ನವಜಾತ ಮೊಮ್ಮಗಳನ್ನು ಮನೆಗೆ ಕರೆತರಲು ಹೆಲಿಕಾಪ್ಟರ್ ಬಾಡಿಗೆಗೆ ಪಡೆದ ರೈತ

ಪುಣೆ: ಮೊಮ್ಮಗಳ ಜನನದಿಂದ ಸಂತೋಷಗೊಂಡಿದ್ದ ಪುಣೆ ಜಿಲ್ಲೆಯ ರೈತರೊಬ್ಬರು ಮಂಗಳವಾರ ಮೊಮ್ಮಗಳನ್ನು ಮನೆಗೆ ಕರೆತರಲು ಹೆಲಿಕಾಪ್ಟರ್ ವೊಂದನ್ನು ಬಾಡಿಗೆಗೆ ಪಡೆದಿದ್ದಾರೆ.
ಪುಣೆಯ ಹೊರವಲಯದಲ್ಲಿರುವ ಬಾಲೆವಾಡಿ ಪ್ರದೇಶದ ನಿವಾಸಿ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕುಟುಂಬದ ಹೊಸ ಸದಸ್ಯೆ ಕ್ರುಶಿಕಾಗೆ ಭವ್ಯವಾದ ಸ್ವಾಗತವನ್ನು ನೀಡಲು ಬಯಸುವುದಾಗಿ ಹೇಳಿದರು.
ಮೊಮ್ಮಗಳಿಗೆ ಭವ್ಯ ಸ್ವಾಗತ ಕೋರಲು ಸಮೀಪದ ಶೆವಾಲ್ ವಾಡಿಯಲ್ಲಿರುವ ಸೊಸೆಯ ಅಜ್ಜ-ಅಜ್ಜಿಯರ ಮನೆಯಿಂದ ಮಗು ಹಾಗೂ ಸೊಸೆಯನ್ನು ಮನೆಗೆ ಕರೆತರುವ ಸಮಯದಲ್ಲಿ ಹೆಲಿಕಾಪ್ಟರ್ ಅನ್ನು ಬುಕ್ ಮಾಡಿದ್ದೇನೆ ಎಂದು ಅವರು ಹೇಳಿದರು.
Maharashtra | Ajit Pandurang Balwadkar, a farmer from Balewadi hired a helicopter to bring his newborn granddaughter and daughter-in-law to his house in Balewadi from the maternal house of the daughter-in-law in Shewalwadi in Pune. (26.04) pic.twitter.com/T9dR8gxVqe
— ANI (@ANI) April 26, 2022







