ಮಂಗಳೂರು ಬಿಷಪ್ ಹೌಸ್‌ನ ನೂತನ ಸಾರ್ವಜನಿಕ ಸಂಪರ್ಕ ಕಚೇರಿಯ ಉದ್ಘಾಟನೆ

ಮಂಗಳೂರು, ಎ.25: ಮಂಗಳೂರು ಧರ್ಮಪ್ರಾಂತದ ಬಿಷಪ್ ಹೌಸ್‌ನಲ್ಲಿ ಸ್ಥಾಪಿಸಲ್ವಟ್ಟ ಸಾಮಾಜಿಕ ಸಂಪರ್ಕ ಕಚೇರಿಯನ್ನು ಮಂಗಳೂರಿನ ಬಿಷಪ್ ಅ.ವಂ ಪೀಟರ್ ಪಾವ್ಲೃ್ ಸಲ್ಡಾನ್ಹಾ ಸೋಮವಾರ ಪ್ರಾರ್ಥನೆಯ ಮೂಲಕ ಅಶಿರ್ವಚಿಸಿ ಉದ್ಘಾಟಿಸಿದರು.
ಈ ವೇಳೆ ಪೊಂಟಿಫಿಕಲ್ ಮಿಶನ್ ಸಂಸ್ಥೆಗಳ ನವೀಕೃತ ಕಚೇರಿಯ ಆಶೀರ್ವಚನೆ ಮತ್ತು ಉದ್ಘಾಟನೆಯನ್ನು ನೆರವೇರಿಸಲಾಯಿತು.
ಧರ್ಮಪ್ರಾಂತದ ಶ್ರೇಷ್ಠ ಗುರುಗಳಾದ ಅ.ವಂ ಮೊನ್ಸಿಜ್ಞೊರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ, ಧರ್ಮ ಪ್ರಾಂತದ ಕುಲಪತಿ ವಂ.ಡಾ. ವಿಕ್ಟರ್ ಜಾರ್ಜ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂ.ಡಾ.ಜೆ.ಬಿ. ಸಲ್ಡಾನ್ಹಾ ಮತ್ತು ರೊಯ್ ಕ್ಯಾಸ್ಟೆಲಿನೊ, ಪೊಂಟಿಫಿಕಲ್ ಮಿಶನ್ ಸಂಸ್ಥೆಗಳ ನಿರ್ದೆಶಕ ವಂ.ರೂಪೇಶ್ ತಾವ್ರೊ, ಧರ್ಮಪ್ರಾಂತದ ಎಸ್ಟೇಟ್ ಮ್ಯಾನೇಜರ್ ವಂ. ಮ್ಯಾಕ್ಸಿಮ್ ರೊಸಾರಿಯೊ, ರಾಕ್ಣೊ ವಾರಪತ್ರಿಕೆಯ ಸಂಪಾದಕ ವಂ.ವಲೇರಿಯನ್ ಫೆರ್ನಾಂಡಿಸ್, ಬಿಷಪ್ ಕಾರ್ಯದರ್ಶಿ ವಂ. ರೋಹನ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.
Next Story





