ಈ ತಿಂಗಳಳೊಳಗೆ ಹಲವರು ಬಿಜೆಪಿಗೆ ಸೆರ್ಪಡೆಯಾಗಲಿದ್ದಾರೆ: ಸಚಿವ ಆರ್.ಅಶೋಕ್

ಹಾಸನ: ಒಬ್ಬರ ಹೆಸರು ಬೇಡ, ಒಂದು ತಿಂಗಳೊಳಗೆ ಬಹಳಷ್ಟು ಜನ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಯಗಳಿಸಿದ ರೀತಿ ನಾವು ಕರ್ನಾಟಕದಲ್ಲಿ ಜಯಗಳಿಸುವ ಬಗ್ಗೆ ಈಗಾಗಲೇ ಹೈಕಮಾಂಡ್ ನೀಲನಕ್ಷೆ ನೀಡಿದ್ದು, ನಾವು ಕರ್ನಾಟಕದಲ್ಲಿ ಜಯಭೇರಿ ಭಾರಿಸುತ್ತೆವೆ. ಇಡಿ ದೇಶ ಮತ್ತು ರಾಜ್ಯದಲ್ಲಿ ಯಾರಾದರೂ ಇದ್ದರೇ ಭ್ರಷ್ಟಾಚಾರದ ಪಿತಾಮಹ ಇದ್ದರೆ ಅದು ಕಾಂಗ್ರೆಸ್ ಪಕ್ಷ' ಎಂದು ಹೇಳಿದರು.
'ಕಾಂಗ್ರೆಸ್ ಮಾತನಾಡುವುದು ನೋಡಿದರೆ ಭೂತದ ಭಾಯಲ್ಲಿ ಭಗವದ್ಗಿತೆ ಮಾತನಾಡಿದ ಹಾಗೆ ಶೇಕಡ 40 ಕಮಿಷನ್ ಆರೋಪ ಕಾಂಗ್ರೆಸ್ ನವರು ನಮ್ಮ ಮೇಲೆ ಗೂಬೆ ಕೂರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸ್ಥಿತಿ ಇಂದು ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದ ಹಾಗೆ ಇವರಿಂದ ಪಾಠ ಕಲಿಯ ಅವಶ್ಯಕತೆ ಬಿಜೆಪಿ ಪಕ್ಷಕ್ಕೆ ಬಂದಿಲ್ಲ ಎಂದು ಹೇಳಿದರು.
Next Story





