ಯುನೈಟೆಡ್ ಟ್ರೋಫಿ: ಉಡುಪಿ ಆಭರಣ ಮೋಟಾರ್ಸ್ ತಂಡಕ್ಕೆ ಪ್ರಶಸ್ತಿ

ಉಡುಪಿ : ಯುನೈಟೆಡ್ ಕಾರ್ ನೇತೃತ್ವದಲ್ಲಿ ಅಶಕ್ತ ಕುಟುಂಬದ ಮಕ್ಕಳ ಚಿಕಿತ್ಸ ವೆಚ್ಚ ಹಾಗೂ ಬಡ ಪ್ರತಿಭಾವಂತ ಮಕ್ಕಳ ವಿದ್ಯಾರ್ಥಿವೇತನ ಸಹಾಯಾರ್ಥವಾಗಿ ಆಟೋ ಮೊಬೈಲ್ ಕ್ಷೇತ್ರದ ಸಿಬ್ಬಂದಿಗಳ ನಡುವಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ಯುನೈಟೆಡ್ ಟ್ರೋಫಿ ೨೦೨೨ ಎ.೨೪ರಂದು ಕಟಪಾಡಿ ಎಸ್‌ವಿಎಸ್ ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಕೂಟದಲ್ಲಿ ಉಡುಪಿಯ ಆಭರಣ ಮೋಟಾರ್ಸ್ ತಂಡ ಪ್ರಥಮ ಬಹುಮಾನವನ್ನು ಮತ್ತು ಉಡುಪಿಯ ಕಾಂಚನ ಮೋಟಾರ್ಸ್ ತಂಡ ದ್ವೀತಿಯ ಬಹುಮಾನವನ್ನು ಗೆದ್ದುಕೊಂಡಿತು.
ಪಂದ್ಯಾಟವನ್ನು ರಾಜೇಂದ್ರ ಬಲ್ಲಾಳ್ ಉದ್ಘಾಟಿಸಿದರು. ಮುಖ್ಯ ಅಥಿತಿ ಗಳಾಗಿ ಯುನೈಟೆಡ್ ಕಾರ್ ಸಿಇಓ ರಮೇಶ್ ಪ್ರಭು, ಯುನೈಟೆಡ್ ಟ್ರೋಫಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಉದ್ಯಮಿಗಳಾದ ಶೈಲೇಶ್ ಅಂಚನ್, ಜೂಲಿಯನ್ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರಂಭದಲ್ಲಿ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಏಳು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಎರಡು ಬಡ ಕುಟುಂಬದ ಮಕ್ಕಳಿಗೆ ಚಿಕಿತ್ಸಾ ಧನಸಹಾಯ ವಿತರಿಸಿದರು. ಬಡಮಕ್ಕಳ ಜೀವನಕ್ಕೆ ಈ ಸಂಸ್ಥೆ ದಾರಿ ಮಾಡಿಕೊಟ್ಟಿದೆ. ಹಾಗೆಯೇ ಸಮಾಜದಲ್ಲಿ ಅಂಗವಿಕಲರಿಗೂ ಪಾಲು ಇದೆ ಎಂಬುದನ್ನು ಈ ಸಂಸ್ಥೆ ತೋರಿಸಿ ಕೊಟ್ಟಿದೆ ಎಂದು ಸ್ವಾಮೀಜಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ರವಿ ಕಟಪಾಡಿ ಅವರನ್ನು ಸನ್ಮಾನಿಸ ಲಾಯಿತು. ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಯುನೈಟೆಡ್ ಕಾರ್ ಡೀಲರ್ ಪ್ರಿನ್ಸಿಪಾಲ್ ಅರೂರ್ ರಾಮ್‌ಗೋಪಾಲ್ ರಾವ್ ಉಪಸ್ಥಿತರಿದ್ದರು.







