ಚಿಕ್ಕಮಗಳೂರು | ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದಕ್ಕೆ ಹಲ್ಲೆ, ನಿಂದನೆ: ಆರೋಪ

ಸಾಂದರ್ಭಿಕ ಚಿತ್ರ- PTI
ಚಿಕ್ಕಮಗಳೂರು, ಎ.25: ಕಡೂರು ತಾಲೂಕು ವ್ಯಾಪ್ತಿಯ ಹುಲಿಕೆರೆ ಗ್ರಾಮಪಂಚಾಯತ್ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅಕ್ರಮಗಳನ್ನು ಮಾಹಿತಿಹಕ್ಕು ಅರ್ಜಿ ಮೂಲಕ ಪಡೆಯುತ್ತಿರುವುದನ್ನು ಸಹಿಸದ ಪಂಚಾಯತ್ ಕಚೇರಿ ಸಿಬ್ಬಂದಿಯೋರ್ವರು ತಮಗೆ ಅವಾಚ್ಯ ವಾಗಿ ನಿಂದಿಸಿ ಥಳಿಸಿದ್ದಾರೆ ಎಂದು ಮುಳ್ಳಪ್ಪ ಶೆಟ್ಟಿ ಎಂಬವರು ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಖರಾಯಪಟ್ಟಣದ ಹೋಬಳಿಯ ಹುಲಿಕೆರೆ ಗ್ರಾಮಪಂಚಾಯತ್ನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯೂ ಸೇರಿದಂತೆ ಅನೇಕ ಕಾಮಗಾರಿ ಹಾಗು ಮಂಜೂರಾತಿಯಲ್ಲಿ ಅಕ್ರಮ ನಡೆಯುತ್ತಿದ್ದು, ಅದನ್ನು ತಾವು ಮಾಹಿತಿ ಹಕ್ಕು ಅರ್ಜಿಗಳ ಮೂಲಕ ಮಾಹಿತಿ ಪಡೆಯುತ್ತಿರುವುದು ಮತ್ತು ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತಿರುವುದನ್ನು ಸಹಿಸದೆ ತಮ್ಮ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಕಳೆದ ತಿಂಗಳು ಅಂದರೆ ಮಾರ್ಚ್ ಎಂಟರಂದು ತಾವು ಹುಲಿಕೆರೆ ಪಂಚಾಯ್ತಿ ಕಛೇರಿಯಲ್ಲಿ ಮಹಿಳಾ ಸಿಬ್ಬಂದಿಯೋರ್ವರ ಬಳಿ ತಮ್ಮ ಮಾಹಿತಿ ಹಕ್ಕು ಅರ್ಜಿಯ ಬಗ್ಗೆ ಚರ್ಚಿಸುತ್ತಿದ್ದಾಗ ಮತ್ತೋರ್ವ ಸಿಬ್ಬಂದಿ ನೀಲಕಂಠಪ್ಪ ಎಂಬಾತ ಮಾಹಿತಿ ಕೇಳುತ್ತಿರುವುದು ಮತ್ತು ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತಿರುವ ಬಗ್ಗೆ ಅವಾಚ್ಯವಾಗಿ ನಿಂದಿಸಿ ತಮಗೆ ಥಳಿಸಿದ್ದು, ಈ ಬಗ್ಗೆ ಪೊಲೀಸು ಠಾಣೆಗೆ ದೂರು ನೀಡಿ ದರೂ ಆತನ ವಿರುದ್ಧ ಕ್ರಮ ತೆಗೆದು ಕೊಂಡಿಲ್ಲ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಹಿರಿಯ ಅಧಿ ಕಾರಿಗಳು ಪಂಚಾಯತಿಯಲ್ಲಿ ನಡೆಯು ತ್ತಿರುವ ಅಕ್ರಮ ಹಾಗು ಸಿಬ್ಬಂದಿಗಳ ಗೂಂಡಾಗಿರಿ ಬಗ್ಗೆ ಕಠಿಣ ಕ್ರಮ ತೆಗೆ ದುಕೊಳ್ಳಬೇಕೆಂದು ಅವರು ಒತ್ತಾ ಯಿಸಿದರು.







