56 ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು, ಎ.25: ನಾನಾ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳೂ ಸೇರಿದಂತೆ 56 ಸಿವಿಲ್ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಕೆಗೆ ಮೇ 23 ಕಡೆಯ ದಿನವಾಗಿದೆ. ಹೆಚ್ಚಿನ
ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ನೇಮಕ ವಿಧಾನ ಮತ್ತಿತರ ವಿವರಗಳು ವೆಬ್‍ಸೈಟ್‍ನಲ್ಲಿ ದೊರಕುತ್ತದೆ. ವೇತನ 44,770 ರೂ. ಎಲ್ಲ ನೇಮಕ ಪ್ರಕ್ರಿಯೆಯಂತೆ ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ, ಸಂದರ್ಶನ ವಿಧಾನದಲ್ಲಿ ನೇಮಕ ನಡೆಯಲಿದೆ.
Next Story





