ಅಖಿಲ ಭಾರತ ವೀರಶೈವ ಮಹಾಸಭಾದ ಉಡುಪಿ ಜಿಲ್ಲಾ ಘಟಕ ಅಸ್ತಿತ್ವಕ್ಕೆ
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಉಡುಪಿ ಜಿಲ್ಲಾ ಘಟಕವನ್ನು ಆರಂಭಿ ಸಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ವಾಸಿಸುತ್ತಿರುವ ವೀರಶೈವ ಲಿಂಗಾಯತ ಸಮುದಾಯದ ಸರ್ವ ಸದಸ್ಯರು ಇದರ ಸದಸ್ಯರಾಗುವಂತೆ ಮನವಿ ಮಾಡಲಾಗಿದೆ.
ಉಡುಪಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಸಹ ಆಯ್ಕೆ ಮಾಡಲಾಗಿದೆ. ಉಡುಪಿಯ ಆದರ್ಶ ಆಸ್ಪತ್ರೆಯ ಸ್ಥಾಪಕ ಡಾ.ಜಿ.ಎಸ್ ಚಂದ್ರಶೇಖರ್ ಹಾಗೂ ಉಡುಪಿ ಚಿತ್ರಕಲಾ ಮಂದಿರದ ಯು.ಸಿ.ನಿರಂಜನ್ ಅವರು ಕ್ರಮವಾಗಿ ಸಂಘದ ಗೌರವಾಧ್ಯಕ್ಷ ಹಾಗೂ ಗೌರವ ಸಲಹೆಗಾರರಾಗಿ ನಿಯೋಜಿತರಾಗಿದ್ದಾರೆ.
ಗಿರೀಶ್ ಪಾಂಗಾಳ ಇವರು ನೂತನ ಸಂಘದ ಅಧ್ಯಕ್ಷರಾಗಿದ್ದು, ಶಾಂತನಗೌಡರು ಹಾಗೂ ಸೋಮನಾಥ್ ಉಪಾಧ್ಯಕ್ಷರಾಗಿ ಗಂಗಾಧರ್ ಮತ್ತು ಸುರೇಶ್ ಎಸ್.ಕೆ. ಜಂಟಿ ಕಾರ್ಯದರ್ಶಿಗಳಾಗಿ ಹಾಗೂ ಗಿರೀಶ್ ಜೆ.ಕಡ್ಡಿಪುಡಿ ಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
Next Story