ನವೋದಯ ಪ್ರವೇಶ ಪರೀಕ್ಷೆ; ನಿಷೇಧಾಜ್ಞೆ ಜಾರಿ
ಉಡುಪಿ : ಪ್ರಸಕ್ತ ಸಾಲಿನ ನವೋದಯ ವಿದ್ಯಾಲಯ ಸಂಸ್ಥೆಯ ೬ನೇ ತರಗತಿ ಪ್ರವೇಶ ಪರೀಕ್ಷೆಯು ಜಿಲ್ಲೆಯ 7 ಪರೀಕ್ಷಾ ಕೇಂದ್ರಗಳಲ್ಲಿ ಎ.30ರಂದು ನಡೆಯಲಿದೆ.
ಈ ಪರೀಕ್ಷೆಗಳು ಮುಕ್ತಾಯವಾಗುವವರೆಗೆ ಸಂಬಂಧಿಸಿದ ಪರೀಕ್ಷಾ ಕೇಂದ್ರ ಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಶಿಸ್ತು ಮತ್ತು ಶಾಂತಿಯನ್ನು ಕಾಪಾಡುವ ಸಲುವಾಗಿ, ಪರೀಕ್ಷೆಗಳನ್ನು ದೋಷರಹಿತವಾಗಿ ನಡೆಸಲು ಮತ್ತು ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟಲು, ನಿಗದಿಪಡಿಸಿದ ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ಮೀ. ಪ್ರದೇಶವನ್ನು ಬೆಳಗ್ಗೆ ೧೦:೩೦ರಿಂದ ಅಪರಾಹ್ನ ೨:೩೦ರವರೆಗೆ ನಿಷೇಧಿತ ಪ್ರದೇಶ ವೆಂದು ಘೋಷಿಸಿ, ೧೪೪(೧) ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶ ಹೊರಡಿಸಿದ್ದಾರೆ.
Next Story