ಕೊಲ್ಕತ್ತಾದಲ್ಲಿ ಪ್ರತಿಭಟನೆಗೆ ತೇಜಸ್ವಿ ಸೂರ್ಯ ಕರೆ: 40% ಕಮಿಷನ್ ವಿರುದ್ಧ ಪ್ರತಿಭಟನೆ ಯಾವಾಗ; ಕಾಂಗ್ರೆಸ್ ಪ್ರಶ್ನೆ

ತೇಜಸ್ವಿ ಸೂರ್ಯ
ಬೆಂಗಳೂರು: 'ನಾನು ಇಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಅವರ ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇನೆ' ಎಂದು ಟ್ವೀಟ್ ಮಾಡಿದ ಸಂಸದ ತೇಜಸ್ವಿ ಸೂರ್ಯಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ , ನೀವು ಕರ್ನಾಟಕದಲ್ಲಿದ್ದಾಗ, 40% ಗುತ್ತಿಗೆದಾರರ ಕಮಿಷನ್ ಮತ್ತು ಶಿಕ್ಷಣ ಇಲಾಖೆಯ ವಿವಿಧ ಹಗರಣಗಳ ವಿರುದ್ಧ ಹಾಗೂ ಬೊಮ್ಮಾಯಿ ಸರ್ಕಾರದ ಬದಲಾವಣೆಗಾಗಿ ಪ್ರತಿಭಟನೆ ಮಾಡುತ್ತೀರಾ? ಕರ್ನಾಟಕದ ಯುವಕರನ್ನು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡುತ್ತೀರಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ನಾನು ಇಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇನೆ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರುವಂತೆ ಕರೆ ನೀಡಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.
How about when you are in Karnataka, you participate in a protest against 40% contractor commission and various scams of the education department under the Bommai Govt for a change?
— Karnataka Congress (@INCKarnataka) April 26, 2022
Urge youths of Karnataka to ask @Tejasvi_Surya to stand up for #Karnataka in large numbers. https://t.co/t8Xhslv1be







