ಮಂಗಳೂರು: ರಾಷ್ಟ್ರೀಯ ಸೀನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಗೆ ಚಾಲನೆ

ಮಂಗಳೂರು : ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಸಹಯೋಗದೊಂದಿಗೆ ಶ್ರೀ ಬಾಲಾಂಜನೇಯ ಜಿಮ್ನಾಶಿಯಂ ತನ್ನ 75ನೇ ವರ್ಷಾಚರಣೆಯ ಅಂಗವಾಗಿ 47ನೇ ಪುರುಷರ ಹಾಗೂ 39ನೇ ಮಹಿಳೆಯರ ರಾಷ್ಟ್ರೀಯ ಸೀನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್-2022 ಸ್ಪರ್ಧೆಗೆ ಬುಧವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚಾಲನೆ ನೀಡಲಾಯಿತು.
ದೇಶದ ವಿವಿಧ ಭಾಗಗಳಿಂದ ವಿಶ್ವ ಹಾಗೂ ಏಷ್ಯನ್ ದಾಖಲೆ ಮಾಡಿದ 500ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಸ್ಪರ್ಧೆಗೆ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಚಾಲನೆ ನೀಡಿದರು.
ಪವರ್ ಲಿಫ್ಟಿಂಗ್ ಇಂಡಿಯಾದ ಅಧ್ಯಕ್ಷ ರಾಜೇಶ್ ತಿವಾರಿ ಕಲಶ ಅನಾವರಣಗೊಳಿಸಿದರು. ಉದ್ಯಮಿ ಪ್ರದೀಪ್ ಶೆಟ್ಟಿ ಪವರ್ ಲಿಫ್ಟಿಂಗ್ ಬಾರನ್ನು ತಳ್ಳುವ ಮೂಲಕ ಸಾಂಕೃತಿಕವಾಗಿ ಚಾಲನೆ ನೀಡಿದರು.
ವೇದಿಕೆಯಲ್ಲಿ ಮುಡಾ ಮಾಜಿ ಅಧ್ಯಕ್ಷ ತೇಜೋಮಯ, ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ, ಮಾಜಿ ಮೇಯರ್ ಪುರಂದರ ದಾಸ್ ಕೂಳೂರು,ಬಾಲಾಂಜನೇಯ ಜಿಮ್ನಾಶಿಯಂನ ಅಧ್ಯಕ್ಷ ಉಮೇಶ್ ಗಟ್ಟಿ, ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್‌ನ ಖಜಾಂಚಿ ಜಯರಾಂ ಎಂ., ಮಧುಚಂದ್ರ, ಪಿ.ಜೆ. ಜೋಸೆಫ್, ಅನುರಾಗ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.