"ಚೀನೀಯರು ಹರಿಸಿದ ರಕ್ತವನ್ನು ವ್ಯರ್ಥವಾಗಿಸುವುದಿಲ್ಲ": ಕರಾಚಿ ವಿವಿ ದಾಳಿಯನ್ನು ಖಂಡಿಸಿದ ಚೀನಾ

ಬೀಜಿಂಗ್:ಪಾಕಿಸ್ತಾನದಲ್ಲಿ ಕೆಲಸ ಮಾಡುವ ತನ್ನ ರಾಷ್ಟ್ರದ ಜನರಿಗೆ ಭದ್ರತೆಯನ್ನು ಹೆಚ್ಚಿಸುವಂತೆ ಪಾಕಿಸ್ತಾನವನ್ನು ಚೀನಾ ಇಂದು ಆಗ್ರಹಿಸಿದೆಯಲ್ಲದೆ ಕರಾಚಿ ವಿವಿಯಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಮೂವರು ಚೀನೀ ಶಿಕ್ಷಕರ ಸಾವಿಗೆ ಕಾರಣವಾದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದೆ.
ಹರಿದ ಚೀನೀಯರ ರಕ್ತವನ್ನು ವ್ಯರ್ಥವಾಗಿಸುವುದಿಲ್ಲ ಹಾಗೂ ಈ ಘಟನೆಯ ಹಿಂದೆ ಇರುವವರು ಬೆಲೆ ಖಂಡಿತ ತೆರಬೇಕು ಎಂದು ಚೀನಾ ಹೇಳಿದೆ.
ಮಂಗಳವಾರ ಕರಾಚಿ ವಿವಿಯಲ್ಲಿ ಆತ್ಮಹತ್ಯಾ ಬಾಂಬರ್ ಬಲೂಚ್ ಮಹಿಳೆಯೊಬ್ಬಳು ತನ್ನನ್ನು ಸ್ಫೋಟಿಸಿದ ಪರಿಣಾಮ ಮೂವರು ಚೀನೀ ಶಿಕ್ಷಕರು ಮೃತಪಟ್ಟರೆ ಒಬ್ಬ ಚೀನೀ ಶಿಕ್ಷಕ ಗಾಯಗೊಂಡು ಹಲವು ಇತರ ಪಾಕಿಸ್ತಾನೀಯರು ಗಾಯಗೊಂಡಿದ್ದರು.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಚೀನಾ ಸಮಗ್ರ ತನಿಖೆಗೆ ಆಗ್ರಹಿಸಿದೆ.
Next Story





