ಕದ್ರಿ ಪ್ರೀಮಿಯರ್ ಲೀಗ್; ಮೋಹನ್ ಥಂಡರ್ಸ್‌ಗೆ ಕೆಪಿಎಲ್ ಟ್ರೋಫಿ

ಮಂಗಳೂರು : ನಗರದ ಉರ್ವ ಮೈದಾನದಲ್ಲಿ ಮೂರು ದಿನಗಳಕಾಲ ನಡೆದ ಕದ್ರಿ ಕ್ರಿಕೇಟರ್ಸ್ ಕ್ಲಬ್‌ನ ಎಂಟನೆ ಆವೃತ್ರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಕೆಪಿಎಲ್ ಟ್ರೋಫಿಯನ್ನು ಮೋಹನ್ ಕೊಪ್ಪಲ ಮಾಲಕತ್ವದ ಮೋಹನ್ ಥಂಡರ್ಸ್ ಪಡೆದುಕೊಂಡಿದೆ.
ಏಳು ತಂಡಗಳು ಭಾಗವಹಿಸಿದ್ದ ಪಂದ್ಯಾಟದಲ್ಲಿ ಕೆಪಿಎಲ್ ಟ್ರೋಫಿ ಮೋಹನ್ ಥಂಡರ್ಸ್ ಪಾಲಾದರೆ ರನ್ನರ್ ಅಪ್ ಪ್ರಶಸ್ತಿಯನ್ನು ಕಿಶೋರ್ ಡಿ. ಶೆಟ್ಟಿ ಮಾಲಕತ್ವದ ಲೀಡ್ಸ್ ನೈಟ್ ಟ್ರೇಡರ್ಸ್ ಪಡೆದುಕೊಂಡಿದೆ.
ಶಾಸಕ ವೇದವ್ಯಾಸ್ ಕಾಮತ್ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಲಯನ್ಸ್ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ಸಂಪುಟ ಕಾರ್ಯದರ್ಶಿ ಶಶಿಧರ್ ಮಾರ್ಲ, ತಂಡಗಳ ಮಾಲಕರಾದ ರತ್ನಾಕರ್ ಜೈನ್, ಸುಧೀರ್, ಗೋಕುಲ್ ಕದ್ರಿ, ಅಮೃತ್ ಕದ್ರಿ, ಲಕ್ಷ್ಮೀಶ್ ಭಂಡಾರಿ, ಸಂಸ್ಥೆಯ ಅಧ್ಯಕ್ಷ ದೀಪಕ್ ಸಾಲ್ಯಾನ್, ಆಸರೆ ಫ್ರೆಂಡ್ಸ್ ಅಧ್ಯಕ್ಷ ದಿನೇಶ್, ಕಾರ್ಪೋರೇಟರ್ ಗಣೇಶ್ ಕುಲಾಲ್, ಸೂರಜ್ ಶೇಟ್, ರಾಜೇಶ್ ಬೆಂಗ್ರೆ, ಪೆಡ್ರಿಕ್ ಪೌಲ್ ಉಪಸ್ಥಿತರಿದ್ದರು.
Next Story