Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಬೆಳ್ತಂಗಡಿ: ಲಾಯಿಲ ಜಿ.ಪಂ. ಬಿಜೆಪಿ...

ಬೆಳ್ತಂಗಡಿ: ಲಾಯಿಲ ಜಿ.ಪಂ. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸ್ಥಾನ, ಬಿಜೆಪಿ ಸದಸ್ಯತ್ವಕ್ಕೆ ಸುಧಾಕರ್ ರಾಜೀನಾಮೆ

"ಶಾಸಕರ ನಡವಳಿಕೆಯಿಂದ ಬೇಸತ್ತು ರಾಜೀನಾಮೆ"

ವಾರ್ತಾಭಾರತಿವಾರ್ತಾಭಾರತಿ27 April 2022 9:41 AM IST
share
ಬೆಳ್ತಂಗಡಿ: ಲಾಯಿಲ ಜಿ.ಪಂ. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸ್ಥಾನ, ಬಿಜೆಪಿ ಸದಸ್ಯತ್ವಕ್ಕೆ ಸುಧಾಕರ್ ರಾಜೀನಾಮೆ

ಬೆಳ್ತಂಗಡಿ; ತಾಲೂಕಿನ ಲಾಯಿಲ ಜಿಲ್ಲಾ ಪಂಚಾಯತ್ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸ್ಥಾನ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಪಕ್ಷದ ಹಿರಿಯ ಮುಖಂಡ ಸುಧಾಕರ್ ಬಿ.ಎಲ್ ರಾಜೀನಾಮೆ ನೀಡಿದ್ದಾರೆ. ‌

ಇತ್ತೀಚೆಗಿನ ದಿನಗಳಲ್ಲಿ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಶಾಸಕರ ನಡವಳಿಕೆಯಿಂದ ಬೇಸತ್ತು ಪಕ್ಷದಲ್ಲಿನ ಎಲ್ಲ ಹುದ್ದೆಗಳಿಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತಿರುವುದಾಗಿ ಅವರು ಪಕ್ಷದ ಮಂಡಲ ಅಧ್ಯಕ್ಷರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾರೆ.

ರಾಜೀನಾಮೆ ‌ಪತ್ರದಲ್ಲಿ ಏನಿದೆ?

ಕಳೆದ 33 ವರ್ಷಗಳಿಂದ ನಾನು ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಈ ಮಧ್ಯೆ ಬೂತ್ ಪ್ರಮುಖವಾಗಿ ಗ್ರಾಮ ಸಮಿತಿಯ ಅಧ್ಯಕ್ಷನಾಗಿ, ತಾಲೂಕು ಹಿಂದುಳಿದ ವರ್ಗ ಮೋರ್ಚಾದ ಪ್ರ.ಕಾರ್ಯದರ್ಶಿಯಾಗಿ ಪಕ್ಷ ನೀಡಿದ ಜವಾಬ್ದಾರಿತ ಸ್ತರಗಳಲ್ಲಿ, ಸ್ವಹಿತಾಸಕ್ತಿ ಬಿಟ್ಟು ಸಂಘಟನೆಗೆ ದುಡಿದಿರುತ್ತೇನೆ. ಅಲ್ಲದೆ ಯಾವುದೇ ಅಪೇಕ್ಷೆ ಪಡದಿದ್ದರೂ, ಪಕ್ಷ ಸೂಚಿಸಿದಾಗ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರು ಭಾರಿ ಗ್ರಾಮ ಪಂಚಾಯತ್ ಸದಸ್ಯನಾಗಿ, ಅಧ್ಯಕ್ಷನಾಗಿ, ತಾಲೂಕು ಪಂಚಾಯತ್ ಸದಸ್ಯನಾಗಿ ಜನರ ಸೇವೆ ಮಾಡುವಲ್ಲಿ ಪಕ್ಷ ನನಗೆ ಅವಕಾಶವನ್ನು ಕೂಡ ಕಲ್ಪಿಸಿಕೊಟ್ಟಿದೆ, ಅದಕ್ಕಾಗಿ ಮತ್ತು ನನ್ನನ್ನು ರಾಜಕೀಯವಾಗಿ ಬೆಳೆಸಿದ ಗ್ರಾಮ ಹಾಗೂ ತಾಲೂಕಿನ ನಾಯಕರಿಗೆ ಮತ್ತು ನಾನು ಪಕ್ಷಕ್ಕೆ ಆಭಾರಿಯಾಗಿದ್ದೇನೆ.

ಪ್ರಸ್ತುತ ನಾನು ಲಾಯಿಲ ಶಕ್ತಿ ಕೇಂದ್ರ ಪ್ರಮುಖನಾಗಿ ಪಕ್ಷ ನೀಡಿದ ಜವಾಬ್ದಾರಿಯನ್ನು ನನ್ನ ಸ್ವಂತ ಜೀವನದ ಹಿತಾಸಕ್ತಿ ಬಿಟ್ಟು ನಿರ್ವಹಿಸುತ್ತಿದ್ದೇನೆ. ಪಕ್ಷದ ರ‍್ಯಾಲಿಗಳು, ಸಭೆಗಳು, ಪ್ರತಿಭಟನೆಗಳು, ಸಂಘಟನಾತ್ಮಕ ಯಾವುದೇ ಕಾರ್ಯಕ್ರಮ ಅದು ತಾಲೂಕಿನಲ್ಲಿರಲಿ ಅಥವಾ ಮಂಗಳೂರಿನಲ್ಲಿ ನಡೆಯಲಿ ನನ್ನ ಜೀವನಕ್ಕಿರುವ ಒಂದು ಸಣ್ಣ ಅಂಗಡಿಯನ್ನು ಬಂದ್ ಮಾಡಿ ಕಾರ್ಯಕರ್ತರ ಜತೆ ಸೇರಿ ಭಾಗವಹಿಸುತ್ತಿದ್ದೆ. ಅಲ್ಲದೆ ಪ್ರತಿ ಚುನಾವಣೆಯಲ್ಲಿ ಕೊಟ್ಟಂತಹ ಜವಾಬ್ದಾರಿಯನ್ನು ಕಾಯ ವಾಚ ಮನಸ ಪಾಲಿಸಿದ್ದೇನೆ. 

ಆದರೆ ಇತ್ತಿಚೆಗೆ ನಮ್ಮ ಗ್ರಾಮದೊಳಗೆ ನಡೆಯುವ ಕೆಲವೊಂದು ವಿಚಾರದಲ್ಲಿ ಶಕ್ತಿ ಕೇಂದ್ರದ ಗಮನಕ್ಕೂ ತಾರದೆ ಕೈಗೊಳ್ಳುತ್ತಿರುವ ಘಟಕಗಳ ಬಗ್ಗೆ ಪಕ್ಷದ ಶಾಸಕರ ಶ್ರಮಿಕ ಕಚೇರಿ ಮತ್ತು ಶಾಸಕ ನಡವಳಿಕೆಯಿಂದ ಮನಸ್ಸಿಗೆ ತುಂಬಾ ಹಿಂಸೆಯಾಗುತ್ತಿದೆ.  ತಮ್ಮ ಸ್ವಹಿತಾಸಕ್ತಿಯನ್ನು ಬಿಟ್ಟು, ಸ್ವಂತ ಜೀವನದ ಬಗ್ಗೆ ಕೂಡ ಯೋಚಿಸಿದೆ ಪ್ರತಿ ಸಂದರ್ಭದಲ್ಲಿ ಕೂಡ ಪಕ್ಷದ ಜತೆ ನಿಲ್ಲುವವರಿಗೂ ಒಂದೇ ಸಹಕಾರ. ಯಾವುದೇ ಸಂದರ್ಭದಲ್ಲಿ ಕೂಡ ಪಕ್ಷದ ಜತೆ ನಿಲ್ಲದೆ, ವಿರೋಧಿಸುತ್ತಾ ವಿರೋಧಿಗಳೊಂದಿಗೆ ಕೈಜೋಡಿಸಿ ಪಕ್ಷದ ಹಿನ್ನಡೆಗೆ ಕಾರಣವಾಗುತ್ತಾ, ಪಕ್ಷಕ್ಕೆ ಮುಜುಗರ ತರುತ್ತಾ, ಸಾರ್ವಜನಿಕವಾಗಿ ಪಕ್ಷಕ್ಕೆ ಮತ್ತು ಪಕ್ಷದ ನಾಯಕರುಗಳಿಗೆ ಬೈಯುತ್ತಾ, ಪಕ್ಷದ ಯಾವುದೇ ಕಾರ್ಯಕ್ರಮವಾಗಲಿ, ಪಕ್ಷದಿಂದ ನಡೆಯುವ ಪ್ರತಿಭಟನೆಯಾಗಲಿ, ಸಮಾವೇಶವಾಗಲಿ ಯಾವುದಕ್ಕೂ ಬಾರದೆ ದೂರ ನಿಲ್ಲುತ್ತಾ ಸಂಘಟನೆಗೆ ಸಹಕರಿಸದವರಿಗೂ ಕೂಡ ಒಂದೇ ರೀತಿಯ ಸಹಕಾರ ಎಂದಾದರೆ, ಅಂತಹ ನಡವಳಿಕೆ ಮತ್ತು ಆಲೋಚನೆ ನನಗೆ ಬೇಸರ ತರಿಸಿದೆ. ಅದ್ದರಿಂದ ಈ ರೀತಿಯ ಬೆಳವಣಿಯಿಂದ ನನಗೆ ಮುಜುಗರ ಮಾತ್ರವಲ್ಲದೆ ತುಂಬಾ ಬೇಸರವಾಗಿರುತ್ತದೆ. ಅದ್ದರಿಂದ ನನಗೆ ಜವಾಬ್ದಾರಿಯುತ ಸ್ಥಾನದಲ್ಲಿ ಮುಂದುವರೆಯಲು ಇಷ್ಟವಿಲ್ಲ. ಆದ್ದರಿಂದ ನಾನು ಪಕ್ಷವಹಿಸಿರುವ ಶಕ್ತಿ ಕೇಂದ್ರ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ.

ಅಲ್ಲದೆ ಇನ್ನೂ ಮುಂದೆ ಪಕ್ಷ, ರಾಜಕೀಯದಲ್ಲೂ ಕೂಡ ಮುಂದುವರಿಯುವ ಆಸೆ ಇಲ್ಲದಿರುವುದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಈ ರಾಜೀನಾಮೆಯನ್ನು ಅಂಗೀಕರಿಸಬೇಕಾಗಿ ವಿನಂತಿ. ನನ್ನ ಜವಾಬ್ದಾರಿತ ಸಂದರ್ಭಗಳಲ್ಲಿ ಸಹಕಾರಿ ನೀಡಿರುವ ಪಕ್ಷದ ಅಧ್ಯಕ್ಷರುಗಳಿಗೆ ಪಕ್ಷದ ವಿವಿಧ ಸ್ಥರದ  ಎಲ್ಲಾ ಮುಖಂಡರಿಗೆ, ನಮ್ಮ ಗ್ರಾಮದ ಪ್ರಮುಖರಿಗೆ, ಬೂತಿನ ಪ್ರಮುಖರಿಗೆ, ಕಾರ್ಯಕರ್ತ ಬಂಧುಗಳಿಗೆ, ಶಾಸಕರುಗಳಿಗೆ ತುಂಬು ಹೃದಯದ ಧನ್ಯವಾದಗಳು.

ಇನ್ನು ಮುಂದೆ ನಾನು ಸ್ವತಂತ್ರನಾಗಿದ್ದು ಭಾರತೀಯ ಜನತಾ ಪಾರ್ಟಿಗೂ ನನಗೂ ಯಾವುದೇ ಸಂಬಂಧವಿರುವುದಿಲ್ಲ ಎಂದು  ರಾಜೀನಾಮೆ ಪತ್ರವನ್ನು ಪಕ್ಷದ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಅವರಿಗೆ ನೀಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X