5ರಿಂದ 12 ವರ್ಷದ ಮಕ್ಕಳಲ್ಲಿ ಕೊರ್ಬೆವ್ಯಾಕ್ಸ್, ಕೋವ್ಯಾಕ್ಸಿನ್ ಬಳಕೆಗೆ ಡಿಸಿಜಿಐ ಅನುಮತಿ

ಹೊಸದಿಲ್ಲಿ,ಎ.26: ಭಾರತೀಯ ಔಷಧಿಗಳ ಮಹಾನಿಯಂತ್ರಕ (ಡಿಸಿಜಿಐ)ರ ಕಚೇರಿಯು 5ರಿಂದ 12 ವರ್ಷದ ಮಕ್ಕಳಲ್ಲಿ ಕೊರ್ಬೆವ್ಯಾಕ್ಸ್ ಮತ್ತು 6ರಿಂದ 12 ವರ್ಷದ ಮಕ್ಕಳಲ್ಲಿ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿಯನ್ನು ನೀಡಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿದವು. ಕೊರ್ಬೆವ್ಯಾಕ್ಸ್ ಅನ್ನು ಬಯಾಲಜಿಕಲ್ ಇ ಸಂಸ್ಥೆಯು ಅಭಿವೃದ್ಧಿಗೊಳಿಸಿದ್ದರೆ, ಕೋವ್ಯಾಕ್ಸಿನ್ ಅನ್ನು ಭಾರತ ಬಯೊಟೆಕ್ ತಯಾರಿಸುತ್ತಿದೆ.
ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಶಿಫಾರಸಿನ ಮೇರೆಗೆ ಡಿಸಿಜಿಐ ಈ ಅನುಮತಿಯನ್ನು ನೀಡಿದೆ. ಹಾಲಿ 12ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಕೋವಿಡ್ ವಿರುದ್ಧ ರಕ್ಷಣೆಗಾಗಿ ಕೊರ್ಬೆವ್ಯಾಕ್ಸ್ ಲಸಿಕೆಯನ್ನು ನೀಡಲಾಗುತ್ತಿದ್ದು, 12ರಿಂದ 18 ವರ್ಷ ವಯೋಮಾನದವರಿಗೆ ಕೋವ್ಯಾಕ್ಸಿನ್ ಅನ್ನು ಬಳಸಲಾಗುತ್ತಿದೆ.
Next Story





