ಮಲ್ಪೆ ಬೀಚ್‌ನಲ್ಲಿ ಪೊಲೀಸರ ಸೊತ್ತು ಕಳವು

ಮಲ್ಪೆ, ಎ.25: ಮಲ್ಪೆ ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದ ಪೊಲೀಸರ ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಎ.24ರಂದು ಮಧ್ಯಾಹ್ನ ವೇಳೆ ನಡೆದಿದೆ.
ಬೆಂಗಳೂರು ಕೆಎಸ್‌ಐಎಸ್‌ಎಫ್ ಒಂದನೇ ಬೆಟಾಲಿಯನ್ ಪೊಲೀಸ್ ನಿರೀಕ್ಷಕ ಮಂಜುನಾಥ, ಚಂದ್ರಶೇಖರ, ಶರಣಬಸಪ್ಪ, ಚಿರಂಜೀವಿ, ತ್ರಿಣೇಶ ಎಂಬವರು ಎ.24ರಂದು ಮಧ್ಯಾಹ್ನ ಮಲ್ಪೆ ಬೀಚ್‌ಗೆ ಬಂದಿದ್ದರು. ಅಲ್ಲಿ ತಮ್ಮ ಬ್ಯಾಗ್ ಸಹಿತ ಸೊತ್ತುಗಳನ್ನು ಸಮುದ್ರ ಕಿನಾರೆಯಲ್ಲಿ ಇಟ್ಟು ಈಜಾಡಲು ಹೋಗಿದ್ದರು. ವಾಪಾಸ್ಸು ಬಂದು ನೋಡಿದಾಗ ಈ ವಸ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ.
ಮೂರು ಕಾಲೇಜು ಬ್ಯಾಗ್, 4 ಸೆಲ್ಪೋನ್, 5 ವಾಲೆಟ್ಸ್, ಎಟಿಎಂ ಕಾರ್ಡ್, ಆದಾರ್‌ಕಾರ್ಡ್, ಪಾನ್ ಕಾರ್ಡ್, ಮತದಾರ ಗುರುತಿನ ಚೀಟಿ, ಡಿಎಲ್, ಚಂದ್ರಶೇಖರರ ಪೊಲೀಸ್ ಐಡಿ ಕಾರ್ಡ್ ಕಳ್ಳತನವಾಗಿದ್ದು, ಇವುಗಳ ಒಟ್ಟು ಮೌಲ್ಯ 70,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
Next Story