ಬಿಜೆಪಿಯದ್ದು ಆಗ ಆಪರೇಷನ್ ಕಮಲ, ಈಗ ಆಪರೇಷನ್ ಬುಲ್ಡೋಝರ್: ಡಿ.ಕೆ.ಶಿವಕುಮಾರ್

ಶಿವಮೊಗ್ಗ:ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿದ್ದ ಬಿಜೆಪಿ ಈಗ ರಾಜ್ಯದಲ್ಲಿಅಧಿಕಾರದ ಚುಕ್ಕಾಣಿ ಹಿಡಿದಿದ್ದೇ ರಾಜ್ಯದಲ್ಲಿಬುಲ್ಡೋಜರ್ ಮಾದರಿ ತರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಭೋವಿ ಸಮಾಜದ ಸಮಾವೇಶದಲ್ಲಿಭಾಗವಹಿಸಲು ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
'ರಾಜ್ಯದಲ್ಲಿಹಗರಣದ ಸರಮಾಲೆಯೇ ನಡೆಯುತ್ತಿದೆ. ಎಲ್ಲಇಲಾಖೆಗಳಲ್ಲೂಅವ್ಯವಹಾರ ನಡೆಯುತ್ತಿದೆ. ಯಾರ್ಯಾರು ನೊಂದವರಿದ್ದಾರೋ ಈಗ ಹೊರಗೆ ಬರುತ್ತಿದ್ದಾರೆ. ಕಷ್ಟಪಟ್ಟು ಓದಿ, ಉದ್ಯೋಗ ಕನಸು ಕಂಡವರು ಕಣ್ಣೀರು ಹಾಕುವಂತ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿಭ್ರಷ್ಟಾಚಾರ ತಾಂಡವವಾಡುತ್ತಿದೆ' ಎಂದರು.
'ಶೇ.40 ಕಮಿಷನ್‌ಗೆ ವಿದ್ಯಾವಂತ ಗುತ್ತಿಗೆದಾರ ಸಂತೋಷ್ ಪಾಟೀಲ್ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಮಾಜಿ ಸಚಿವ ಈಶ್ವರಪ್ಪ ಅವರು ತನಗೆ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ' ಎಂದು ಹೇಳಿದರು.
ಭ್ರಷ್ಟಾಚಾರ ನಿಷೇಧ ಕಾಯಿದೆಯನ್ನು ರಾಜ್ಯದಲ್ಲಿಕೂಡಲೇ ಜಾರಿಗೆ ತರಬೇಕು. ರಾಜ್ಯದ ಜನರ ಋುಣ ತೀರಿಸಲು ಪ್ರವೀಣ್ ಸೂದ್ ಈ ಕೆಲಸ ಮಾಡಬೇಕು ಎಂದು ತಿಳಿಸಿದರು.





