ಮಲ್ಪೆ: ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರಿಗೆ ಸನ್ಮಾನ

ಮಲ್ಪೆ, ಎ.೨೮: ಮಲ್ಪೆ ಕೀರ್ತಿಶಾಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕಲಾಸಂಘ ವಡಭಾಂಡೇಶ್ವರ ತೊಟ್ಟಂ ಇವರ ವತಿಯಿಂದ ಮಹಾಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೧ನೇ ಜನ್ಮದಿನೋತ್ಸವವನ್ನು ಮಲ್ಪೆ ತೊಟ್ಟಂನ ಸಾರ್ವಜನಿಕ ಶ್ರೀಗಣೇಶ ವೇದಿಕೆಯಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಎಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಅತ್ಯುನ್ನತ್ತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದೊಂದಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಸಮಾಜ ಸೇವಕ ನ.ರಹಮತುಲ್ಲಾ ಸಾಹೇಬ್, ಕರ್ನಾಟಕ ರಾಜ್ಯ ಕಾನೂನು ವಿವಿಯ ಸ್ನಾತಕೋತ್ತರ ಪರೀಕ್ಷೆಯಲ್ಲಿ (ಎಲ್‌ಎಲ್‌ಎಂ) ರಾಜ್ಯಕ್ಕೆ ಪ್ರಥಮ ರ್ಯಾಂಕ್‌ನೊಂದಿಗೆ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ನಮ್ರತಾ ವಿದ್ಯಾಸಾಗರ್, ಪಡ್ಲ ನೆರ್ಗಿ, ಜೀವರಕ್ಷರಾದ ಈಶ್ವರ್ ಮಲ್ಪೆ, ರಾಜ್ಯಮಟ್ಟದ ಬಾಕ್ಸಿಂಗ್ ಕ್ರೀಡಾಪಟು ವಿಕಾಸ್ ಬಲರಾಮನಗರ, ಸಮಾಜಸೇವಕ ಪ್ರವೀಣ್ ಕಾಂಚನ್ ಬಡಾನಿಡಿಯೂರು ಇವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಯಿತು. ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹುಮಾನ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಎಂ.ನವೀನ್‌ಚಂದ್ರ ಮಲ್ಪೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ಯೋಗೀಶ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಅಂಬೇಡ್ಕರ್ ಯುವ ಸೇನೆಯ ಉಡುಪಿ ತಾಲೂಕು ಅಧ್ಯಕ್ಷ ದಯಾನಂದ ಕಪ್ಪೆಟ್ಟು, ಸಾರ್ವಜನಿಕ ಗಣೇಶೋತ್ಸವ ಸಮಿತಿ ತೊಟ್ಟಂನ ಅಧ್ಯಕ್ಷ ಪ್ರಶಾಂತ್ ಕೆ. ಸಾಲ್ಯಾನ್ ತೊಟ್ಟಂ., ಪರಿಶಿಷ್ಟ ಜಾತಿ ಮಹಿಳಾ ಮೀನುಗಾರರ, ವಿವಿಧೋದ್ದೇಶ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷೆ ರಾಧಾ ಶೀನ ತೊಟ್ಟಂ, ತೊಟ್ಟಂನ ಶ್ರೀಮಂಜುನಾಥೇಶ್ವರ ಭಜನಾ ಮಂದಿರದ ಅಧ್ಯಕ್ಷ ಚಂದ್ರ ಟಿ. ಸುವರ್ಣ, ತೊಟ್ಟಂನ ಶ್ರೀಭಕ್ತಿ ಉದಯ ಪಂಡರೀನಾಥ ವಿಠೋಬಾ ಭಜನಾ ಮಂದಿರದ ಉಪಾಧ್ಯಕ್ಷ ಉಮೇಶ ಸುವರ್ಣ ಹಾಗೂ ಇತರರು ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಸದಾನಂದ ಪಾಲನ್, ಉಪಾಧ್ಯಕ್ಷೆ ಯಶೋದಾ ರವರು ಉಪಸ್ಥಿತರಿದ್ದರು. ಪ್ರಶಾಂತ್ ತೊಟ್ಟಂ ಸ್ವಾಗತಿಸಿ,ವಂದಿಸಿದರು. ಶರತ್ ಗರಡಿ ಮಜಲು ಕಾರ್ಯಕ್ರಮ ನಿರೂಪಿಸಿದರು.