ವಾಸಂತಿ ಅಂಬಲಪಾಡಿಯ ‘ವಸುಮಿತ್ರೆ ಕೇಳು’ ಅಬಾಬಿ ಸಂಕಲನ ಬಿಡುಗಡೆ

ಉಡುಪಿ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ಉಡುಪಿ ಜಿಲ್ಲಾ, ತಾಲೂಕು ಘಟಕ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ ಸಹ ಯೋಗದಲ್ಲಿ ಶನಿವಾರ ಮಲಬಾರ್ ಗೋಲ್ಡ್ ಉಡುಪಿ ಮಳಿಗೆಯಲ್ಲಿ ವಾಸಂತಿ ಅಂಬಲಪಾಡಿ ಅವರ ‘ವಸುಮಿತ್ರೆ ಕೇಳು’ ಅಬಾಬಿ ಸಂಕಲನವನ್ನು ಗೋವಾದ ಉದ್ಯಮಿ ಗೋಪಾಲ ಬಂಗೇರ ಬಿಡುಗಡೆಗೊಳಿಸಿದರು.
ಪದವಿ ವಿದ್ಯಾರ್ಥಿಗಳಿಗೆ ನಡೆಸಿದ ಕವನ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಯುವ ಕಥಾಗೋಷ್ಟಿ ಇದೇ ಸಂದರ್ಭದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ವಹಿಸಿದ್ದರು.
ಮಣಿಪುರ ಜತ್ತನ್ ಮೂಲಸ್ಥಾನದ ಗೌರವ ಅಧ್ಯಕ್ಷೆ ಸುಲೋಚನ ಗೋಪಾಲ ಬಂಗೇರ, ಸಾಹಿತಿ ಪೂರ್ಣಿಮ ಸುರೇಶ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಸಂಚಾಲಕ ರಾಮಕೃಷ್ಣ ಶಿರೂರ್, ಮಲಬಾರ್ ಗೋಲ್ಡ್ ಶಾಖಾ ಮುಖ್ಯಸ್ಥ ಹಫೀಜ್ ರೆಹಮಾನ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೋಟ್ರೇಶ ಉಪ್ಪಾರ, ರಾಜ್ಯ ಅಧ್ಯಕ್ಷೆ ಶಾಲಿನಿ ರುದ್ರಮುನಿ, ಜಿಲ್ಲಾ ಅಧ್ಯಕ್ಷೆ ವಾಸಂತಿ ಅಂಬಲಪಾಡಿ, ತಾಲೂಕು ಅಧ್ಯಕ್ಷೆ ಅಮೃತಾ ಸಂದೀಪ್ ಉಪಸ್ಥಿತರಿದ್ದರು.
ತಾಲೂಕು ಘಟಕದ ಕಾರ್ಯದರ್ಶಿ ಸುಮಾ ಕಿರಣ್ ಕೃತಿ ಪರಿಚಯ ಮಾಡಿದರು. ರಮ್ಯ ಆರ್.ಸ್ವಾಗತಿಸಿದರು. ಅನಿತಾ ಸಿಕ್ವೇರಾ ಕಾರ್ಯಕ್ರಮ ನಿರೂ ಪಿಸಿದರು. ಸೌಧಾಮಿನಿ ರಾವ್ ವಂದಿಸಿದರು.







