Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರವಿಯವರು ‘ಕುರ್‌ಆನ್’ ಹೆಸರಲ್ಲಿ...

ರವಿಯವರು ‘ಕುರ್‌ಆನ್’ ಹೆಸರಲ್ಲಿ ಏನನ್ನೆಲ್ಲಾ ಅಡಗಿಸಿದರು?

ಚಂದ್ರಹಾಸ, ಬೋಳಾರಚಂದ್ರಹಾಸ, ಬೋಳಾರ26 April 2022 10:35 AM IST
share
ರವಿಯವರು ‘ಕುರ್‌ಆನ್’ ಹೆಸರಲ್ಲಿ ಏನನ್ನೆಲ್ಲಾ  ಅಡಗಿಸಿದರು?

ಧರ್ಮ ದೂಷಣೆ ನಡೆದೊಡನೆ ಕೆಲವರು ಅದನ್ನು ಖಂಡಿಸುತ್ತಾರೆ ಕೆಲವರು ಸ್ವಾಗತಿಸುತ್ತಾರೆ. ಒಟ್ಟಿನಲ್ಲಿ ಜನರು ಬೇರೆಲ್ಲವನ್ನೂ ಮರೆತು ಬಹುಕಾಲ ಇದೇ ಚರ್ಚೆಯಲ್ಲಿ ತಲ್ಲೀನರಾಗಿ ಬಿಡುತ್ತಾರೆ. ಇದು ಈ ನಾಡಿನಲ್ಲಿ ಪದೇ ಪದೇ ಸಾಬೀತಾಗಿರುವ ಸತ್ಯವಲ್ಲವೇ? ಅನೇಕರು ಅನೇಕ ಬಾರಿ ಮಾಡಿರುವ ಈ ಅಪರಾಧವನ್ನು ರವಿಯವರು ಮಾಡಿದ್ದರಲ್ಲಿ ವಿಶೇಷವೇನಿದೆ?.

ಇತ್ತೀಚೆಗೆ ಸಿ.ಟಿ. ರವಿ ಎಂಬ ಕರ್ನಾಟಕದ ಒಬ್ಬ ನಿರುದ್ಯೋಗಿ ಹತಾಶ ಪುಢಾರಿ, ಮಾಧ್ಯಮದವರ ಮುಂದೆ ‘ಕುರ್‌ಆನ್’ ಕುರಿತು ಆಡಿರುವ ಕೆಲವು ಮಾತುಗಳ ಬಗ್ಗೆ ಹಲವರು ಅಸಮಾಧಾನ ಪ್ರಕಟಿಸಿದ್ದಾರೆ. ರವಿಯವರ ಜ್ಞಾನ ಮತ್ತು ಚಾರಿತ್ರದ ಕುರಿತು ಬಲ್ಲವರು ಯಾರೂ ಧರ್ಮ, ಅಧ್ಯಾತ್ಮ ಇತ್ಯಾದಿ ವಿಷಯಗಳಲ್ಲಿ ಅವರಿಂದ ಯಾವುದೇ ಮಾರ್ಗದರ್ಶನ ವನ್ನು ನಿರೀಕ್ಷಿಸುವುದಿಲ್ಲ. ಆದರೂ ಅವರೇಕೆ ‘ಕುರ್‌ಆನ್’ ಕುರಿತು ಅಷ್ಟೊಂದು ಬೇಜವಾಬ್ದಾರಿಯುತವಾಗಿ ಮಾತನಾಡಿದರು? ಅವರೇನು ‘ಕುರ್‌ಆನ್’ನ ವಿರೋಧಿಯೇ? ಅವರೇನು ಮುಸಲ್ಮಾನರ ಶತ್ರುವೇ? ಎಂದು ಹಲವರು ಅಚ್ಚರಿ ಪಡುತ್ತಿದ್ದಾರೆ. ನಿಜವಾಗಿ ಅವರು ಮನಸಾರೆ ಮುಸ್ಲಿಮ್ ವಿರೋಧಿಯೇನೂ ಅಲ್ಲ. ಮುಸ್ಲಿಮ್ ದೂಷಣೆಯು ಅವರ ಅನಿವಾರ್ಯತೆಯಾಗಿದೆ. ಜನರ ಮಧ್ಯೆ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಅವರ ಬಳಿ ಬೇರೆ ಯಾವುದೇ ದಾರಿ ಉಳಿದಿಲ್ಲವಾದ್ದರಿಂದ ಅವರು ಈ ರೀತಿ ಮುಸ್ಲಿಮ್ ದೂಷಣೆ ಮತ್ತು ‘ಕುರ್‌ಆನ್’ ದೂಷಣೆಯ ನೀಚಕಾಯಕಕ್ಕೆ ಇಳಿದಿದ್ದಾರೆ ಎನ್ನುವುದಕ್ಕೆ ಡಜನ್‌ಗಟ್ಟಲೆ ಪುರಾವೆಗಳಿವೆ. ಉದಾ;

ಸ್ವಲ್ಪ ಊಹಿಸಿ ನೋಡಿ. ನಾಡಿನ ಜನತೆಯ ಬದುಕನ್ನು ನರಕವಾಗಿಸಿರುವ ಭಾರೀ ಬೆಲೆ ಏರಿಕೆ, ಲಗಾಮಿಲ್ಲದ ಭ್ರಷ್ಟಾಚಾರ, ಘೋರ ದುರಾಡಳಿತ, ವ್ಯಾಪಕ ನಿರುದ್ಯೋಗದಂತಹ ಸಮಸ್ಯೆಗಳ ಬಗ್ಗೆ ವಿವಿಧ ವಲಯಗಳಿಂದ ಹರಿದು ಬರುತ್ತಿರುವ ನೂರಾರು ಪ್ರಶ್ನೆಗಳಿಗೆ ರವಿಯವರ ಬಳಿ ಏನಾದರೂ ಉತ್ತರ ಉಂಟೇ? ಯಾವ ಉತ್ತರವೂ ಇಲ್ಲವೆಂದ ಮೇಲೆ ಮುಸ್ಲಿಮ್ ದೂಷಣೆ ಅವರ ಅನಿವಾರ್ಯತೆಯಲ್ಲವೇ?.

ಭಾರತದ ಅಧಿಕೃತ ಗಡಿಯೊಳಗಿನ 38,000 ಚದರ ಕಿ.ಮೀ. ಪ್ರದೇಶವು ಚೀನಾ ದೇಶದ ವಶದಲ್ಲಿದೆ ಎಂದು ಇತ್ತೀಚೆಗಷ್ಟೇ ಸರಕಾರವೇ ಸಂಸತ್ತಿನಲ್ಲಿ ತಿಳಿಸಿದೆ. ಪ್ರಸ್ತುತ ಆಕ್ರಮಿತ ಪ್ರದೇಶವನ್ನು ಮತ್ತೆ ಭಾರತದ ಅಧೀನಕ್ಕೆ ತರುವುದಕ್ಕೆ ನಮ್ಮ ವೀರ ಶೂರ ಮೋದಿ ಸರಕಾರ ಏನು ಮಾಡುತ್ತಿದೆ? ಎಂದು ಅಲ್ಲಲ್ಲಿ ಜನರು ರವಿ ಮತ್ತವರ ದ್ವೇಷಭಕ್ತ ಪಾಳಯದವರನ್ನು ಪ್ರಶ್ನಿಸುತ್ತಲೇ ಇರುತ್ತಾರೆ. ರವಿಯವರು ಈ ಪ್ರಶ್ನೆಗೆ ಯಾವುದೇ ಉತ್ತರ ನೀಡುವ ಸ್ಥಿತಿಯಲ್ಲಿಲ್ಲ ಎಂಬುದು ವ್ಯಕ್ತ. ಆದ್ದರಿಂದ ಅವರು ಮುಸ್ಲಿಮ್ ದೂಷಣೆಯ ಅಸ್ತ್ರ ಬಳಸಿ ಜೀವ ಉಳಿಸಿಕೊಂಡರೆ ಅದರಲ್ಲಿ ತಪ್ಪೇನಿದೆ? ಅಲ್ಲವೇ?. ರವಿ ಮತ್ತವರ ಪರಿವಾರದವರು, ನಾವೀಗ ವಿಶ್ವಗುರು ಗಳಾಗಿ ಬಿಟ್ಟಿದ್ದೇವೆ, ಜಗತ್ತೆಲ್ಲಾ ನಮ್ಮನ್ನು ‘ವಿಶ್ವಗುರು’ ಎಂದೇ ಗುರುತಿಸುತ್ತಿದೆ- ಎಂದೆಲ್ಲಾ ಮಕ್ಕಳು, ವಿದ್ಯಾರ್ಥಿಗಳೆನ್ನದೆ ಎಲ್ಲರನ್ನೂ ನಂಬಿಸಿದ್ದಾರೆ. ಇದೀಗ ಅವರೆಲ್ಲ, ಕಳೆದ ಒಲಿಂಪಿಕ್ಸ್‌ನಲ್ಲಿ ಆ ನಮ್ಮ ನೆರೆಯ ಚೀನಾ 38 ಸ್ವರ್ಣ ಪದಕಗಳ ಸಹಿತ ಒಟ್ಟು 88 ಪದಕಗಳನ್ನು ಗೆದ್ದಾಗ ಅವರ ಮುಂದೆ ವಿಶ್ವಗುರುಗಳಾದ ನಾವು ಕೇವಲ ಒಂದು ಸ್ವರ್ಣಪದಕ ಸಹಿತ ಒಟ್ಟು ಕೇವಲ 7 ಪದಕಗಳನ್ನು ಗಳಿಸಿದ ಹೀನಾಯ ಸ್ಥಿತಿಗೆ ಕಾರಣವೇನು ಎಂಬ ತೀಕ್ಷ್ಣ ಪ್ರಶ್ನೆ ಕೇಳುತ್ತಿದ್ದಾರೆ. ಅವರಿಗೆಲ್ಲಾ ಅದಕ್ಕೆಲ್ಲಾ ನೆಹರೂ ಕಾರಣ ಅಥವಾ ನೀವು ಚೀನಾ ದೇಶಕ್ಕೆ ಹೊರಟು ಹೋಗಿ ಎಂಬ ಉತ್ತರ ಕೊಟ್ಟರೆ ಅವರೇನು ಸುಮ್ಮನಿರುತ್ತಾರೆಯೇ? ಅವರನ್ನು ಬಾಯಿ ಮುಚ್ಚಿಸಲು ಅನಿವಾರ್ಯವಾಗಿ ರವಿಯವರು ‘ಕುರ್‌ಆನ್’ ಅನ್ನು ಅಸ್ತ್ರವಾಗಿ ಬಳಸಿದ್ದಾರೆ. ‘ಕುರ್‌ಆನ್’ ಅನ್ನು ದೂಷಿಸಿದರೆ ಜನರು ಬೇರೆಲ್ಲ ಮರೆತು ‘ಕುರ್‌ಆನ್’ ಕುರಿತು ಚರ್ಚಿಸಲು ಆರಂಭಿಸುತ್ತಾರೆ ಎಂಬುದು ಅವರ ಲೆಕ್ಕಾಚಾರ. ಅವರ ಈ ಸಂದಿಗ್ಧ ಸನ್ನಿವೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕಲ್ಲವೇ?.

 ಕೆಲವು ಅತಿ ಶ್ರೀಮಂತರು ಈ ಬಡ ದೇಶದ ಬ್ಯಾಂಕ್‌ಗಳನ್ನು ದೋಚಿ ಪ್ರತಿವರ್ಷ ಲಕ್ಷಾಂತರ ಕೋಟಿ ರೂ.ಯನ್ನು ವಿದೇಶಗಳಿಗೆ ಸಾಗಿಸುತ್ತಿದ್ದಾರೆಂಬುದು ಜನತೆಯ ಗಮನಕ್ಕೆ ಬಂದಿದೆ. ದೇಶದಲ್ಲಿ ಕೆಲವೇ ಮಂದಿ ಶ್ರೀಮಂತರ ಸಂಪತ್ತು ಸಾವಿರಾರು ಪಟ್ಟು ಹೆಚ್ಚುತ್ತಿರುವುದು ಮತ್ತು ಅದೇ ವೇಳೆ ದೇಶದ ಬಹುಸಂಖ್ಯಾತ ಬಡವರ ಆದಾಯಕ್ಕೆ ಕತ್ತರಿ ಬೀಳುತ್ತಿರುವುದು ಜನರನ್ನು ಹುಚ್ಚೆಬ್ಬಿಸುತ್ತಿದೆ. ಇಂತಹ ಸನ್ನಿವೇಶದಲ್ಲೂ ಎಲ್ಲ ಆರ್ಥಿಕ ನೀತಿಗಳನ್ನು ಬಡವರಿಗೆ ವಿರುದ್ಧವಾಗಿ ಮತ್ತು ಅತಿ ಶ್ರೀಮಂತರಿಗೆ ಪೂರಕವಾಗಿ ತಿದ್ದುತ್ತಿರುವ ತಮ್ಮ ಆಪ್ತರ ಸರಕಾರದ ಬಗ್ಗೆ ಜನತೆಗೆ ಏನಾದರೂ ಸಮಜಾಯಿಷಿ ನೀಡಲು ರವಿಯವರ ಜನ್ಮದಲ್ಲಿ ಸಾಧ್ಯವೇ? ಆದ್ದರಿಂದ ‘ಕುರ್‌ಆನ್’ ದೂಷಣೆಯಲ್ಲಿ ಆಶ್ರಯ ಹುಡುಕಲೆತ್ನಿಸಿದ ಅವರ ಆರೋಗ್ಯದ ಬಗ್ಗೆ ಸಹಾನುಭೂತಿ ಪ್ರಕಟಿಸಿ ಅವರನ್ನು ಕ್ಷಮಿಸುವುದೇ ಲೇಸಲ್ಲವೇ?.

 ರವಿಯವರು ಬಾಂಬ್ ಸ್ಫೋಟಗಳನ್ನು ಜನರು ಓದುವ ಗ್ರಂಥದ ಜೊತೆ ಜೋಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಇತ್ತೀಚೆಗಷ್ಟೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಸಿಕ್ಕಿ ಬಿದ್ದು ಶಿಕ್ಷೆಗೊಳಗಾದ ಆದಿತ್ಯ ರಾವ್ ಎಂಬ ಭಯೋತ್ಪಾದಕ ಯಾವೆಲ್ಲಾ ಪುಸ್ತಕಗಳನ್ನು ಓದಿ ಬೆಳೆದಿದ್ದನೆಂಬ ಬಗ್ಗೆ ಜನರಿಗೆ ಕುತೂಹಲವಿದೆ. ಈ ಪ್ರಶ್ನೆಯಿಂದ ಮೈತಪ್ಪಿಸಿಕೊಳ್ಳುವುದಕ್ಕಾಗಿ ಬಡ ರವಿಯವರು ‘ಕುರ್‌ಆನ್’ ದೂಷಣೆಯಲ್ಲಿ ಆಶ್ರಯ ಹುಡುಕಿದ್ದರೆ, ಅದೊಂದು ಕರುಣಾಜನಕ ಸನ್ನಿವೇಶವಲ್ಲವೇ?. ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿ ಸಿಕ್ಕಿ ಬಿದ್ದಿದ್ದ ದೇಶದ್ರೋಹಿ ಶ್ರೀ ರಾಮ ಸೇನೆಯವರು ಇಂದು ರಾಜ್ಯದಲ್ಲಿ ಹಲವೆಡೆ ರಾಜಾರೋಷವಾಗಿ ತಿರುಗಾಡುತ್ತಾ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಕುರಿತು ಜನತೆಗೆ ತುಂಬಾ ಆಕ್ರೋಶವಿದೆ. ಜನರು ಈ ಕುರಿತು ಪ್ರಶ್ನಿಸಿದರೆ ತನ್ನ ಬತ್ತಳಿಕೆಯಲ್ಲಿ ಯಾವುದೇ ಉತ್ತರ ಇಲ್ಲ ಎಂಬ ಪ್ರಜ್ಞೆ ರವಿಯವರಿಗಿದೆ. ಆದ್ದರಿಂದ ಅವರು ಮುಸ್ಲಿಮರನ್ನು ಕೆರಳಿಸುವ ಹೇಳಿಕೆ ನೀಡಿದರೆ ಜನರು ಪ್ರಸ್ತುತ ವಿಧ್ವಂಸಕ ಕೃತ್ಯಗಳನ್ನು ಮರೆತು ಬಿಡುತ್ತಾರೆ ಎಂದು ಲೆಕ್ಕ ಹಾಕಿರಬಹುದು. ಕೃತ್ಯ ತಪ್ಪೇ ಆದರೂ ಅವರ ಲೆಕ್ಕಾಚಾರ ಸರಿ ತಾನೇ? ಧರ್ಮ ದೂಷಣೆ ನಡೆದೊಡನೆ ಕೆಲವರು ಅದನ್ನು ಖಂಡಿಸುತ್ತಾರೆ ಕೆಲವರು ಸ್ವಾಗತಿಸುತ್ತಾರೆ. ಒಟ್ಟಿನಲ್ಲಿ ಜನರು ಬೇರೆಲ್ಲವನ್ನೂ ಮರೆತು ಬಹುಕಾಲ ಇದೇ ಚರ್ಚೆಯಲ್ಲಿ ತಲ್ಲೀನರಾಗಿ ಬಿಡುತ್ತಾರೆ. ಇದು ಈ ನಾಡಿನಲ್ಲಿ ಪದೇ ಪದೇ ಸಾಬೀತಾಗಿರುವ ಸತ್ಯವಲ್ಲವೇ? ಅನೇಕರು ಅನೇಕ ಬಾರಿ ಮಾಡಿರುವ ಈ ಅಪರಾಧವನ್ನು ರವಿಯವರು ಮಾಡಿದ್ದರಲ್ಲಿ ವಿಶೇಷವೇನಿದೆ?. ನಮ್ಮ ಕರ್ನಾಟಕರಾಜ್ಯದಲ್ಲಿ ಕಳೆದ ವರ್ಷ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರನ್ನು ಗುರಿಯಾಗಿಸಿ ನಡೆಸಲಾದ ಅಪರಾಧ ಪ್ರಕರಣಗಳಲ್ಲಿ ಹಿಂದಿನ ವರ್ಷಕ್ಕಿಂತ ಶೇ.54ರಷ್ಟು ಹೆಚ್ಚಳವಾಗಿದ್ದು 2,300ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನಸಂಖ್ಯೆ ಶೇ.25ರಷ್ಟಿದೆ. ಆ ವರ್ಗದ ಮೇಲೆ ಇಷ್ಟೊಂದು ಅನ್ಯಾಯ ನಡೆಯುವುದನ್ನು ತಡೆಯಲು ನೀವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೇಕೆ? ಎಂದು ಅನೇಕರು ರವಿ ಮತ್ತವರ ಪಕ್ಷದವರನ್ನು ಅಲ್ಲಲ್ಲಿ ಪ್ರಶ್ನಿಸುತ್ತಿದ್ದಾರೆ. ಅವರಿಗೆ ಏನು ಉತ್ತರ ನೀಡಬೇಕೆಂಬುದು ರವಿಯವರಿಗೆ ತೋಚುತ್ತಿಲ್ಲ. ಕೊನೆಗೆ ಅವರು ‘ಕುರ್‌ಆನ್’ ದೂಷಣೆಯ ಪ್ರಯೋಗಕ್ಕೆ ಇಳಿದು ಬಿಟ್ಟರು. ಇದು ಅವರ ಅನಿವಾರ್ಯತೆಯಾಗಿತ್ತು ಎಂಬುದನ್ನು ಗಮನಿಸಿದರೆ ಅವರ ಕುರಿತು ರೋಷಕ್ಕಿಂತ ಹೆಚ್ಚು ಅನುಕಂಪ ಉಕ್ಕುವುದಿಲ್ಲವೇ?. ಭಕ್ತರ ಸರಕಾರದ ಮಂತ್ರಿಗಳು, ಪ್ರತಿಯೊಂದು ವ್ಯವಹಾರಕ್ಕೆ ಗುತ್ತಿಗೆ ದಾರರಿಂದ ಶೇ.40ರಷ್ಟು ಕಮಿಷನ್ ಪಡೆಯುತ್ತಾರೆ, ಕಮಿಷನ್ ತಿಂದ ಬಳಿಕವೂ ಸರಿಯಾಗಿ ಬಿಲ್ ಪಾವತಿ ಮಾಡದೆ ಗುತ್ತಿಗೆ ದಾರರನ್ನು ಸತಾಯಿಸುತ್ತಿದ್ದಾರೆ ಎಂಬಿತ್ಯಾದಿ ಗಂಭೀರ ಆರೋಪಗಳು ಇತ್ತೀಚೆಗೆ ಬಹಳ ವ್ಯಾಪಕವಾಗಿ ಕೇಳಿ ಬಂದಿವೆ. ಈ ಮಧ್ಯೆ, ಮಠ ಮಂದಿರಗಳಿಗೆ ನೀಡುವ ಅನುದಾನದಲ್ಲೂ ಮಂತ್ರಿಗಳು ಶೇ.30ರಷ್ಟು ಕಮಿಷನ್ ತಿನ್ನುತ್ತಿದ್ದಾರೆಂಬ ಆಘಾತಕಾರಿ ಆರೋಪವು ಬಹಳ ಜವಾಬ್ದಾರಿಯುತವಾದ ವಲಯಗಳಿಂದ ಕೇಳಿ ಬಂದಿದ್ದು ರವಿಯವರ ಪಕ್ಷ, ಸರಕಾರ ಮತ್ತು ಪರಿವಾರದ ಮಾನವೆಲ್ಲ ಮೂರು ಕಾಸಿಗೆ ಹರಾಜಾಗಿದೆ. ಇಂತಹ ಸನ್ನಿವೇಶದಲ್ಲಿ ಅವರು ಜನರ ಗಮನ ಬೇರಡೆ ಸೆಳೆಯಲು ‘ಕುರ್‌ಆನ್’ ದೂಷಣೆಯ ಹೀನ ಕೃತ್ಯಕ್ಕೆ ಇಳಿದಿದ್ದರೆ, ಅದು ಅವರ ಪಾಲಿನ ಒಂದು ಹತಾಶ ಸನ್ನಿವೇಶವೆಂದು ನಂಬಿ ಅದನ್ನು ಕಡೆಗಣಿಸುವುದೇ ಜಾಣತನವೆನಿಸುವುದಿಲ್ಲವೇ?. ನಮ್ಮ ನೆಚ್ಚಿನ ಕನ್ನಡ ನಾಡಿನಲ್ಲಿ ಮುದ್ದಾದ ಕನ್ನಡ ಭಾಷೆಯನ್ನೇ ಕ್ರಮೇಣ ಮೂಲೆ ಗುಂಪಾಗಿಸಿ ಕನ್ನಡಿಗರ ಮೇಲೆ ಹಿಂದಿ ಮತ್ತು ಸಂಸ್ಕೃತ ಭಾಷೆಗಳನ್ನು ಹೇರಲು ಹಲವು ದುಷ್ಟ ಸಂಚುಗಳು ನಡೆಯುತ್ತಿವೆ ಎಂಬುದನ್ನು ರಾಜ್ಯದ ಕನ್ನಡಾಭಿಮಾನಿಗಳೆಲ್ಲಾ ಗಮನಿಸಿದ್ದಾರೆ. ಅವರು ಈ ಸಂಚಿನ ವಿರುದ್ಧ ಅಲ್ಲಲ್ಲಿ ತಮ್ಮ ಆಕ್ರೋಶವನ್ನು ಪ್ರಕಟಿಸುತ್ತಿದ್ದಾರೆ. ಅವರ ಮುಂದೆ ನಿಂತು ಈ ಸಂಚನ್ನು ಸಮರ್ಥಿಸುವ ಧೈರ್ಯವಂತೂ ರವಿಯವರಿಗಿಲ್ಲ. ಇಂತಹ ಸಂಚು ನಡೆಯುತ್ತಿಲ್ಲ ಎಂದು ನಿರಾಕರಿಸುವ ಸ್ಥಿತಿಯಲ್ಲೂ ಅವರಿಲ್ಲ. ಇಂತಹ ಕಡು ಕಷ್ಟದ ಸನ್ನಿವೇಶದಲ್ಲಿ ‘ಕುರ್‌ಆನ್’ ಅನ್ನು ದೂಷಿಸಿದರೆ ಬೇರೆಲ್ಲ ವಿಷಯಗಳನ್ನು ಮೂಲೆಗೆ ತಳ್ಳಲು ಸಾಧ್ಯವಿದೆ ಎಂಬುದನ್ನು ರವಿಯವರು ತಮ್ಮ ಈ ಹಿಂದಿನ ಹಲವು ಅನುಭವಗಳಿಂದ ಬಲ್ಲರು. ಈ ಆಧಾರದಲ್ಲಿ ಅವರು ‘ಕುರ್‌ಆನ್’ ಕುರಿತು ಸುಳ್ಳು ಹೇಳುವ ಮೂಲಕ ಕನ್ನಡಿಗರ ಆಕ್ರೋಶದಿಂದ ಬಚಾವಾಗಿರುವುದನ್ನು ನಾವು ಅನುಕಂಪದಿಂದ ಕಾಣಬೇಕಾಗುತ್ತದೆ. ವಿಶೇಷವಾಗಿ, ಜಾತಿ ಜನಗಣತಿಯ ವರದಿ ಯನ್ನು ಬಿಡುಗಡೆ ಗೊಳಿಸಬೇಕೆಂಬ ಹಿಂದೂ ಬಹುಸಂಖ್ಯಾತರಾದ ಹಿಂದುಳಿದ ಜಾತಿಗಳ ಬಹುಕಾಲದ ಬೇಡಿಕೆಗೆ ದೇಶದೆಲ್ಲೆಡೆ ದಿನೇದಿನೇ ಜನಬೆಂಬಲ ಹೆಚ್ಚುತ್ತಿದೆ. ಆ ವಿಷಯದಲ್ಲಿ ಹಿಂದುಳಿದ ವರ್ಗಗಳ ಜನ ಒಂದು ಬೃಹತ್ ಆಂದೋಲನಕ್ಕೆ ಸಿದ್ಧತೆ ಕೂಡಾ ನಡೆಸುತ್ತಿದ್ದಾರೆ. ತಾನು ಯಾವ ಸರ್ಕಸ್ ಮಾಡಿದರೂ ಪ್ರಸ್ತುತ ಶೂದ್ರ ಸಮುದಾಯವನ್ನು ಬಹುಕಾಲ ನಿದ್ದೆಯಲ್ಲಿಡಲು ಸಾಧ್ಯವಿಲ್ಲ ಎಂಬುದು ರವಿ ಮತ್ತವರ ಪಾಳಯಕ್ಕೆ ಚೆನ್ನಾಗಿ ತಿಳಿದಿದೆ. ಆದರೂ ಅವರು ಕೆಲವು ತಿಂಗಳ ಮಟ್ಟಿಗಾದರೂ ಆ ಆಂದೋಲನವನ್ನು ವಿಳಂಬಿಸಲು ‘ಕುರ್‌ಆನ್’ ದೂಷಣೆಯನ್ನು ಒಂದು ನೆಪವಾಗಿ ಬಳಸಿದ್ದಾರೆ. ಇದೆಲ್ಲವನ್ನೂ ಅರ್ಥ ಮಾಡಿಕೊಂಡು ನಾವು ಅವರನ್ನು ತಿದ್ದುವ ವ್ಯರ್ಥ ಶ್ರಮ ನಡೆಸುವ ಬದಲು ಅವರ ಸ್ವಾಸ್ಥದ ಕಡೆಗೆ ಗಮನ ಹರಿಸುವುದು ಲೇಸಲ್ಲವೇ?.

share
ಚಂದ್ರಹಾಸ, ಬೋಳಾರ
ಚಂದ್ರಹಾಸ, ಬೋಳಾರ
Next Story
X