ಗ್ರಾಪಂಗಳಿಗೆ ಅನುದಾನ ಹೆಚ್ಚಿಸಲು ಮಂಜುನಾಥ ಭಂಡಾರಿ ಆಗ್ರಹ
ಮಂಗಳೂರು : ಗ್ರಾಪಂಗಳಿಗೆ ಅನುದಾನ ಹೆಚ್ಚಿಸುವ ಮೂಲಕ ಗ್ರಾಮಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಆಗ್ರಹಿಸಿದ್ದಾರೆ.
ದೇಶದ ಪ್ರಪ್ರಥಮ ಪ್ರಧಾನಿ ನೆಹರೂರವರು ೩ ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ೧೯೫೯ರಲ್ಲಿ ಜಾರಿಗೊಳಿಸಿದರು. ಇತ್ತೀಚಿನ ವರದಿಯ ಪ್ರಕಾರ ಸುಮಾರು ೪೦ ಲಕ್ಷ ಜನತಾ ಪ್ರತಿನಿಧಿಗಳು ಜನಾಧಿಕಾರ ವನ್ನು ಪಡೆದಿರುತ್ತಾರೆ. ಕರ್ನಾಟಕದ ಮಟ್ಟಿಗೆ ಸುಮಾರು ೧ ಲಕ್ಷಕ್ಕೂ ಅಧಿಕ ಜನಪ್ರತಿನಿಧಿಗಳಿದ್ದಾರೆ. ಆದರೆ ರಾಜ್ಯ ಸರಕಾರದ ಇಬ್ಬಗೆ ನೀತಿಯಿಂದ ಜನರ ಅಧಿಕಾರವನ್ನು ಮೊಟಕುಗೊಂಡಿದೆ. ಅಲ್ಲದೆ ಗ್ರಾಪಂಗಳಿಗೆ ಒದಗಿಸುತ್ತಿರುವ ಅನುದಾನವು ಕಡಿತಗೊಳಿಸಲಾಗುತ್ತಿದೆ. ಇನ್ನು ಮುಂದೆಯಾದರೂ ಸರಕಾರ ಎಚ್ಚೆತ್ತುಕೊಂಡು ಅಂಬೆಡ್ಕರ್, ನೆಹರೂ, ರಾಜೀವ್ ಗಾಂಧಿ, ರಾಮಕೃಷ್ಣ ಹೆಗ್ಡೆ, ನಜೀರ್ ಸಾಬ್ ಕಂಡಂತಹ ಕನಸನ್ನು ನನಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Next Story





