Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದಿ ಗ್ರೇಟ್ ಇಂಡಿಯನ್ ಪಾವರ್ಟಿ ಡಿಬೇಟ್,...

ದಿ ಗ್ರೇಟ್ ಇಂಡಿಯನ್ ಪಾವರ್ಟಿ ಡಿಬೇಟ್, 2.0

ಜಸ್ಟಿನ್ ಸ್ಯಾಂಡಫರ್ಜಸ್ಟಿನ್ ಸ್ಯಾಂಡಫರ್28 April 2022 12:41 PM IST
share
ದಿ ಗ್ರೇಟ್ ಇಂಡಿಯನ್ ಪಾವರ್ಟಿ ಡಿಬೇಟ್, 2.0

ಮೋದಿ ಸರಕಾರವು ಬಡತನ ನಿವಾರಣೆಯ ವೇಗವನ್ನು ಹೆಚ್ಚಿ ಸಿದೆಯೇ ಅಥವಾ ತಗ್ಗಿಸಿದೆಯೇ? ಭಾರತವು ಬಡತನವನ್ನು ಅಳೆಯುವುದನ್ನು ಪರಿಣಾಮಕಾರಿಯಾಗಿ ನಿಲ್ಲಿಸಿರುವುದರಿಂದ ಇದನ್ನು ತಿಳಿದುಕೊಳ್ಳುವುದು ಕಷ್ಟ. ದಿನಕ್ಕೆ 1.90 ಡಾ.ಗೂ ಕಡಿಮೆ ಆದಾಯದೊಂದಿಗೆ ಬದುಕುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಆದರೆ ಅದು ನಾವು ಭಾವಿಸಿರುವುದಕ್ಕಿಂತ ಹೆಚ್ಚು ಅಂದರೆ ಸುಮಾರು ಶೇ.10ರಷ್ಟಿದೆ ಎಂದು ಖಾಸಗಿ ಕ್ಷೇತ್ರದ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡಿರುವ ವಿಶ್ವಬ್ಯಾಂಕಿನ ಹೊಸ ವರದಿಯು ಬೆಟ್ಟು ಮಾಡಿದೆ.

ಇದಕ್ಕೆ ವಿರುದ್ಧವಾಗಿ, ಕಡುಬಡತನವನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸುವಲ್ಲಿ ಭಾರತವು ಹೆಚ್ಚುಕಡಿಮೆ ಚೀನಾದ ಸಾಲಿಗೆ ಸೇರಿದೆ ಎಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಲ್ಲಿ ಭಾರತದ ಪ್ರತಿನಿಧಿಯ ವರದಿಯು ಹೇಳಿದೆ.

ಕಳೆದೊಂದು ದಶಕದಲ್ಲಿ ಭಾರತವು ಬಡತನ ಕುರಿತು ಯಾವುದೇ ಅಧಿಕೃತ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿಲ್ಲ.

2000ದ ದಶಕದ ಆರಂಭದಲ್ಲಿ ಅರ್ಥಶಾಸ್ತ್ರಜ್ಞರು ಭಾರತದ 1990ರ ದಶಕದಲ್ಲಿಯ ಉದಾರೀಕರಣ ನೀತಿಯು ಬಡತನವನ್ನು ಎಷ್ಟರ ಮಟ್ಟಿಗೆ ಕಡಿಮೆ ಮಾಡಿದೆ ಎನ್ನುವುದರ ಕುರಿತು ಬಿರುಸಿನ ಚರ್ಚೆಯಲ್ಲಿ ತೊಡಗಿಕೊಂಡಿದ್ದರು. ಅದನ್ನು ‘ದಿ ಗ್ರೇಟ್ ಇಂಡಿಯನ್ ಪಾವರ್ಟಿ ಡಿಬೇಟ್(ಭಾರತದಲ್ಲಿ ಬಡತನ ಕುರಿತು ಬೃಹತ್ ಚರ್ಚೆ)’ ಎಂದು ಹೆಸರಿಸಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಆ್ಯಂಗಸ್ ಡೀಟನ್ ಮತ್ತು ವ್ಯಾಲೆರಿ ಕೊಜೆಲ್ ಅವರು, ವಿವಿಧ ಹೇಳಿಕೆಗಳು ಹೆಚ್ಚಿನಂಶ ಸ್ಪಷ್ಟವಾಗಿ ರಾಜಕೀಯ ಸ್ವರೂಪದ್ದಾಗಿವೆ, ಆದರೆ ಹಲವಾರು ಪ್ರಮುಖ ಅಂಕಿ ಅಂಶ ವಿಷಯಗಳೂ ಇವೆ’ ಎಂದು ಬೆಟ್ಟು ಮಾಡಿದ್ದರು. ಇಪ್ಪತ್ತು ವರ್ಷಗಳ ಬಳಿಕ ಈಗ ಇತಿಹಾಸವು ಮರುಕಳಿಸುತ್ತಿದೆ.

2014ರಲ್ಲಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿಯವರು ಬಡತನ ತಗ್ಗಿಸಲು ಸೂಕ್ತವಾಗಿದ್ದಾರೆಯೇ ಎನ್ನುವುದು ಈಗಿನ ಚರ್ಚೆಗಳ ಹಿಂದಿರುವ ಪ್ರಶ್ನೆಯಾಗಿದೆ. ತಾಂತ್ರಿಕ ದೃಷ್ಟಿಕೋನದಿಂದ ಈ ಚರ್ಚೆಯು ಆಸಕ್ತಿದಾಯಕವಾಗಿದೆ, ಏಕೆಂದರೆ ದತ್ತಾಂಶಗಳು ಅಷ್ಟು ಕೆಟ್ಟದಾಗಿವೆ. ದತ್ತಾಂಶಗಳು ಉತ್ತಮವಾಗಿದ್ದರೆ ಆಲಂಕಾರಿಕ ಆರೋಪಗಳ ಅಗತ್ಯವಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಅಂಕಿ ಅಂಶ ವ್ಯವಸ್ಥೆಯು ಪ್ರಶ್ನೆಗೆ ಒಳಗಾಗಿರುವ ಕಾರಣ ಸತ್ಯಗಳು ಬಯಲಿಗೆ ಬರಬೇಕಿವೆ.

2011-12ರಲ್ಲಿಯೇ ಬಡತನ ಮಾಪನವು ನಿಂತುಹೋಗಿದೆ. ಇದರ ಹಿಂದೆ ಕೆಟ್ಟ ಸುದ್ದಿಗಳ ಸುಳಿವುಗಳಿವೆ. 2017-18ರ ರಾಷ್ಟ್ರೀಯ ಮಾದರಿ ಸರ್ವೆಯ ಸೋರಿಕೆಯಾಗಿರುವ ದತ್ತಾಂಶಗಳು ಆರು ವರ್ಷಗಳಲ್ಲಿ ನಿಜವಾದ ಬಳಕೆಯಲ್ಲಿ ಶೇ.3.7ರಷ್ಟು ತೀವ್ರ ಕುಸಿತವಾಗಿದ್ದನ್ನು ತೋರಿಸಿತ್ತು ಮತ್ತು ಈ ಸಮೀಕ್ಷೆಯ ವರದಿ ಎಂದೂ ಬಿಡುಗಡೆಯಾಗಲೇ ಇಲ್ಲ.

ಅಧಿಕೃತ ಸರ್ವೇಯ ದತ್ತಾಂಶಗಳ ಅನುಪಸ್ಥಿತಿಯಲ್ಲಿ ಈ ತಿಂಗಳು ಬಿಡುಗಡೆಗೊಂಡಿರುವ ಎರಡು ವರದಿಗಳು ಅಂತರವನ್ನು ತುಂಬಲು ಸೃಜನಶೀಲ ಪರಿಹಾರಗಳನ್ನು ಮುಂದಿರಿಸಿವೆ ಮತ್ತು ಬಡತನಕ್ಕೆ ಏನು ಆಗುತ್ತಿರಬಹುದು ಎನ್ನುವುದರ ಬಗ್ಗೆ ಸಂಪೂರ್ಣ ವಿಭಿನ್ನವಾದ ನಿರ್ಧಾರಗಳಿಗೆ ತಲುಪಿವೆ.

2019ರಲ್ಲಿ ಭಾರತದಲ್ಲಿ ಕಡುಬಡತನವು ಹಿಂದೆ ಭಾವಿಸಿದ್ದಕ್ಕಿಂತ ಹೆಚ್ಚು ಅಂದರೆ ಶೇ.10.2ರಷ್ಟಿತ್ತು ಎಂದು ವಿಶ್ವಬ್ಯಾಂಕ್ ಸಂಶೋಧಕರ ಹೊಸ ವರದಿಯು ಅಂದಾಜಿಸಿದೆ.

ಭಾರತೀಯ ಬಡತನದ ಹೊಸ ಅಂದಾಜಿಗೆ ಬರಲು ಸುರಿತಾ ರಾಯ್ ಮತ್ತು ರಾಯ್ ವ್ಯಾನ್ ಡೆರ್ ವೀಡೆ ಅವರು ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಇಕಾನಮಿ (ಸಿಎಂಐಇ)ಯು ಕುಟುಂಬಗಳ ವೆಚ್ಚಗಳ ಕುರಿತು ನಡೆಸಿದ್ದ ಸಮೀಕ್ಷೆಯ ದತ್ತಾಂಶಗಳನ್ನು ಬಳಸಿಕೊಂಡಿದ್ದಾರೆ. ಇದೇನೂ ಸಣ್ಣ ಸಾಧನೆಯಲ್ಲ. ಅಧಿಕೃತ ದತ್ತಾಂಶ ಬಿಡುಗಡೆ 2011ರಲ್ಲಿ ಸ್ಥಗಿತಗೊಂಡ ಬಳಿಕ 2014ರಲ್ಲಿಯಷ್ಟೇ ಸಿಎಂಐಇ ತನ್ನ ಕನ್ಸೂಮರ್ ಪಿರಾಮಿಡ್ ಹೌಸ್‌ಹೋಲ್ಡ್ ಸರ್ವೇಯನ್ನು ಆರಂಭಿಸಿತ್ತು. ಅದರ ಮಾದರಿಯು ಬಡ ಕುಟುಂಬಗಳನ್ನು ಕಡಿಮೆಯಾಗಿ ಲೆಕ್ಕ ಹಾಕಿರುವಂತಿದೆ ಮತ್ತು ಬಳಕೆ ಕುರಿತು ಕೇಳಲಾಗುವ ಪ್ರಶ್ನೆಗಳಲ್ಲಿ ಸಣ್ಣ ವ್ಯತ್ಯಾಸಗಳೂ ದೊಡ್ಡ ವ್ಯತ್ಯಾಸಗಳಿಗೆ ಕಾರಣವಾಗುತ್ತವೆ.

ಖರೀದಿ ಶಕ್ತಿಯ ಸಮಾನತೆಯಲ್ಲಿ ವಿಶ್ವಬ್ಯಾಂಕಿನ ಪ್ರತಿದಿನಕ್ಕೆ 1.90 ಡಾ.ಗೂ ಕಡಿಮೆ ಆದಾಯದ ಮಾನದಂಡವನ್ನು ಬಳಸಿಕೊಂಡು ತೀವ್ರ ಬಡತನವು 2011ರಿಂದ 2019ರ ಅವಧಿಯಲ್ಲಿ 12.3 ಶೇಕಡಾವಾರು ಅಂಶಗಳಷ್ಟು ಕಡಿಮೆಯಾಗಿದೆ; 2019ರಲ್ಲಿ ಬಡತನ ಶೇ.10.2ರಷ್ಟಿದ್ದು ಇದು ಹಿಂದಿನ ಅಂದಾಜುಗಳಿಗಿಂತ ಹೆಚ್ಚಿದೆ; 2016ರ ನೋಟು ನಿಷೇಧ ಸಂದರ್ಭದಲ್ಲಿ ನಗರ ಬಡತನ ಶೇ.2ರಷ್ಟು ಏರಿಕೆಯಾಗಿತ್ತು ಮತ್ತು 2019ರಲ್ಲಿ ಆರ್ಥಿಕತೆ ಮಂದಗೊಂಡಾಗ ಗ್ರಾಮೀಣ ಬಡತನ ಇಳಿಕೆಯು ಸ್ಥಗಿತಗೊಂಡಿತ್ತು; 2011ರಿಂದ ಅಸಮಾನತೆ ಹೆಚ್ಚುವುದು ನಿಂತಿದೆ- ಇವು ವಿಶ್ವಬ್ಯಾಂಕ್ ವರದಿಯಲ್ಲಿನ ನಾಲ್ಕು ಪ್ರಾಥಮಿಕ ಪ್ರತಿಪಾದನೆಗಳಾಗಿವೆ. ರಾಯ್ ಮತ್ತು ವೀಡೆ ಅವರ ಅಂದಾಜು ಕೊಂಚ ಆಶಾದಾಯಕವಾಗಿ ಕಂಡು ಬಂದಿರಬಹುದು. ಆದರೆ ಐಎಂಎಫ್ ವರದಿ ಹೇಳುವುದೇ ಬೇರೆ...

ವಿಶ್ವಬ್ಯಾಂಕ್ ವರದಿ ಬಿಡುಗಡೆಗೊಂಡ ವಾರದಲ್ಲಿಯೇ ಹೊರಬಿದ್ದಿರುವ ಐಎಂಎಫ್‌ನಲ್ಲಿ ಭಾರತದ ಪ್ರತಿನಿಧಿಯಾಗಿರುವ ಸುರ್ಜಿತ್ ಭಲ್ಲಾ ಅವರು ಸಿದ್ಧಗೊಳಿಸಿರುವ ವರದಿಯು ಭಾರತವು 2019ರಲ್ಲಿ ಕಡುಬಡತನವನ್ನು ನಿರ್ಮೂಲನಗೊಳಿಸಿದೆ ಮತ್ತು ಸಾಂಕ್ರಾಮಿಕದ ಅವಧಿಯಲ್ಲಿ ಅದು ಶೂನ್ಯಕ್ಕೆ ಸಮೀಪವಿತ್ತು ಎಂದು ಹೇಳಿದೆ.

ಭಾರತವು ಕಡು ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸಿದೆ. ಸಾಂಕ್ರಾಮಿಕದ ಮೊದಲು 1.90 ಡಾ. ದೈನಂದಿನ ಆದಾಯದ ಜನಸಂಖ್ಯೆ ಕೇವಲ 0.8ರಷ್ಟಿತ್ತು; ಸಾಂಕ್ರಾಮಿಕವು ಬಡತನವನ್ನು ಹೆಚ್ಚಿಸಿಲ್ಲ, ಬದಲಿಗೆ 2020ರ ಸಾಂಕ್ರಾಮಿಕದ ವರ್ಷದಲ್ಲಿ ಅದು ಆ ಮಟ್ಟದಲ್ಲಿರಲು ಉಚಿತ ಪಡಿತರ ಪೂರೈಕೆ ಪ್ರಮುಖ ಪಾತ್ರವನ್ನು ವಹಿಸಿತ್ತು; 1993-94ರಿಂದ ಅಸಮಾನತೆಯು ಕನಿಷ್ಠ ಮಟ್ಟಕ್ಕೆ ಇಳಿದಿದೆ; ಇದು ಭಲ್ಲಾ ಮತ್ತು ವರದಿಯ ಸಹಲೇಖಕರಾದ ಕರಣ್ ಭಾಸಿನ್ ಮತ್ತು ಅರವಿಂದ್ ವೀರಮಣಿ ಅವರು ಕಂಡುಕೊಂಡಿರುವ ಅಂಶಗಳಾಗಿವೆ.

ಹಿಂದಿನ ಅಂದಾಜುಗಳು ಬಡತನವನ್ನು ಅತಿಯಾಗಿ ಅಂದಾಜಿಸಿವೆ, ಏಕೆಂದರೆ ಅವು ಆಹಾರ ಸಾಮಗ್ರಿಗಳ ಮೇಲಿನ ನೈಜ ವೆಚ್ಚದ ಸಮೀಕ್ಷೆ ಕ್ರಮಗಳನ್ನು ಮಾತ್ರ ನೆಚ್ಚಿಕೊಂಡಿದ್ದವು ಮತ್ತು ತನ್ಮೂಲಕ ಭಾರತದ ಬೃಹತ್ ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಸರಕಾರಿ ಸಬ್ಸಿಡಿಯನ್ನು ಬಿಟ್ಟುಬಿಟ್ಟಿದ್ದವು ಎನ್ನುವುದು ಭಲ್ಲಾರ ವರದಿಯಲ್ಲಿನ ಆಸಕ್ತಿಕರ ಹೇಳಿಕೆಯಾಗಿದೆ. ಸಾರ್ವಜನಿಕ ವಿತರಣೆ ವ್ಯವಸ್ಥೆಯಿಂದ ಆಡಳಿತಾತ್ಮಕ ದತ್ತಾಂಶಗಳನ್ನು ಮತ್ತು ವಿವಿಧ ಊಹೆಗಳನ್ನು ಬಳಸಿಕೊಂಡು ಭಲ್ಲಾರ ತಂಡ ಗಣನೀಯವಾಗಿ ಕಡಿಮೆ ಬಡತನ ದರದ ನಿರ್ಧಾರಕ್ಕೆ ಬಂದಿದೆ.

ಸಾರ್ವಜನಿಕ ವಿತರಣೆ ವ್ಯವಸ್ಥೆಯಿಂದ ಸೋರಿಕೆಯನ್ನು ಮತ್ತು ವ್ಯಾಪಕವಾಗಿರುವ ಸೇರ್ಪಡೆ ಮತ್ತು ಹೊರಗಿಡುವಿಕೆ ತಪ್ಪುಗಳನ್ನು ಭಲ್ಲಾರ ವರದಿಯು ಹೇಗೆ ನಿರ್ವಹಿಸಿದೆ ಎನ್ನುವುದು ನನಗೆ ಸ್ಪಷ್ಟವಾಗಿಲ್ಲ.

ಆದರೆ ನನ್ನ ಸೆಂಟರ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್‌ನ ಸಹೋದ್ಯೋಗಿಗಳು ಇತ್ತೀಚೆಗೆ ನಡೆಸಿರುವ ಸಮೀಕ್ಷೆಯು ಸಾಂಕ್ರಾಮಿಕದ ಸಂದರ್ಭದಲ್ಲಿ ಪಡಿತರ ವಿತರಣೆ ವ್ಯವಸ್ಥೆಯು ಉತ್ತಮವಾಗಿತ್ತು ಎನ್ನುವುದನ್ನು ಕಂಡುಕೊಂಡಿದೆ. ಹೀಗಾಗಿ ಮೋದಿಯವರ ಹೊಸ ಕಲ್ಯಾಣ ನೀತಿಗಳು ಹೆಚ್ಚೆಂದರೆ ಒಂದೆರಡು ಶೇಕಡಾವಾರು ಅಂಶಗಳಷ್ಟು ಪರಿಣಾಮ ಬೀರಿದ್ದರೂ ಅವು ರಾಷ್ಟ್ರೀಯ ಬಡತನವನ್ನು ಎಷ್ಟರ ಮಟ್ಟಿಗೆ ತಗ್ಗಿಸಿರಬಹುದು ಎಂಬ ಕುರಿತು ಭಲ್ಲಾ ತಂಡದ ಪ್ರಶ್ನೆಯು ಆಸಕ್ತಿಕರ ಮತ್ತು ಮುಖ್ಯವಾಗಿದೆ.

ಭಲ್ಲಾರ ‘ಶೂನ್ಯ ಬಡತನದ’ ಲೆಕ್ಕಾಚಾರವು ಎದುರಿಸುತ್ತಿರುವ ತೀವ್ರ ಸವಾಲು ಅದು ಅಧಿಕೃತ ರಾಷ್ಟ್ರೀಯ ಲೆಕ್ಕಪತ್ರಗಳ ದತ್ತಾಂಶಗಳನ್ನು ನೆಚ್ಚಿಕೊಂಡಿದೆ ಎನ್ನುವುದು. ಈ ದತ್ತಾಂಶಗಳು ನಿಜವಾದ ಬಡತನ ಕಡಿತವನ್ನು ಉತ್ಪ್ರೇಕ್ಷಿಸಿವೆ ಎನ್ನುವುದನ್ನು ವಿವಿಧ ಪುರಾವೆಗಳು ಸೂಚಿಸಿವೆ.

ಭಾರತೀಯ ಬಡತನ ಕುರಿತು ಹಲವಾರು ವಾದವಿವಾದಗಳು ನಡೆಯುತ್ತಲೇ ಇವೆ. ಒಟ್ಟಾರೆಯಾಗಿ ಹೇಳುವುದಾದರೆ ಸದ್ಯೋಭವಿಷ್ಯದಲ್ಲಿ ಈ ಚರ್ಚೆಗೆ ಯಾವುದೇ ಪರಿಹಾರ ದೊರೆಯುವ ಸಾಧ್ಯತೆಯಿಲ್ಲ. ಆದರೆ ರಾಷ್ಟ್ರೀಯ ಲೆಕ್ಕಪತ್ರಗಳ ಮೇಲಿನ ಅವಲಂಬನೆಯು ಅದಕ್ಕೆ ರಾಜಕೀಯ ರಂಗು ನೀಡುತ್ತದೆ. 2011-12ರ ಶೇ.22.5 ಅಂದಾಜಿನಿಂದ ಹಿಡಿದು ಭಲ್ಲಾ ಅವರು ಹೇಳಿರುವಂತೆ 2019ರಲ್ಲಿ ಸುಮಾರಾಗಿ ನಿರ್ಮೂಲನ ಮತ್ತು ರಾಯ್ ಮತ್ತು ವೀಡೆ ಅವರ 2019ರ ಅಂದಾಜು ಶೇ.10ರವರೆಗೆ ಬಡತನ ಕುರಿತು ವಿವಿಧ ಅಂದಾಜುಗಳು ಸದ್ಯ ನಮ್ಮೆದುರಿನಲ್ಲಿ ಇವೆ.

ಅಧಿಕೃತ ಕುಟುಂಬ ಸರ್ವೇಗಳ ಪ್ರಾಮಾಣಿಕತೆಯ ಮರುಸ್ಥಾಪನೆಯವರೆಗೆ ಬಡತನವನ್ನು ಕಡಿಮೆ ಮಾಡಲು ಮೋದಿ ಸರಕಾರದ ಪ್ರಯತ್ನಗಳ ಕುರಿತು ಯಾವುದೇ ನಿರ್ಣಯವು ಹೆಚ್ಚೆಂದರೆ ತಾತ್ಕಾಲಿಕವಾಗುತ್ತದೆ ಮತ್ತು ‘ದಿ ಗ್ರೇಟ್ ಇಂಡಿಯನ್ ಪಾವರ್ಟಿ ಡಿಬೇಟ್’ ಮುಂದುವರಿಯುತ್ತಲೇ ಇರುತ್ತದೆ.

(ಕೃಪೆ: scroll.in)

share
ಜಸ್ಟಿನ್ ಸ್ಯಾಂಡಫರ್
ಜಸ್ಟಿನ್ ಸ್ಯಾಂಡಫರ್
Next Story
X