ಮಂಗಳೂರು: ಹೋರ್ಡಿಂಗ್ ಕುಸಿದು ಬಿದ್ದು ಮೂರು ಕಾರುಗಳಿಗೆ ಹಾನಿ

ಮಂಗಳೂರು: ಏಕಾಏಕಿ ಬೃಹತ್ ಗಾತ್ರದ ಹೋರ್ಡಿಂಗ್ ಕುಸಿದು ಬಿದ್ದ ಪರಿಣಾಮ ಪಾರ್ಕಿಂಗ್ ಮಾಡಿದ್ದ ಮೂರು ಕಾರುಗಳಿಗೆ ಹಾನಿಯಾಗಿರುವ ಘಟನೆ ನಗರದ ಕ್ಲಾಕ್ ಟವರ್ ಬಳಿ ನಡೆದಿದೆ. ಬಳಿಕ ಅಗ್ನಿಶಾಮಕ ದಳದವರು ಬಂದು ಕಾರನ್ನು ಹೋರ್ಡಿಂಗ್ ನಡಿಯಿಂದ ತೆರವು ಮಾಡಿದ್ದಾರೆ.
ನಗರದ ಟೌನ್ ಹಾಲ್ ನಲ್ಲಿ ಎ. 27-30ರವರೆಗೆ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ. ಇದರ ಹೋರ್ಡಿಂಗ್ ಅನ್ನು ಟೌನ್ ಹಾಲ್ ಗೇಟ್ ಬಳಿ ಹಾಕಲಾಗಿತ್ತು. ಆದರೆ ಈ ಹೋರ್ಡಿಂಗ್ ಮಧ್ಯಾಹ್ನ ಪಾರ್ಕಿಂಗ್ ಮಾಡಿದ್ದ ಮೂರು ಕಾರುಗಳ ಮೇಲೆಯೇ ಬಿದ್ದಿದೆ. ತಕ್ಷಣ ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಕಾರನ್ನು ಹೋರ್ಡಿಂಗ್ ನಡಿಯಿಂದ ತೆರವು ಮಾಡಿದ್ದಾರೆ.
ಹೋರ್ಡಿಂಗ್ ಬಿದ್ದಿರುವುದರಿಂದ ಮೂರು ಕಾರುಗಳಿಗೆ ಹಾನಿಯಾಗಿದೆ. ಸ್ವಲ್ಪ ಕಾಲ ಸ್ಥಳದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು. ಅದೃಷ್ಟವಶಾತ್ ಹೋರ್ಡಿಂಗ್ ನಡಿ ಯಾರು ಇರದ ಹಿನ್ನೆಲೆಯಲ್ಲಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Next Story