ದೇರಳಕಟ್ಟೆ : ʼದಿ ಶೂ ಫ್ಯಾಕ್ಟರಿʼ ಉದ್ಘಾಟನೆ

ದೇರಳಕಟ್ಟೆ : ಹೃದಯ ಭಾಗದಲ್ಲಿ ಸಿದ್ದೀಕ್ ಉಚ್ಚಿಲ ಮಾಲಕತ್ವದ ʼದಿ ಶೂ ಫ್ಯಾಕ್ಟರಿʼಯನ್ನು ಶಾಸಕ ಯು.ಟಿ. ಖಾದರ್ ರವಿವಾರ ಸಂಜೆ ಉದ್ಘಾಟಿಸಿ, ಶುಭ ಹಾರೈಸಿದರು.
ಇದೇ ಸಂದರ್ಭ ಎಚ್.ಎಚ್.ಫೌಂಡೇಶನ್ ವತಿಯಿಂದ ಅದರ ಅಧ್ಯಕ್ಷ ಸಿದ್ದೀಕ್ ಉಚ್ಚಿಲ ಅಧ್ಯಕ್ಷತೆಯಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.
ಎಚ್.ಎಚ್.ಫೌಂಡೇಶನ್ ಅಧ್ಯಕ್ಷ ಸಿದ್ದೀಕ್ ಅವರು ವಿದೇಶದಲ್ಲಿ ಸುಮಾರು 250 ಮಂದಿಗೆ ಇಂಧನ ಕಂಪೆನಿಯಲ್ಲಿ ಉದ್ಯೋಗ ಮಾಡಿಸಿ ಕೊಟ್ಟಿದ್ದು ಹಾಗೂ ಹಲವಾರು ಅನಾಥ ಯುವತಿಯರ ಮದುವೆಗೆ, ರೋಗಿಗಳಿಗೆ, ಮನೆಕಟ್ಟಲು ಸಹಾಯ ಮಾಡಿದ್ದಾರೆ. ಕೊರೋನ ಸಂದರ್ಭದಲ್ಲಿ ಹಲವಾರು ಜನರಿಗೆ ಆಹಾರ ಸಾಮಗ್ರಿಗಳನ್ನು ನೀಡಿದ್ದು, ಶಾಸಕ ಯು.ಟಿ.ಖಾದರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಅಲೆಮಾರಿ ಅರೆ-ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಾಜಿ ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ನ್ಯಾಯವಾದಿ ಅರುಣ್ ಬಂಗೇರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು ಪಾವೂರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹರ್ಷರಾಜ್ ಮುದ್ಯ, ಇಂಟಕ್ ಉಪಾಧ್ಯಕ್ಷ ನಝೀರ್ ಮಠ, ಓಕ್ಸ್ಫೋರ್ಡ್ ಗ್ಲೋಬಲ್ ಇಂಟೆಲ್ ಸ್ಕೂಲ್ ಮೇನೇಜಿಂಗ್ ಡೈಕ್ಟರ್ ಸುಕೇಶ್ ಉಚ್ಚಿಲ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ, ಬೆಳ್ಮ ಪಂಚಾಯತ್ ಮಾಜಿ ಅಧ್ಯಕ್ಷ ಯೂಸುಫ್ ಬಾವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ, ಕಿನ್ಯ ಪಂಚಾಯತ್ ಮಾಜಿ ಅಧ್ಯಕ್ಷ ಹಮೀದ್ ಕಿನ್ಯ, ಉಚ್ಚಿಲ 407 ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ, ಮಾಜಿ ಅಧ್ಯಕ್ಷ ಯು.ಬಿ.ಎಮ್ ಮೊಹಮ್ಮದ್, ತೊಕ್ಕೊಟ್ಟು ಸಿ.ಟಿ ಇಲೆಕ್ಟ್ರಿಕಲ್ಸ್ ಮಾಲಕ ಇಬ್ರಾಹಿಂ ಉಚ್ಚಿಲ, ಸೋಮೇಶ್ವರ ಉಚ್ಚಿಲ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸಲಾಂ ಉಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.
ಉಚ್ಚಿಲದ ಸಮಾಜ ಸೇವಕ ಆರೀಫ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ತಬೂಕು ದಾರಿಮಿ ಸ್ವಾಗತಿಸಿ, ನೌಫಲ್ ಕಾರ್ಯಕ್ರಮ ನಿರೂಪಿಸಿದರು.