ಪಿಯು ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ 39 ವಿದ್ಯಾರ್ಥಿಗಳು ಗೈರು
ಉಡುಪಿ : ಇಂದಿನ ದ್ವಿತೀಯ ಪಿಯು ವಿವಿಧ ಪರೀಕ್ಷೆಗಳಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 39 ವಿದ್ಯಾರ್ಥಿಗಳು ಗೈರು ಹಾಜರಾಗಿರುವ ಬಗ್ಗೆ ವರದಿ ಯಾಗಿದೆ.
ವಿಜ್ಞಾನ ವಿಭಾಗದ ಕೆಮೆಸ್ಟ್ರಿ ಪರೀಕ್ಷೆಗೆ ಒಟ್ಟು ೫೩೦೭ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ ೫೨೭೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸೈಕೋಲಜಿ ಪರೀಕ್ಷೆಯಲ್ಲಿ ೧೦ ಮಂದಿಯ ಪೈಕಿ ಏಳು ಮಂದಿ ಪರೀಕ್ಷೆ ಬರೆದಿದ್ದು, ಮೂವರು ಗೈರಾಗಿದ್ದಾರೆ. ಬೇಸಿಕ್ ಮ್ಯಾಥ್ಸ್‌ನಲ್ಲಿ ನೊಂದಾಯಿಸಿ ಕೊಂಡ ಎಲ್ಲ ೧೬೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಬರೆದಿದ್ದಾರೆ ಎಂದು ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.
Next Story





