ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಬಜರಂಗ್ ಮುನಿಗೆ ಜಾಮೀನು: "ಪಶ್ಚಾತ್ತಾಪವಿಲ್ಲ" ಎಂದ ಆರೋಪಿ

Video Screengrab
ಸೀತಾಪುರ್ (ಯುಪಿ): ಉತ್ತರ ಪ್ರದೇಶದ ಸೀತಾಪುರದಲ್ಲಿ ದ್ವೇಷಪೂರಿತ ಭಾಷಣ ಮಾಡಿ ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಮಹರ್ಷಿ ಶ್ರೀ ಲಕ್ಷ್ಮಣ ದಾಸ್ ಉದಾಸಿ ಆಶ್ರಮದ ಭಜರಂಗ ಮುನಿ ದಾಸ್ಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ ಎಂದು ತಿಳಿದು ಬಂದಿದೆ.
ಜಿಲ್ಲಾ ನ್ಯಾಯಾಧೀಶ ಸಂಜಯ್ ಕುಮಾರ್ ಅವರು ಶನಿವಾರ ಜಾಮೀನು ಮಂಜೂರು ಮಾಡಿದ್ದು, ರವಿವಾರ ಬೆಳಗ್ಗೆ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಗೊಂಡರು. ದಾಸ್ ವಿರುದ್ಧ ರಾಮನರೇಶ್ ಎಂಬಾತ ದೂರು ನೀಡಿದ ನಂತರ ಆತನನ್ನು ಏಪ್ರಿಲ್ 13 ರಂದು ಬಂಧಿಸಲಾಗಿತ್ತು.
ಬಿಡುಗಡೆಯಾದ ನಂತರ, "ನಾನು ಸಾವಿರ ಬಾರಿ ಜೈಲಿಗೆ ಹೋಗಲು ಮತ್ತು ಅನೇಕ ದಾಳಿಗಳನ್ನು ಎದುರಿಸಲು ಸಿದ್ಧನಿದ್ದೇನೆ, ಆದರೆ ನನ್ನ ಧರ್ಮ ಮತ್ತು ಮಹಿಳೆಯರನ್ನು ರಕ್ಷಿಸುವುದನ್ನು ಮುಂದುವರಿಸುತ್ತೇನೆ" ಎಂದು ಆತ ಹೇಳಿದ್ದಾಗಿ ವರದಿ ಹೇಳಿದೆ.
"ನಾನು ಹೇಳಿದ್ದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ" ಎಂದೂ ಈ ಸಂದರ್ಭದಲ್ಲಿ ಆತ ಹೇಳಿದ್ದನೆಂದು ವರದಿ ತಿಳಿಸಿದೆ. ಮಸೀದಿಯ ಹೊರಗೆ ಮಾಡಿದ ಭಾಷಣದ ಎರಡು ನಿಮಿಷಗಳ ವೀಡಿಯೊದಲ್ಲಿ, ಅವರು ಸಮುದಾಯವನ್ನು ಉಲ್ಲೇಖಿಸಲು "ಜಿಹಾದಿ" ಎಂಬ ಪದವನ್ನು ಬಳಸಿದ್ದು ಮತ್ತು ಯಾವುದೇ ಹಿಂದೂ ಹುಡುಗಿಗೆ ಆ ಸಮುದಾಯದ ಯಾರಾದರೂ ಕಿರುಕುಳ ನೀಡಿದರೆ, ಅವರ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗುತ್ತದೆ" ಎಂದು ಆತ ಹೇಳಿದ್ದು ಸಾಮಾಜಿಕ ತಾಣದಾದತ ವೈರಲ್ ಆಗಿತ್ತು.







