Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಚಿಕ್ಕಮಗಳೂರಿನಲ್ಲಿ ಹಿಂದುತ್ವ...

ಚಿಕ್ಕಮಗಳೂರಿನಲ್ಲಿ ಹಿಂದುತ್ವ ಕಾರ್ಯಕರ್ತರಿಂದ 'ಬುಲ್ಡೋಝರ್ ಕಾರ್ಯಾಚರಣೆ' ವದಂತಿಯ ವಾಸ್ತವವೇನು?

ವಾರ್ತಾಭಾರತಿವಾರ್ತಾಭಾರತಿ27 April 2022 4:06 PM IST
share
ಚಿಕ್ಕಮಗಳೂರಿನಲ್ಲಿ ಹಿಂದುತ್ವ ಕಾರ್ಯಕರ್ತರಿಂದ ಬುಲ್ಡೋಝರ್ ಕಾರ್ಯಾಚರಣೆ ವದಂತಿಯ ವಾಸ್ತವವೇನು?

ಚಿಕ್ಕಮಗಳೂರು, ಎ.27: ಬಿಜೆಪಿ ಸರಕಾರಗಳು ಇರುವ ರಾಜ್ಯಗಳಲ್ಲಿ ಸರಕಾರಿ ಜಾಗ ಒತ್ತುವರಿ ತೆರವು ಸಂಬಂಧ ಭಾರೀ ಸದ್ದು ಮಾಡುತ್ತಿರುವ ಬುಲ್ಡೋಜರ್ ಕಾರ್ಯಾಚರಣೆ ಸದ್ಯ ಕಾಫಿನಾಡಿಗೂ ಕಾಲಿಟ್ಟಿದೆಯೇ ಎಂಬ ಶಂಕೆಗೆ ಸಂಘಪರಿವಾರದ ಕಾರ್ಯಕರ್ತನೊಬ್ಬ ತನ್ನ ಫೇಸ್‍ಬುಕ್ ಖಾತೆಯಲ್ಲಿ ಹಾಕಿರುವ ವಿಡಿಯೋ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅಂಗಡಿ ಎದುರು ಜೆಸಿಬಿ ನಿಲ್ಲಿಸಿಕೊಂಡ ಕೆಲವರು ಅಂಗಡಿ ಮುಂಭಾಗದಲ್ಲಿರುವ ವಸ್ತುಗಳ ತೆರವಿಗೆ ಸೂಚನೆ ನೀಡುತ್ತಿರುವ ದೃಶ್ಯ ಇದ್ದು, ಈ ವಿಡಿಯೋ ಪೋಸ್ಟ್ ಮಾಡಿರುವ ಸಂಘಪರಿವಾರದ ಕಾರ್ಯಕರ್ತ "ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್ ಕಾರ್ಯಾಚರಣೆಗಿಳಿದ ಹಿಂದೂ ಕಾರ್ಯಕರ್ತರು" ಎಂಬ ತಲೆ ಬರೆಹ ಬರೆದುಕೊಂಡಿದ್ದಾನೆ. ಈ ವಿಡಿಯೋ ವೀಕ್ಷಿಸುತ್ತಿರುವ ನೆಟ್ಟಿಗರು ವ್ಯಾಪಕ ಟೀಕೆಗಳ ಮೂಲಕ ಪ್ರತಿಕ್ರಿಯೆ ನೀಡಿದ್ದು, ಹಿಂದೂ ಕಾರ್ಯಕರ್ತರಿಗೆ ಬುಲ್ಡೋಜರ್ ಕಾರ್ಯಾಚರಣೆ ಮಾಡಲು ಅಧಿಕಾರ ನೀಡಿದವರು ಯಾರು? ಬಡವರ ಹೊಟ್ಟೆ ಮೇಲೆ ಹೊಡೆಯಲು ಇವರಿಗೇನು ಹಕ್ಕಿದೆ? ಎಂಬಿತ್ಯಾಧಿಯಾಗಿ ಕಮೆಂಟ್ ಮಾಡುತ್ತಾ ಈ ಕಾರ್ಯಾಚರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಡಿಯೋ ಸಂಬಂಧ 'ವಾರ್ತಾಭಾರತಿ' ಫ್ಯಾಕ್ಟ್ ಚೆಕ್ ಮಾಡಿದ್ದು, ಇತರ ಧರ್ಮೀಯ ವ್ಯಕ್ತಿಯೊಬ್ಬರಿಗೆ ಸೇರಿದ  ಅಂಗಡಿ ಮುಂದೆ ಜೆಸಿಬಿ ನಿಲ್ಲಿಸಿಕೊಂಡು ಅಂಗಡಿ ಮುಂಭಾಗದ ಸಾಮಾನು ಸರಂಜಾಮುಗಳನ್ನು ತೆರವು ಮಾಡುವಂತೆ ಅಂಗಡಿ ಮಾಲಕರಿಗೆ ಸೂಚನೆ ನೀಡುತ್ತಿರುವವರು ಯಾವುದೇ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರಲ್ಲ. ಅಲ್ಲಿರುವ ವ್ಯಕ್ತಿಗಳು ಚಿಕ್ಕಮಗಳೂರು ನಗರಸಭೆಯ ಅಧ್ಯಕ್ಷ, ಪೌರಾಯುಕ್ತ ಹಾಗೂ ಅಧಿಕಾರಿ, ಸಿಬ್ಬಂದಿ, ಪೌರಕಾರ್ಮಿಕರಾಗಿದ್ದಾರೆ. ಇನ್ನು ಅಂಗಡಿ ಮುಂದೆ ನಿಂತಿರುವುದು ಜೆಸಿಬಿಯಂತ್ರವೇ ಹೊರತು ಬುಲ್ಡೋಜರ್ ಅಲ್ಲ ಎಂಬುದು ಫ್ಯಾಕ್ಟ್‍ಚೆಕ್ ವೇಳೆ ಅಂಗಡಿ ಮಾಲಕರು ನೀಡಿರುವ ಮಾಹಿತಿಯಿಂದಲೇ ತಿಳಿದು ಬಂದಿದೆ. 

ಇತರ ಧರ್ಮೀಯ ವ್ಯಕ್ತಿಯ ಅಂಗಡಿ ಮುಂದೆ ನಡೆದಿರುವುದೇನು?

ಚಿಕ್ಕಮಗಳೂರು ನಗರಸಭೆಯಲ್ಲಿ ಸದ್ಯ ಬಿಜೆಪಿ ಆಡಳಿತ ಇದ್ದು, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರು ನಗರಸಭೆಯ ಎಲ್ಲ ವಾರ್ಡ್‍ಗಳಲ್ಲೂ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ. ಮಂಗಳವಾರ ನಗರಸಭೆಯ 32ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಗೌರಿಕಾಲುವೆಯಲ್ಲಿ ನಗರಸಭೆ ಅಧ್ಯಕ್ಷರು, ಪೌರಾಯುಕ್ತ ಹಾಗೂ ಕಾರ್ಮಿಕರು ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ. ಸಂಜೆ ವೇಳೆ ಗೌರಿ ಕಾಲುವೆಯಲ್ಲಿರುವ ಪಾರ್ಕ್ ಜಾಗ ಒತ್ತುವರಿ ಸಂಬಂಧ ಜೆಸಿಬಿಯಂತ್ರದೊಂದಿಗೆ ನಗರಸಭೆ ಅಧ್ಯಕ್ಷ, ಪೌರಾಯುಕ್ತರು ಸ್ಥಳಕ್ಕೆ ತೆರಳಿ ಒತ್ತುವರಿ ತೆರವು ಸಂಬಂಧ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿದ್ದ ಅನ್ಯ ಕೋಮಿನವರ ಅಂಗಡಿಯೊಂದಕ್ಕೆ ತೆರಳಿದ ನಗರಸಭೆ ಅಧ್ಯಕ್ಷ ವೇಣುಗೋಪಾಲ್, ಪೌರಾಯುಕ್ತ ಬಸವರಾಜು ಹಾಗೂ ಸಿಬ್ಬಂದಿ ಅಂಗಡಿ ಮುಂಭಾಗದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಜೋಡಿಸಿಟ್ಟಿದ್ದ ವಸ್ತುಗಳನ್ನು ತೆರವು ಮಾಡಬೇಕು, ಚರಂಡಿ, ಫುಟ್‍ಪಾತ್ ಮೇಲೆ ಸಾಮಾನು ಸರಂಜಾಮುಗಳನ್ನು ಇಡುವಂತಿಲ್ಲ ಎಂದು ಸೂಚಿಸಿ, ತೆರವು ಮಾಡದಿದ್ದಲ್ಲಿ ಜೆಸಿಬಿ ಮೂಲಕ ನಾವೇ ತೆರವು ಮಾಡುತ್ತೇವೆಂದೂ ಎಚ್ಚರಿಸಿ ಜೆಸಿಬಿಯನ್ನು ಅಂಗಡಿ ಮುಂದೆ ನಿಲ್ಲಿಸಿದ್ದಾರೆ. ಇದಕ್ಕೆ ಅಂಗಡಿ ಮಾಲಕರು ಸ್ಪಂದಿಸಿ ಅಂಗಡಿ ಮುಂದಿನ ಚರಂಡಿ ಜಾಗದಲ್ಲಿದ್ದ ವಸ್ತುಗಳನ್ನು ತೆರವು ಮಾಡುವುದಾಗಿಯೂ ತಿಳಿಸಿದ್ದಾರೆ.

ಸಂಘಪರಿವಾರದ ಸದಸ್ಯನ ಕಿಡಿಗೇಡಿ ಕೃತ್ಯದಿಂದ ಗೊಂದಲ ಸೃಷ್ಟಿ: ನಗರಸಭೆ ಅಧಿಕಾರಿ, ಸಿಬ್ಬಂದಿ ಅಂಗಡಿ ಮುಂದೆ ನಡೆಸಿದ ಕಾರ್ಯಾಚರಣೆಯನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿಕೊಂಡಿದ್ದು, ಈ ವಿಡಿಯೋವನ್ನು ಆಲ್ದೂರು ಮೂಲದ ಸಂಘಪರಿವಾರದ ಸದಸ್ಯನೊಬ್ಬ ತನ್ನ ಫೇಸ್‍ಬುಕ್ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದಲ್ಲದೇ ಈ ವಿಡಿಯೋಗೆ "ಚಿಕ್ಕಮಗಳೂರಿನಲ್ಲಿ ಬುಲ್ಡೋಜರ್ ಕಾರ್ಯಾಚರಣೆಗಿಳಿದ ಹಿಂದೂ ಕಾರ್ಯಕರ್ತರು" ಎಂದು ತಲೆಬರಹವನ್ನೂ ಬರೆದುಕೊಂಡಿದ್ದಾನೆ. ಈ ವಿಡಿಯೋ ವೀಕ್ಷಣೆ ಮಾಡಿರುವ ನಗರಸಭೆ ಅಧಿಕಾರಿ, ಸಿಬ್ಬಂದಿಯನ್ನು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರೆಂದು ಭಾವಿಸಿಕೊಂಡು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಂಗಡಿ ಮಾಲಕರು ಪ್ರತಿಕ್ರಿಯೆ: ಮಂಗಳವಾರ ಗೌರಿ ಕಾಲುವೆಯಲ್ಲಿ ನಗರಸಭೆಯವರು ಸ್ವಚ್ಛತಾ ಅಭಿಯಾನ ನಡೆಸಿದ್ದು, ಈ ವೇಳೆ ತಮ್ಮ ಅಂಗಡಿ ಸಮೀಪದಲ್ಲಿರುವ ಪಾರ್ಕ್ ಜಾಗ ಒತ್ತುವರಿ ಬಗ್ಗೆ ಒತ್ತುವರಿದಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಅವರು ನಮ್ಮ ಅಂಗಡಿ ಎದುರು ಬಂದು ಅಂಗಡಿ ಮುಂದಿನ ಚರಂಡಿ ಜಾಗದ ಮೇಲೆ ಸಾಮಾನು, ಸರಂಜಾಮುಗಳನ್ನು ಇಡಬಾರದು, ತೆರವು ಮಾಡಿ ಎಂದು ಸೂಚನೆ ನೀಡಿದರು. ಅವರು ಹೇಳಿದಂತೆ ನಾವು ಮಾಡಿದ್ದೇವೆ. ಅಂಗಡಿ ನಮ್ಮ ಸ್ವಂತದ್ದಲ್ಲ. ನಾವು ಅಂಗಡಿ ಕಟ್ಟಡವನ್ನು ಬಾಡಿಗೆ ಪಡೆದು ಅಂಗಡಿ ನಡೆಸುತ್ತಿದ್ದೇವೆ. ಸ್ಥಳದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಿಲ್ಲ, ಅಂಗಡಿ ಎದುರಿದ್ದ ವಾಹನ ಬುಲ್ಡೋಜರ್ ಅಲ್ಲ, ತ್ಯಾಜ್ಯ ತೆಗೆಯಲು ಬಂದಿದ್ದ ಜೆಸಿಬಿ ವಾಹನ ಅದು, ಯಾರೋ ಕಿಡಿಗೇಡಿಗಳು ಗೊಂದಲ ಸೃಷ್ಟಿಸಲು ನಮ್ಮ ಅಂಗಡಿ ಮುಂದೆ ಬುಲ್ಡೋಜರ್ ತಂದು ತೆರವು ಕಾರ್ಯಾಚರಣೆ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕಿದ್ದಾರೆ. ಇಂತಹ ಕೃತ್ಯದಿಂದ ಸಮಾಜದ ಶಾಂತಿಗೆ ಧಕ್ಕೆ ಬರುತ್ತದೆ. ಯಾರೂ ಇಂತಹ ಕೃತ್ಯಕ್ಕೆ ಇಳಿಯಬಾರದು ಎಂದು ಅಂಗಡಿ ಮಾಲಕನ ಸಂಬಂಧಿ ಆಸಿಫ್ ಎಂಬವರು ವಾರ್ತಾಭಾರತಿಗೆ ತಿಳಿಸಿದ್ದಾರೆ.

ನಗರಸಭೆ ಅಧ್ಯಕ್ಷ, ಪೌರಾಯುಕ್ತ ವಿರುದ್ಧವೂ ಆಕ್ರೋಶ

ನಗರಸಭೆ ಜಾಗ ಒತ್ತುವರಿ ಸಂಬಂಧ ಅಧಿಕಾರಿಗಳು ಅಂಗಡಿ ಮಾಲಕರಿಗೆ ನೋಟಿಸ್ ನೀಡಿದ ಬಳಿಕವೇ ಒತ್ತುವರಿ ತೆರವು ಮಾಡಬೇಕು ಎಂಬುದು ಸರಕಾರದ ಕಾನೂನಾಗಿದೆ. ಆದರೆ ಗೌರಿ ಕಾಲುವೆಯಲ್ಲಿ ಅಂಗಡಿ ಮುಂದೆ ಜೆಸಿಬಿ ನಿಲ್ಲಿಸಿಕೊಂಡು ಜಾಗ ತೆರವು ಮಾಡಿದ ರೀತಿ ಸರಿಯಲ್ಲ. ಜೆಸಿಬಿ ಯಂತ್ರ ತೋರಿಸಿ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸುವುದನ್ನು ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಕೈಬಿಡಬೇಕು. ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಪಕ್ಷವೊಂದರ ಕಾರ್ಯಕರ್ತರಂತೆ ವರ್ತಿಸಬಾರದು. ನಗರಸಭೆ ಅಧ್ಯಕ್ಷ, ಪೌರಾಯುಕ್ತರು ನೋಟಿಸ್ ನೀಡದೇ ಅಂಗಡಿ ಮಾಲಕರಿಗೆ ಜೆಸಿಬಿ ಯಂತ್ರ ತೋರಿಸಿ ಎಚ್ಚರಿಕೆ ನೀಡಿದ್ದು ಸರಿಯಲ್ಲ. ನಗರಸಭೆ ಜಾಗ ಒತ್ತುವರಿದಾರರ ಬಗ್ಗೆ ನಾನು ಮಾಹಿತಿ ನೀಡುತ್ತೇನೆ. ನಗರಸಭೆ ಅಧ್ಯಕ್ಷರು, ಪೌರಾಯುಕ್ತರಿಗೆ ತಾಕತ್ತಿದ್ದರೇ ತೆರವು ಮಾಡಲಿ ನೋಡೋಣ. ಅಮಾಯಕರನ್ನು ಬೆದರಿಸುವ ಕೃತ್ಯ ಮಾಡಬಾರದು.

- ಅಫ್ಜಲ್ ಪಾಷಾ, ಕಾರ್ಯಧ್ಯಕ್ಷ, ಸಿಟಿಜನ್ ಲೇಬರ್ ವೆಲ್ಫೇರ್ ಕಮಿಟಿ 

ಗೌರಿಕಾಲುವೆಯಲ್ಲಿ ಮಂಗಳವಾರ ಸ್ವಚ್ಛತಾ ಅಭಿಯಾನ ನಡೆಸಿದ್ದೇವೆ. ಅಲ್ಲಿದ್ದವರೆಲ್ಲರೂ ನಗರಸಭೆ ಅಧಿಕಾರಿ, ಸಿಬ್ಬಂದಿ, ಪೌರಕಾರ್ಮಿಕರು. ಅಲ್ಲಿನ ಅಂಗಡಿಯೊಂದರ ಮುಂದೆ ರಸ್ತೆ ಪಕ್ಷದ ಜಾಗದಲ್ಲಿ ಅಂಗಡಿ ಸಾಮಾನು ಜೋಡಿಸಿಟ್ಟಿದ್ದು, ಅದನ್ನು ತೆರವು ಮಾಡಲು ಸೂಚನೆ ನೀಡಿದ್ದೇವೆ. ಈ ವೇಳೆ ಚರಂಡಿ ತ್ಯಾಜ್ಯ ತೆಗೆಯಲು ಜೆಸಿಬಿ ಕೊಂಡೊಯ್ದಿದ್ದೇವೆ. ನಗರಸಭೆಯಿಂದ ಯಾವುದೇ ಬುಲ್ಡೋಜರ್ ಕಾರ್ಯಚರಣೆ ನಡೆಸಿಯೇ ಇಲ್ಲ. ಸರಕಾರಿ ಜಾಗ ಒತ್ತುವರಿ ಮಾಡಿದವರಿಗೆ ಈಗಾಗಲೇ ನೋಟಿಸ್ ನೀಡಿ ತೆರವು ಮಾಡುತ್ತಿದ್ದೇವೆ. ಯಾರೋ ಕಿಡಿಗೇಡಿಗಳು ತಿರುಚಿ ಹಾಕಿದ ಪೋಸ್ಟ್ ಗೆ ಪ್ರತಿಕ್ರಿಯಿಸಬಾರದು.

- ವರಸಿದ್ದಿ ವೇಣುಗೋಪಾಲ್

ವಿಡಿಯೋ ಪೋಸ್ಟ್ ಬಗ್ಗೆ ನನಗೆ ಮಾಹಿತಿ ಇಲ್ಲ. ಸ್ವಚ್ಛತಾ ಅಭಿಯಾನದ ವೇಳೆ ಚರಂಡಿ ಮೇಲೆ ಅಂಗಡಿಯವರು ಇಟ್ಟಿದ್ದ ವಸ್ತುಗಳನ್ನು ತೆರವು ಮಾಡಲು ಹೇಳಿದ್ದೇವೆ. ಅಲ್ಲಿದ್ದವರು ನಗರಸಭೆ ಅಧಿಕಾರಿ ಸಿಬ್ಬಂದಿಯೇ ಹೊರತು ಯಾವುದೇ ಸಂಘಟನೆಗಳ ಸದಸ್ಯರಲ್ಲ. ಬುಲ್ಡೋಜರ್ ಕಾರ್ಯಚರಣೆ ಎಂಬುದು ಹಾಸ್ಯಾಸ್ಪದ ಇಂತಹ ವಿಷಯಗಳ ಬಗ್ಗೆ ಗೊಂದಲು ಸೃಷ್ಟಿಸುವುದು ಕಿಡಿಗೇಡಿ ಕೃತ್ಯವಾಗಿದೆ.

-ಬಿ.ಸಿ.ಬಸವರಾಜು, ಪೌರಾಯುಕ್ತ
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X