ಎ.30ಕ್ಕೆ ಇನ್ನಂಜೆಯಲ್ಲಿ ಸಮಗ್ರ ಕೃಷಿ ಮಾಹಿತಿ
ಉಡುಪಿ : ಉಡುಪಿ ಜಿಲ್ಲಾ ಕೃಷಿಕ ಸಂಘ ಆಯೋಜಿಸಿರುವ ಸಮಗ್ರ ಕೃಷಿ ಮಾಹಿತಿ ಸಭೆ ಎ.30ರ ಶನಿವಾರ ಸಂಜೆ 4 ಗಂಟೆಗೆ ಇನ್ನಂಜೆ ಪೊದಮಲೆ ವೈಲೆಟ್ ಬರ್ಬೋಜಾ ಇವರ ಮನೆ ವಠಾರದಲ್ಲಿ ನಡೆಯಲಿದೆ.
ಸ್ಟೀಫನ್ ನಜರೆತ್ ಇನ್ನಂಜೆ ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಆಧ್ಯಕ್ಷತೆಯನ್ನು ಐ.ಪುಂಡರೀಕಾಕ್ಷ ಮಿತ್ತಂತಾಯ ಇನ್ನಂಜೆ ವಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಶ್ರೀಧರ್ಮಸ್ಥಳ ಇನ್ನಂಜೆ ಒಕ್ಕೂಟ ಸೇವಾಪ್ರತಿನಿಧಿ ಸುಜಾತ, ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್ ಭಾಗವಹಿಸಲಿದ್ದಾರೆ.
ಕಡಿಮೆ ಖರ್ಚಿನಲ್ಲಿ ವೈಜ್ಞಾನಿಕವಾಗಿ ಲಾಭದಾಯಕ ತೆಂಗು, ಅಡಿಕೆ, ಬಾಳೆ, ಮಲ್ಲಿಗೆ ಮೊದಲಾದ ಕೃಷಿ ಮಾಡುವ ವಿಧಾನಗಳು, ನಾಟಿ, ನಿರ್ವಹಣೆ, ಕೀಟ- ರೋಗ ಹತೋಟಿ, ಮಾರುಕಟ್ಟೆ ಕ್ರಮಗಳ ಕುರಿತು ಸಮಗ್ರ ಮಾಹಿತಿ ಗಳನ್ನು ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.
Next Story