Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ನಟ ರಾಜ್‌ ಕುಮಾರ್‌ ಹುಟ್ಟುಹಬ್ಬ:...

ನಟ ರಾಜ್‌ ಕುಮಾರ್‌ ಹುಟ್ಟುಹಬ್ಬ: ಕನ್ನಡದಲ್ಲೇ ಗ್ರಾಹಕ ಸೇವೆಗೆ ಆಗ್ರಹ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರೆ ನೀಡಿದ್ದ ಅಭಿಯಾನಕ್ಕೆ ಹಲವರ ಬೆಂಬಲ

ವಾರ್ತಾಭಾರತಿವಾರ್ತಾಭಾರತಿ24 April 2022 8:36 PM IST
share
ನಟ ರಾಜ್‌ ಕುಮಾರ್‌ ಹುಟ್ಟುಹಬ್ಬ: ಕನ್ನಡದಲ್ಲೇ ಗ್ರಾಹಕ ಸೇವೆಗೆ ಆಗ್ರಹ

ಬೆಂಗಳೂರು: ನಟ ದಿವಂಗತ ರಾಜ್‌ಕುಮಾರ್‌ ಹುಟ್ಟುಹಬ್ಬವನ್ನು ‘ಕನ್ನಡ ಅಭಿಮಾನ ದಿನ’ವನ್ನಾಗಿ ಆಚರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನೀಡಿದ್ದ ಕರೆಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. 

 'ಕರ್ನಾಟಕದ ಜೀವವಿಮಾ ಕಂಪನಿಗಳೇ, ನಿಮ್ಮಲ್ಲಿ ಹಣಹೂಡಿ ಭವಿಷ್ಯದ ಬಗ್ಗೆ ಆಲೋಚಿಸುವ ಪ್ರತಿಯೊಬ್ಬನಿಗೂ ಕನ್ನಡದ ನಾಳೆಗಳ ಭವಿಷ್ಯದ ಚಿಂತೆಯಿದೆ. ಕನ್ನಡಲ್ಲಿ ಸೇವೆ ಕೊಡಿ, ಭವಿಷ್ಯದ ಶುದ್ಧಕನ್ನಡದ ಉಳಿವಿಗಾಗಿ ನಿಮ್ಮದೂ ಒಂದು ಕೈ ಜೋಡಿಸಿ' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌. ನಾಗಾಭರಣ ವಿಡಿಯೋ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

'ಜನರಿಂದ ಸರ್ಕಾರ... ಜನರಿಗೆ ಜನಭಾಷೆಯಲ್ಲಿ ಸೇವೆ ಕೊಡುವುದು ನಮ್ಮ ಹೊಣೆ... ಬನ್ನಿ ಬದಲಾಗೋಣ ಬದಲಾವಣೆಗೆ ಕಾರಣರಾಗೋಣ..... ಸರಿದಾರಿಯಲ್ಲಿ ನಡೆಯೋಣ...'ಎಂದು ಪ್ರಾಧಿಕಾರವು ಇನ್ನೊಂದು ಟ್ವೀಟ್ ನಲ್ಲಿ ಮನವಿ ಮಾಡಿದೆ. 

ಇನ್ನು ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿರುವ ಹಲವರು, ಕನ್ನಡದಲ್ಲಿ ಗ್ರಾಹಕ ಸೇವೆ ಅಗತ್ಯ ಎನ್ನುವ ತಮ್ಮ  ಅಭಿಪ್ರಾಯಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡರು.

ಬೆಂಗಳೂರು ನಗರದ ಮಾಲ್‌ಗಳು, ಅಂಗಡಿಗಳಿಗೆ ತೆರಳಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಕನ್ನಡ ಹೋರಾಟಗಾರರು ಮನವಿ ಮಾಡಿದ್ದಾರೆ. 

'ಗೂಗಲ್ ಸೇರಿದಂತೆ ಹೊರದೇಶದ ಅದೆಷ್ಟೋ ಕಂಪನಿಗಳು ಕನ್ನಡದಲ್ಲಿ ಗ್ರಾಹಕ ಸೇವೆ ನೀಡಲು ಕ್ರಮ ಕೈಗೊಳ್ಳುತ್ತಿವೆ, ಆದರೆ ಭಾರತದ ಅದೆಷ್ಟೋ ಕಂಪನಿಗಳು ಎಲ್ಲಾ ಗ್ರಾಹಕರಿಗೆ ಇಂಗ್ಲೀಶ್/ಹಿಂದಿ ಬರುತ್ತೆ ಅನ್ನೋ ಭ್ರಮೆಯಲ್ಲಿವೆ' ಎಂದು ಅರುಣ್ ಜಾವಗಲ್ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. 

'ರಾಷ್ಟ್ರೀಯ ಪಿಂಚಣಿ ಯೋಜನೆ (NPS) ನ ಎಲ್ಲಾ ವ್ಯವಹಾರಗಳು, ಮಾಹಿತಿಗಳು ಕೇವಲ ಹಿಂದಿ ಇಂಗ್ಲೀಷ್ ನಲ್ಲಿ ಮಾತ್ರ ಲಭ್ಯ ಇವೆ. ಕನ್ನಡದಲ್ಲೂ ಇದು ದೊರಕಬೇಕು. ಸರ್ಕಾ ರದ ಯೋಜನೆಗಳನ್ನು ಜನರ ಭಾಷೆಗಳಲ್ಲಿ ಒದಗಿಸಬೇಕು' ಎಂದು ವಿಕಾಸ್ ಹೆಗಡೆ ಎಂಬವರು ಟ್ವೀಟ್ ಮಾಡಿದ್ದಾರೆ.

'ನಮ್ಮ ಬೇರು, ನಮ್ಮ ಅಸ್ತಿತ್ವ ಕನ್ನಡ. ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಬಡಿದೆಚ್ಚರಿಸಿದ ಅಣ್ಣಾವ್ರಿಗೆ ನಾವು ಗೌರವ ಸಲ್ಲಿಸಬೇಕೆಂದರೆ ಎಲ್ಲೆಡೆ ಕನ್ನಡ ರಾರಾಜಿಸುವಂತೆ ಮಾಡಬೇಕಿದೆ. ಎಲ್ಲಾ ಗ್ರಾಹಕ ಸೇವೆಗಳನ್ನು ಕನ್ನಡದಲ್ಲಿ ಕೇಳಿ ಪಡೆಯೋಣ' ಎಂದು ರಾಮಚಂದ್ರ ಎಂ. ಎಂಬವರು ಮನವಿ ಮಾಡಿಕೊಂಡಿದ್ದಾರೆ. 

#ಕನ್ನಡದಲ್ಲಿ_ಗ್ರಾಹಕ_ಸೇವೆ ಗಾಗಿ ಒತ್ತಾಯಿಸಲು ಇಂದು ನಗರದ ಲುಲು ಮಾಲ್ ನ ವ್ಯವಸ್ಥಾಪಕರನ್ನು ಭೇಟಿ ಮಾಡಿ #ಕನ್ನಡ_ಅಭಿಮಾನಿ_ದಿನ ದ ಹಕ್ಕೊತ್ತಾಯ ಸಲ್ಲಿಸಲಾಯಿತು. pic.twitter.com/6lPgVzpUPP

— ಕನ್ನಡ ಅಭಿವೃದ್ಧಿ ಪ್ರಾಧಿಕಾರ (@kdabengaluru) April 24, 2022

#ಕನ್ನಡದಲ್ಲಿ_ಗ್ರಾಹಕ_ಸೇವೆ#ಕನ್ನಡ_ಅಭಿಮಾನಿ_ದಿನ
ಕರ್ನಾಟಕದ ಜೀವವಿಮಾ ಕಂಪನಿಗಳೇ,
ನಿಮ್ಮಲ್ಲಿ ಹಣಹೂಡಿ ಭವಿಷ್ಯದ ಬಗ್ಗೆ ಆಲೋಚಿಸುವ ಪ್ರತಿಯೊಬ್ಬನಿಗೂ ಕನ್ನಡದ ನಾಳೆಗಳ ಭವಿಷ್ಯದ ಚಿಂತೆಯಿದೆ.
ಕನ್ನಡಲ್ಲಿ ಸೇವೆ ಕೊಡಿ, ಭವಿಷ್ಯದ ಶುದ್ಧಕನ್ನಡದ ಉಳಿವಿಗಾಗಿ ನಿಮ್ಮದೂ ಒಂದು ಕೈ ಜೋಡಿಸಿ... pic.twitter.com/zRIXoj8J7A

— ಕನ್ನಡ ಅಭಿವೃದ್ಧಿ ಪ್ರಾಧಿಕಾರ (@kdabengaluru) April 24, 2022

ರಾಷ್ಟ್ರೀಯ ಪಿಂಚಣಿ ಯೋಜನೆ (NPS) ನ ಎಲ್ಲಾ ವ್ಯವಹಾರಗಳು, ಮಾಹಿತಿಗಳು ಕೇವಲ ಹಿಂದಿ ಇಂಗ್ಲೀಷಲ್ಲಿ ಮಾತ್ರ ಲಭ್ಯ ಇವೆ. ಕನ್ನಡದಲ್ಲೂ ಇದು ದೊರಕಬೇಕು. ಸರ್ಕಾರದ ಯೋಜನೆಗಳನ್ನು ಜನರ ಭಾಷೆಗಳಲ್ಲಿ ಒದಗಿಸಬೇಕು. @nps_trust @PFRDAOfficial#ಕನ್ನಡದಲ್ಲಿ_ಗ್ರಾಹಕ_ಸೇವೆ #ಕನ್ನಡ_ಅಭಿಮಾನಿ_ದಿನ #serveinmylanguage @kdabengaluru pic.twitter.com/dCYxDvETDP

— ವಿಕಾಸ್ ಹೆಗಡೆ | Vikas Hegde (@hegde_vikas) April 24, 2022

ಡಾ. ರಾಜ್ ಅವರು ಎಷ್ಟೇ ಎತ್ತರಕ್ಕೆ ಏರಿದರೂ ತಮಗೆ ಬದುಕು ಕಟ್ಟಿಕೊಟ್ಟ ಕನ್ನಡವನ್ನು ತಮ್ಮ ಕೊನೆ ಉಸಿರಿರುವವರೆಗೂ ಅತ್ಯಂತ ಗೌರವದಿಂದ ಕಂಡವರು ಕನ್ನಡಕ್ಕೆ ಕಿಂಚಿತ್ತು ಅವಮಾನವಾದರೂ ಸೆಟೆದು ನಿಂತವರು. ಇದು ನಮಗೆಲ್ಲರಿಗೂ ಮಾದರಿ, ಕನ್ನಡಕ್ಕೆ ಎಲ್ಲೆಡೆಯೂ ಗೌರವ ದಕ್ಕುವಂತೆ ಮಾಡುವುದೇ ನಮ್ಮ ಕರ್ತವ್ಯ #ಕನ್ನಡದಲ್ಲಿ_ಗ್ರಾಹಕ_ಸೇವೆ

— ಗಿರೀಶ್ ಕಾರ್ಗದ್ದೆ| Girish Kargadde (@girishkargadde) April 24, 2022

ಗೂಗಲ್ ಸೇರಿದಂತೆ ಹೊರದೇಶದ ಅದೆಷ್ಟೋ ಕಂಪನಿಗಳು ಕನ್ನಡದಲ್ಲಿ ಗ್ರಾಹಕ ಸೇವೆ ನೀಡಲು ಕ್ರಮ ಕೈಗೊಳ್ಳುತ್ತಿವೆ, ಆದರೆ ಭಾರತದ ಅದೆಷ್ಟೋ ಕಂಪನಿಗಳು ಎಲ್ಲಾ ಗ್ರಾಹಕರಿಗೆ ಇಂಗ್ಲೀಶ್/ಹಿಂದಿ ಬರುತ್ತೆ ಅನ್ನೋ ಭ್ರಮೆಯಲ್ಲಿವೆ#ಕನ್ನಡದಲ್ಲಿ_ಗ್ರಾಹಕ_ಸೇವೆ#ಅಭಿಮಾನಿ_ದಿನ

— ಅರುಣ್ ಜಾವಗಲ್ | Arun Javgal (@ajavgal) April 24, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X