ಐಟಿಐ ಕಾರ್ಖಾನೆಯ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಬಹಿರಂಗ ಪತ್ರ

ಬೆಂಗಳೂರು, ಎ.24: ‘ನಗರದ ಕೆ.ಆರ್.ಪುರಂ ಬಳಿ ಇರುವ ಕೇಂದ್ರ ಸರಕಾರ ಒಡೆತನದ ಭಾರತೀಯ ದೂರವಾಣಿ ಕೈಗಾರಿಕೆಯ(ಐಟಿಐ) ಆಡಳಿತ ಮಂಡಳಿಯು 80 ಕಾರ್ಮಿಕರನ್ನು ಕೆಲಸದಿಂದ ತೆಗೆದಿದ್ದು, ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಕಾರ್ಮಿಕರು ಸೇರಿದಂತೆ ವಕೀಲರು, ಪ್ರಾಧ್ಯಾಪಕರು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಶಾ ಅವರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ.
ವಜಾಗೊಂಡ 80 ಮಂದಿ ಕಾರ್ಮಿಕರು ಐಟಿಐ ಕಾರ್ಖಾನೆಯಲ್ಲಿ 3 ರಿಂದ 35 ವರ್ಷಗಳವರೆಗೆ ದುಡಿದಿದ್ದಾರೆ. ಈ ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ್ದು, ಹಲವಾರು ಮಹಿಳಾ ಕಾರ್ಮಿಕರಿದ್ದಾರೆ. ಡಿ.1ರಂದು ಕಾರ್ಮಿಕರನ್ನು ಕೆಲಸದಿಂದ ತೆಗೆದು, ಅವರ ಕುಟುಂಬಗಳನ್ನು ಬೀದಿಪಾಲು ಮಾಡಲಾಗಿದೆ. ಹಾಗಾಗಿ ಸಚಿವಾಲಯವು ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ಪುನಃ ಕೆಲಸ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Next Story





