ದ್ವಿತೀಯ ಪಿಯು ಅರ್ಥಶಾಸ್ತ್ರ ಪರೀಕ್ಷೆ: ರಾಜ್ಯಾದ್ಯಂತ 28 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು

ಬೆಂಗಳೂರು, ಎ.25: 2021-22ನೇ ಸಾಲಿನ ದ್ವಿತೀಯ ಪಿಯುಸಿಯ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಸೋಮವಾರ ನಡೆದಿದ್ದು, ಒಟ್ಟು 28,122 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.
ಅರ್ಥಶಾಸ್ತ್ರ ವಿಷಯದಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದ 3,65,839 ವಿದ್ಯಾರ್ಥಿಗಳ ಪೈಕಿ, 20,147 ವಿದ್ಯಾರ್ಥಿಗಳು, ಮರುಪರೀಕ್ಷೆ ತೆಗೆದುಕೊಂಡಿದ್ದ 21,749 ವಿದ್ಯಾರ್ಥಿಗಳ ಪೈಕಿ 2019 ವಿದ್ಯಾರ್ಥಿಗಳು ಹಾಗೂ ಖಾಸಗಿಯಾಗಿ ನೋಂದಣಿಯಾಗಿದ್ದ 25,005 ವಿದ್ಯಾರ್ಥಿಗಳ ಪೈಕಿ 5956 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ 3054, ತುಮಕೂರು 1940, ಮೈಸೂರು 1502, ಚಿತ್ರದುರ್ಗ ಜಿಲ್ಲೆಯಲ್ಲಿ 1298 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
Next Story





