ಸಚಿವ ಪ್ರಭು ಚವಾಣ್, ಸಂಕನೂರು ಬಳಿ ಸಾಕ್ಷ್ಯ ಕೇಳುವುದಿಲ್ಲವೇ?: ಗೃಹ ಸಚಿವರಿಗೆ ಶಾಸಕ ಪ್ರಿಯಾಂಕ್ ಖರ್ಗೆ ತಿರುಗೇಟು
ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ

ಬೆಂಗಳೂರು: ಸಿಐಡಿ ವಿಚಾರಣೆಗೆ ಹಾಜರಾಗದ್ದಕ್ಕೆ 'ಪಲಾಯನವಾದಿ' ಎಂದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಶಾಸಕ ಪ್ರಿಯಾಂಕ್ ಖರ್ಗೆ ತಿರುಗೇಟು ನಿಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪಿಎಸ್‌ಐ ಅಕ್ರಮದ ಬಗ್ಗೆ ತಮ್ಮ ಸಂಪುಟ ಸಹೋದ್ಯೋಗಿ, ಪ್ರಭು ಚವಾಣ್ ಹಾಗೂ ಬಿಜೆಪಿ ಮುಖಂಡ ಸಂಕನೂರು ಫೆಬ್ರವರಿ, ಮಾರ್ಚ್ ನಲ್ಲಿಯೇ ಪತ್ರ ಬರೆದಿದ್ದಾರೆ. ನನ್ನಲ್ಲಿ ದಾಖಲೆಗಳನ್ನು ನೀಡಲು ಕೇಳುತ್ತಿರುವ ಗೃಹ ಸಚಿವರು ಅವರ ಬಳಿ ಸಾಕ್ಷ್ಯ ಕೇಳುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸಚಿವ ಪ್ರಭು ಚವಾಣ್ ಹಾಗೂ ಸಂಕನೂರ್ ಅವರು ಬರೆದ ಪತ್ರವನ್ನು ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ಕಳೆದ ಫೆಬ್ರವರಿ ಮತ್ತು ಮಾರ್ಚ್‌ನಲ್ಲೇ ಅವರು ಬರೆದ ಪತ್ರಕ್ಕೆ ಆಗಲೇ ಏಕೆ ತನಿಖೆಗೆ ಆದೇಶಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
Sri @JnanendraAraga is asking me to produce proof for the #PSIscam, why doesn’t he ask his colleagues Sri @PrabhuChavanBJP & Sri Sankanoor who wrote about #PSIscam in Feb & March.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 25, 2022
Why didn’t he order an enquiry when a Minister wrote to @CMofKarnataka ? What was he scared of? https://t.co/Xzf1tA3jSa pic.twitter.com/RNO2JytZ5G







