ಗುಜರಾತ್: 1,439 ಕೋ.ರೂ. ಮೌಲ್ಯದ ಹೆರಾಯಿನ್ ಪತ್ತೆ
ಅಹ್ಮದಾಬಾದ್, ಎ 25: ಗುಜರಾತ್‌ನ ಕಾಂಡ್ಲಾ ಬಂದರಿನ ಸಮೀಪ ಇದ್ದ ಕಂಟೈನರ್‌ನಿಂದ 1,439 ಕೋಟಿ ರೂಪಾಯಿ ಮೌಲ್ಯದ 205.6 ಕಿ.ಗ್ರಾಂ ಹೆರಾಯಿನ್ ಅನ್ನು ಕಂದಾಯ ಬೇಹುಗಾರಿಕೆ ನಿರ್ದೇಶನಾಲಯ ವಶಪಡಿಸಿಕೊಂಡಿದೆ ಎಂದು ಡಿಆರ್‌ಐ ಸೋಮವಾರ ತಿಳಿಸಿದೆ. ಅಲ್ಲದೆ, ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿ ಇದಕ್ಕೆ ಸಂಬಂಧಿಸಿ ಪಂಜಾಬ್ನಿಂದ ಆಮದುದಾರನೋರ್ವನನ್ನು ಬಂಧಿಸಲಾಗಿದೆ ಎಂದು ಅದು ತಿಳಿಸಿದೆ.
ಕಳೆದ ವರ್ಷ ಸೆಪ್ಟಂಬರ್ ಹಾಗೂ ಅಕ್ಟೋಬರ್ ನಡುವೆ ಇರಾನ್‌ನಿಂದ ಕಾಂಡ್ಲಾ ಬಂದರಿಗೆ ಆಗಮಿಸಿದ 17 ಕಂಟೈನರ್‌ಗಳಲ್ಲಿ ಒಂದು ಕಂಟೈನರ್‌ನಲ್ಲಿ ಹೆರಾಯಿನ್ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ರಾಜ್ಯದ ಕಚ್ ಜಿಲ್ಲೆಯಲ್ಲಿರುವ ಕಾಂಡ್ಲಾ ಬಂದರಿನ ಸಮೀಪದ ಕಂಟೈನರ್ ಸ್ಟೇಷನ್‌ನ ಮೇಲೆ ನಡೆಸಿದ ದಾಳಿಯ ಬಳಿಕ 1,300 ಕೋಟಿ ರೂಪಾಯಿ ಮೌಲ್ಯದ 200 ಕಿ.ಗ್ರಾಂ.ಗೂ ಅಧಿಕ ಹೆರಾಯಿನ್ ಅನ್ನು ಎಟಿಎಸ್‌ನೊಂದಿಗಿನ ಜಂಟಿ ಕಾರ್ಯಾಚರಣೆಯಲ್ಲಿ ಡಿಆರ್ಐ ವಶಪಡಿಸಿಕೊಂಡಿದೆ ಎಂದು ಗುಜರಾತ್ ಉಗ್ರ ನಿಗ್ರಹ ದಳ ಎಪ್ರಿಲ್ 21ರಂದು ಘೋಷಿಸಿತ್ತು.
Next Story





