ಭಾರತದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದ ಅಂತಾರಾಷ್ಟ್ರೀಯ ಫುಟ್ಬಾಲ್ ತಾರೆ ಮಸೂದ್ ಒಝಿಲ್

Photo: Twitter
ಹೊಸದಿಲ್ಲಿ: ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ನಡೆಸುತ್ತಿರುವ ದೌರ್ಜನ್ಯಗಳು ಸದ್ಯ ವಿಶ್ವದ ಗಮನಸೆಳೆದಿದೆ. ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ಖ್ಯಾತನಾಮರು ಈ ಕುರಿತು ಖಂಡನೆ ವ್ಯಕ್ತಪಡಿಸಿದ್ದಾರೆ. ಇದೀಗ ಜೆರ್ಮನ್ ನ ಪ್ರೊಫೆಶನಲ್ ಫುಟ್ಬಾಲ್ ಪಟು ಮಸೂದ್ ಒಝಿಲ್ ಮುಸ್ಲಿಮರ ವಿರುದ್ಧದ ದೌರ್ಜನ್ಯವನ್ನು ಟ್ವೀಟ್ ಮೂಲಕ ಖಂಡಿಸಿದ್ದಾರೆ. "ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಮಾನವ ಹಕ್ಕುಗಳಿಗೇನಾಯಿತು?" ಎಂದು ಅವರು ಪ್ರಶ್ನಿಸಿದ್ದಾರೆ.
26 ಮಿಲಿಯನ್ ಗೂ ಅಧಿಕ ಹಿಂಬಾಲಕರಿರುವ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ "ಲೈಲತುಲ್ ಖದ್ರ್ (ರಮಝಾನ್ ನ ಪವಿತ್ರ ರಾತ್ರಿ)ನ ಪವಿತ್ರ ರಾತ್ರಿಯಂದು ನಾನು ಭಾರತದ ಮುಸ್ಲಿಂ ಸಹೋದರ, ಸಹೋದರಿಯರಿಗಾಗಿ ಪ್ರಾರ್ಥಿಸುತ್ತಿದ್ದೇನೆ. ಇಂತಹಾ ನಾಚಿಗೇಡಿನ ಪರಿಸ್ಥಿತಿಯ ಕುರಿತು ನಾವು ಜಾಗೃತಿ ಮೂಡಿಸಬೇಕಾಗಿದೆ. ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುವಲ್ಲಿ ಮಾನವ ಹಕ್ಕುಗಳಿಗೇನಾಗಿದೆ? ಎಂದು ಅವರು ಪ್ರಶ್ನಿಸಿದ್ದಾರೆ. ಜೊತೆಗೆ break the silence ಎಂಬ ಹ್ಯಾಶ್ ಟ್ಯಾಗ್ ಅನ್ನೂ ಬಳಸಿದ್ದಾರೆ.
"ಭಾರತೀಯ ಮುಸ್ಲಿಮರ ಪರಿಸ್ಥಿತಿಯನ್ನರಿತು ಜೊತೆಗೆ ನಿಂತಿರುವುದಕ್ಕೆ ತಮಗೆ ಧನ್ಯವಾದಗಳು" ಎಂದು ಹಲವಾರು ಮಂದಿ ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
Praying during the holy night of Lailat al-Qadr for the safety and well-being of our Muslim brothers and sisters in IndiaLet's spread awareness to this shameful situation! What is happening to the human rights in the so-called largest democracy in the world?#BreakTheSilence pic.twitter.com/pkS7o1cHV5
— Mesut Özil (@MesutOzil1088) April 27, 2022







