ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಮತ್ತೋರ್ವ ಯುವತಿಯ ಬಂಧನ

ಬೆಂಗಳೂರು, ಎ.28: ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಮತ್ತೋರ್ವ ಯುವತಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಜ್ಯೋತಿ ಪಾಟೀಲ್ ಬಂಧಿತ ಆರೋಪಿಯಾಗಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ. ಇನ್ನೂ, ಜ್ಯೋತಿ ಸಹಾಯದಿಂದ ಪಿಎಸ್ಸೈ ಅಭ್ಯರ್ಥಿ ಆಗಿರುವ ಶಾಂತಿಬಾಯಿ ಅಕ್ರಮದಿಂದ ನೇರವಾಗಿ ಆಯ್ಕೆಯಾಗಿದ್ದಳು ಎನ್ನಲಾಗಿದೆ.
ಪಿಎಸ್ಸೈ ನೇಮಕಾತಿ ಅಕ್ರಮ ಪಟ್ಟಿಯಲ್ಲಿ ಹೆಸರು ಹೊಂದಿರುವ ಶಾಂತಿಬಾಯಿ ಸದ್ಯ ನಾಪತ್ತೆಯಾಗಿದ್ದಾಳೆ. ತಲೆಮರೆಸಿಕೊಂಡಿರುವ ಇನ್ನೊಬ್ಬ ಇಂಜಿನಿಯರ್ ಮಂಜುನಾಥ್ ಪಾಟೀಲ್‍ಗೆ ಶಾಂತಿಬಾಯಿಯನ್ನು ಭೇಟಿ ಮಾಡಿಸಿರುವುದು ಕೂಡ ಆರೋಪಿ ಜ್ಯೋತಿ ಪಾಟೀಲ್ ಎಂದು ತಿಳಿದುಬಂದಿದೆ.
Next Story





