ದಿಲ್ಲಿ ಮುಖ್ಯಮಂತ್ರಿ ನಿವಾಸದ ಮೇಲೆ ದಾಳಿ ಪ್ರಕರಣ: ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ, ಎ 25: ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ನಿವಾಸದ ಮೇಲಿನ ದಾಳಿ ತಡೆಯಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳದ ದಿಲ್ಲಿ ಪೊಲೀಸರನ್ನು ದಿಲ್ಲಿ ಉಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಬಿವೈಜೆಎಂಗೆ ಸೇರಿದ 200ಕ್ಕೂ ಅಧಿಕ ಪ್ರತಿಭಟನಕಾರರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಹೊರಗಿನ ಬ್ಯಾರಿಕೇಡ್ಗಳನ್ನು ಮುರಿದು ಒಳನುಗ್ಗಿದ ಹಾಗೂ ಮುಖ್ಯ ಗೇಟ್ ಅನ್ನು ಹಾನಿಗೊಳಿಸಿದ ಇತ್ತೀಚೆಗಿನ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಉಚ್ಚ ನ್ಯಾಯಾಲಯ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ‘‘ನೀವು ಬ್ಯಾರಿಕೇಡ್ಗಳನ್ನು ಅಳವಡಿಸಿದಿರಿ, ಪ್ರತಿಭಟನೆಯ ಕುರಿತು ನೀವು ಸೂಚನೆಯನ್ನು ಸ್ವೀಕರಿಸಿದ್ದೀರಿ. ಹಾಗಾದರೆ, ನೀವು ಅಲ್ಲಿ ಯಾವ ರೀತಿಯ ಬಂದೋಬಸ್ತ್ ಏರ್ಪಡಿಸಿರುವುದು?’’ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಪೊಲೀಸರನ್ನು ಪ್ರಶ್ನಿಸಿತು.
Next Story





