಗಿದ್ದು, ತುರ್ತಾಗಿ ದುರಸ್ತಿಗೊಳಿಸುವ ಅಗತ್ಯವಿದೆ.
ಆದುದರಿಂದ ಎ.26ರಂದು ಬೆಳಗ್ಗೆ 6 ಗಂಟೆಯಿಂದ ಎ.27ರ ಬೆಳಗ್ಗೆ 6 ಗಂಟೆಯವರೆಗೆ ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಭಾಗಶಃ ಕಾನ, ಬಾಳಾ, ಕುಳಾಯಿ, ಮುಕ್ಕ, ಪಣಂಬೂರು ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣ ನೀರು ನಿಲುಗಡೆಯಾಗುವುದುದರಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದೆಂದು ಮಹಾ ನಗರ ಪಾಲಿಕೆಯ ಪ್ರಕಟನೆ ತಿಳಿಸಿದೆ.
Next Story





