ಸುಳ್ಯ : ಸ್ನಾತಕೋತ್ತರ ವೈದ್ಯಕೀಯ ಪರೀಕ್ಷೆಯಲ್ಲಿ ಸ್ವಾತಿ ಪೂಜಾರಿಗೆ ದ್ವಿತೀಯ ರ್ಯಾಂಕ್

ಸ್ವಾತಿ
ಸುಳ್ಯ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ 2020-21ರಲ್ಲಿ ನಡೆಸಿದ ಸ್ನಾತಕೋತ್ತರ ವೈದ್ಯಕೀಯ ಪರೀಕ್ಷೆಯಲ್ಲಿ ಸ್ವಾತಿ ಎಸ್. ಪೂಜಾರಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ.
ಇವರು ಪುತ್ತೂರು ನೈತ್ತಾಡಿ ನಿವಾಸಿ ಆಗಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುತ್ತೂರು ಶಾಖೆಯ ಉದ್ಯೋಗಿ ಆಗಿರುವ ಶಾಂತಪ್ಪ ಪೂಜಾರಿ ಕೆ ಮತ್ತು ಕಸ್ತೂರಿ ದಂಪತಿಯ ಪುತ್ರಿ ಹಾಗೂ ಶ್ರವಣ್ ಕೋಟೆಕಾರ್ ಅವರ ಪತ್ನಿ.
ಪ್ರಸ್ತುತ ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ರಿಸರ್ಚ್ ಸೆಂಟರ್ನಲ್ಲಿ ಸೀನಿಯರ್ ರೆಸಿಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಳ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ ನಿವೃತ್ತ ಉಪ ತಹಸೀಲ್ದಾರ್ ಪಡಿಕಿಲ್ಲಾಯ ಭಾಸ್ಕರ ಪೂಜಾರಿ ಮತ್ತು ಸುಂದರಿ ದಂಪತಿಯ ಮೊಮ್ಮಗಳು.
Next Story





