ಯೆನೆಪೊಯ ಅಬ್ದುಲ್ಲಾ ಕುಂಞಿಯವರಿಗೆ ಗುಲ್ಬರ್ಗಾ ವಿವಿಯ ಗೌರವ ಡಾಕ್ಟರೇಟ್
40ನೇ ಘಟಿಕೋತ್ಸವದಲ್ಲಿ ಪ್ರದಾನ

ಮಂಗಳೂರು, ಎ.25: ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ, ಯೆನೆಪೊಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ, ಸಾಮಾಜಿಕ-ಧಾರ್ಮಿಕ ಧುರೀಣ ಯೆನೆಪೊಯ ಅಬ್ದುಲ್ಲಾ ಕುಂಞಿ ಅವರನ್ನು ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಿದೆ.
ವಿವಿಯ 39ನೇ ಮತ್ತು 40ನೇ ಘಟಿಕೋತ್ಸವವು ಜಂಟಿಯಾಗಿ ನಡೆಯಲಿದ್ದು, ತಲಾ ಮೂವರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಿದೆ. ಮಂಗಳೂರಿನ ಯೆನೆಪೊಯ ಅಬ್ದುಲ್ಲಾ ಕುಂಞಿಯವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅದ್ವಿತೀಯ ಸಾಧನೆಯನ್ನು ಪರಿಗಣಿಸಿ 40ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ.
1947ರ ನವೆಂಬರ್ 14ರಂದು ಕಾಸರಗೋಡಿನಲ್ಲಿ ಜನಿಸಿದ ಯೆನೆಪೊಯ ಅಬ್ದುಲ್ಲಾ ಕುಂಞಿ ಮಂಗಳೂರನ್ನು ಕರ್ಮಭೂಮಿಯನ್ನಾಗಿಸಿದ್ದರು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅವರು ಮೈಸೂರು ವಿವಿಯಿಂದ ಕಲಾ ವಿಭಾಗದಲ್ಲಿ ಪದವಿ ಪಡೆದರು.
ಇಸ್ಲಾಮಿಕ್ ಅಕಾಡಮಿ ಆಫ್ ಎಜುಕೇಶನ್‌ನ ಟ್ರಸ್ಟಿಯಾಗಿ, ಯೆನೆಪೊಯ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್‌ನ ಪ್ರಮೋಟರ್ ಆಗಿ, ಯೆನೆಪೊಯ ಮೊಯ್ದಿನ್ ಕುಂಞಿ ಮೆಮೋರಿಯಲ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿ, ಮಲ್‌ಜ-ಉಲ್-ಇಸ್ಲಾಮ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಅಧ್ಯಕ್ಷರಾಗಿ, ಬದ್ರಿಯಾ ಎಜುಕೇಶನಲ್ ಇನ್‌ಸ್ಟಿಟ್ಯೂಶನ್‌ನ ಉಪಾಧ್ಯಕ್ಷರಾಗಿ, ತಕ್ವಾ ಮುಕ್ತ ವಿಶ್ವವಿದ್ಯಾನಿಲಯದ ಅಧ್ಯಕ್ಷರಾಗಿ, ಪಿ.ಎ. ಎಜುಕೇಶನಲ್ ಟ್ರಸ್ಟ್‌ನ ಟ್ರಸ್ಟಿಯಾಗಿ, ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಅಧ್ಯಕ್ಷರಾಗಿ, ಯೆನೆಪೊಯ ಮೊಯ್ದಿನ್ ಕುಂಞಿ ಆ್ಯಂಡ್ ಕಂಪೆನಿಯ ಪಾಲುದಾರರನಾಗಿ, ಕೆನರಾ ವುಡ್ ಆ್ಯಂಡ್ ಪ್ಲೈವುಡ್ ಇಂಡಸ್ಟ್ರೀಸ್ ಲಿ.ನ. ಆಡಳಿತ ನಿರ್ದೇಶಕರಾಗಿ, ಇಂಡಿಯನ್ ವುಡ್ ಆ್ಯಂಡ್ ವುಡ್ ಪ್ರೊಡಕ್ಟ್‌ನ ಟ್ರಸ್ಟಿಯಾಗಿ, ಯೆನೆಪೊಯ ಸಾಮಿಲ್‌ನ ಪಾಲುದಾರರಾಗಿ, ಯೆನೆಪೊಯ ವಿನೀರ್ಸ್‌ನ ಸಂಯೋಜಕರಾಗಿ, ಯೆನೆಪೊಯ ಟ್ರಾನ್ಸ್ ಪೋರ್ಟ್ ಕಂಪೆನಿಯ ಪಾಲುದಾರರಾಗಿ, ಯೆನೆಪೊಯ ಹೊಟೇಲ್‌ನ ಪಾಲುದಾರರಾಗಿ, ಯೆನೆಪೊಯ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ ಪಾಲುದಾರರಾಗಿ, ಯೆನೆಪೊಯ ಎನರ್ಜಿ ಪ್ರೈ.ಲಿ. ಮತ್ತು ಎಸ್‌ಎಲ್‌ವಿ ಪವರ್ ಪ್ರೈ.ಲಿ.ನ ಅಧ್ಯಕ್ಷರಾಗಿ, ಯೆನೆಪೊಯ ಫುಟ್ಬಾಲ್ ಕ್ಲಬ್‌ನ ಪ್ರಧಾನ ಪೋಷಕರಾಗಿ, ಇಸ್ಲಾಮಿಕ್ ಟ್ರಸ್ಟ್‌ನ ಉಪಾಧ್ಯಕ್ಷರಾಗಿ, ಮಲ್‌ಜ-ಉಲ್-ಇಸ್ಲಾಮ್ ಓರ್ಪನೇಜ್‌ನ ಅಧ್ಯಕ್ಷರಾಗಿ, ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸ್ಜಿದ್‌ನ ಅಧ್ಯಕ್ಷರಾಗಿ, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಅಧ್ಯಕ್ಷರಾಗಿ, ಕರ್ನಾಟಕ ಮುಸ್ಲಿಂ ಜಮಾಅತ್‌ನ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಯೆನೆಪೊಯ ಅಬ್ದುಲ್ಲಾ ಕುಂಞಿ ಸೇವೆ ಸಲ್ಲಿಸುತ್ತಿದ್ದಾರೆ.
ಯೆನೆಪೊಯ ಅಬ್ದುಲ್ಲಾ ಕುಂಞಿಯವರು ಪ್ರಸಕ್ತ ಮಂಗಳೂರಿನ ವಾಸ್‌ಲೇನ್‌ನಲ್ಲಿ ಪತ್ನಿ ಪಿ.ಕೆ.ನಸ್ರೀನ್ ಅವರೊಂದಿಗೆ ವಾಸವಿದ್ದು, ಅವರ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಯೆನೆಪೊಯ ಸಮೂಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.







