ಮುಸ್ಲಿಮರ ವಿರುದ್ಧ ಹಿಂಸಾಚಾರ ಕಂಡು ಜಿಗುಪ್ಸೆಯಾಗುತ್ತಿದೆ: ಅಂತಾರಾಷ್ಟ್ರೀಯ ಮಾಡೆಲ್ ಪದ್ಮಲಕ್ಷ್ಮಿ ಕಳವಳ

Photo: facebook.com/padmalakshmi
ಮುಂಬೈ.ಎ.28: ಭಾರತದಲ್ಲಾಗಲಿ ಅಥವಾ ಜಗತ್ತಿನ ಉಳಿದ ಕಡೆಗಳಲ್ಲಾಗಲಿ ಹಿಂದೂ ಧರ್ಮಕ್ಕೆ ಯಾವುದೇ ಬೆದರಿಕೆ ಎದುರಾಗಿಲ್ಲವೆಂದು ಭಾರತ-ಅಮೆರಿಕನ್ ರೂಪದರ್ಶಿ ಪದ್ಮಲಕ್ಷ್ಮಿ ಬುಧವಾರ ತಿಳಿಸಿದ್ದಾರೆ. ಈ ಪುರಾತನ ಹಾಗೂ ವಿಶಾಲವಾದ ನೆಲದಲ್ಲಿ ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಬಾಳಲು ಶಕ್ತರಾಗಬೇಕೆಂದು ಅವರು ಕರೆ ನೀಡಿದ್ದಾರೆ. ಭಾರತದಲ್ಲಿ ಮುಸ್ಲಿಂ ವಿರೋಧಿ ವಾಕ್ ಪ್ರಹಾರವು ವ್ಯಾಪಕವಾಗಿದೆಯೆಂದು ಆತಂಕ ವ್ಯಕ್ತಪಡಿಸಿ 51 ವರ್ಷದ ಪದ್ಮಲಕ್ಷ್ಮಿ ಅವರು ಟ್ವೀಟ್ ಮಾಡಿದ್ದಾರೆ. ಭೀತಿಯನ್ನು ಹರಡುವ ಹಾಗೂ ಅಪಪ್ರಚಾರದ ಮಾತುಗಳಿಗೆ ಹಿಂದೂಗಳು ಬಲಿಯಾಗಬಾರದೆಂದು ಅವರು ಕರೆ ನೀಡಿದ್ದಾರೆ.ಹನುಮಾನ್ ಜಯಂತಿಯ ಸಂದರ್ಭದಲ್ಲಿ ದಿಲ್ಲಿಯ ಜಹಾಂಗೀರ್ಪುರಿ ಪ್ರದೇಶ ಹಾಗೂ ಮಧ್ಯಪ್ರದೇಶದ ಖಾರ್ಗೋನ್ ನಗರದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಗಳ ಬಗ್ಗೆ ದಿ ಗಾರ್ಡಿಯನ್ ಹಾಗೂ ಲಾಸ್ ಏಂಜಲೀಸ್ ಟೈಮ್ಸ್ನಂತಹ ಅಂತಾರಾಷ್ಟ್ರೀಯ ಪತ್ರಿಕೆಗಳು ಪ್ರಕಟಿಸಿರುವ ಸುದ್ದಿಗಳನ್ನು ಕೂಡಾ ಅವರು ಟ್ವೀಟ್ ಜೊತೆ ಲಗತ್ತಿಸಿದ್ದಾರೆ.‘ ನೈಜ ಆಧ್ಯಾತ್ಮಿಕತೆ’ಯಲ್ಲಿ ದ್ವೇಷಕ್ಕೆ ಯಾವುದೇ ಸ್ಥಾನವಿಲ್ಲವೆಂದವರು ಹೇಳಿದ್ದಾರೆ.
‘‘ಭಾರತದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಸಂಭ್ರಮಿಸುತ್ತಿರುವುದನ್ನು ಕಂಡು ಜಿಗುಪ್ಸೆಯಾಗುತ್ತದೆ. ವ್ಯಾಪಕವಾದ ಮುಸ್ಲಿಂ ವಿರೋಧಿ ವಾಕ್ಪ್ರಹಾರವು ಜನರಲ್ಲಿ ಭೀತಿಯನ್ನು ಹಾಗೂ ಅವರ ಮನದಲ್ಲಿ ವಿಷಬೀಜವನ್ನು ಬಿತ್ತುತ್ತದೆ. ಇಂತಹ ಅಪಪ್ರಚಾರವು ಅತ್ಯಂತ ಅಪಾಯಕರವಾಗಿದೆ ಹಾಗೂ ನೀಚತದಿಂದ ಕೂಡಿದೆ. ಯಾಕೆಂದರೆ ನಿಮಗಿಂತ ಕಡಿಮೆಯವರೆಂದು ನೀವು ಯಾರನ್ನಾದರೂ ಪರಿಗಣಿಸಿದಲ್ಲಿ ಅವರ ದಮನದಲ್ಲಿ ಪಾಲ್ಗೊಳ್ಳುವುದು ತುಂಬಾ ಸುಲಭವಾಗುತ್ತದೆ ಎಂದು ಆಕೆ ಬರೆದಿದ್ದಾರೆ.
ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಜೊತೆಯಾಗಿ ಬಾಳಬೇಕೆಂದು ‘‘ಟಾಪ್ಚೆಫ್’’ ಟಿವಿ ಶೋ ಮೂಲಕ ಜನಪ್ರಿಯರಾಗಿರುವ ಪದ್ಮಲಕ್ಷ್ಮಿ ಟ್ವೀಟಿಸಿದ್ದಾರೆ.ಹಿಂದೂ ಬಾಂಧವರೇ, ಈ ರೀತಿಯ ಭೀತಿ ಹರಡುವಿಕೆಗೆ ಬಲಿಯಾಗದಿರಿ. ಭಾರತದಲ್ಲಾಗಲಿ, ಇತರೆಡೆಯಾಗಲಿ ಹಿಂದೂಧರ್ಮಕ್ಕೆ ಯಾವುದೇ ಬೆದರಿಕೆಯುಂಟಾಗಿಲ್ಲ. ನೈಜ ಆಧ್ಯಾತ್ಮಿಕತೆಯಲ್ಲಿ ಯಾವುದೇ ರೀತಿಯ ದ್ವೇಷವನ್ನು ಬಿತ್ತುವುದಕ್ಕೆ ಅವಕಾಶವಿಲ್ಲ. ಈ ಪುರಾತನ, ವಿಶಾವಾದ ನೆಲದಲ್ಲಿ ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಬಾಳಲು ಶಕ್ತರಾಗಬೇಕು’’ ಎಂದು ಆಕೆ ಟ್ವೀಟ್ ಮಾಡಿದ್ದಾರೆ.
Sickening to see the violence against Muslims celebrated in India. The widespread anti-Muslim rhetoric preys on fear and poisons people.
— Padma Lakshmi (@PadmaLakshmi) April 27, 2022
This propaganda is dangerous and nefarious because when you consider someone less than it's much easier to participate in their oppression.
Fellow Hindus, don't succumb to this fear-mongering. There is no threat to Hinduism in India or anywhere else. True spirituality doesn't include any room for sowing hatred of any kind.
— Padma Lakshmi (@PadmaLakshmi) April 27, 2022
People of all faiths should be able to live peacefully together in this ancient, vast land.
— Padma Lakshmi (@PadmaLakshmi) April 27, 2022







