ಜೂನ್ ನಲ್ಲಿ 5 ಜಿ ಹರಾಜು ಸಾಧ್ಯತೆ

PHOTO:TWITTER
ಹೊಸದಿಲ್ಲಿ,ಎ.28: ಕೇಂದ್ರ ಸರಕಾರವು 5ಜಿ ತರಂಗಾಂತರದ ಹರಾಜನ್ನು ಜೂನ್ ತಿಂಗಳ ಆರಂಭದಲ್ಲಿ ನಡೆಸುವ ಸಾಧ್ಯತೆಯಿದೆಯೆಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ತಿಳಿಸಿದ್ದಾರೆ.
5 ಜಿ ತರಂಗಾಂತರದ ಹರಾಜಿಗೆ ಸಂಬಂಧಿಸಿ ಕೇಂದ್ರ ಸರಕಾರವು ನಿರೀಕ್ಷಿತ ಕಾಲಾನುಕ್ರಮಣಿಕೆಯ ಪ್ರಕಾರ ಕೆಲಸ ಮಾಡುತ್ತಿದೆ ಹಾಗೂ ತರಂಗಾಂತರದ ಬೆಲೆ ನಿಗದಿಗೆ ಸಂಬಂಧಿಸಿದಂತೆ ಟೆಲಿಕಾಂ ಉದ್ಯಮರಂಗವು ಹೊಂದಿರುವ ಆತಂಕಗಳನ್ನು ಬಗೆಹರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು. ತರಂಗಾಂತರ ಹಂಚಿಕೆಯ ಕುರಿತಾದ ವೇಳಾಪಟ್ಟಿಯ ಪ್ರಕಾರ, 5 ಜಿ ತರಂಗಾಂತರದ ಹಂಚಿಕೆಯು ಜೂನ್ ಆರಂಭದಲ್ಲಿ ನಡೆಯುವ ನಿರೀಕ್ಷೆಯಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ದೇಶದಲ್ಲಿ 5ಜಿ ಸೇವೆಯ ಆರಂಭಕ್ಕೆ ವೇದಿಕೆಯನ್ನು ಸಿದ್ಧಪಡಿಸಿರುವ ಟೆಲಿಕಾಂ ನಿಯಂತ್ರಕ ಸಂಸ್ಥೆಯಾದ ಟ್ರಾಯ್ 7.5 ಲಕ್ಷಕೋಟಿ ರೂ. ಮೂಲದರದಲ್ಲಿ ಮುಂದಿನ 30 ವರ್ಷಗಳಿಗೂ ಅಧಿಕ ಸಮಯದವರೆಗೆ ಬಹು ಬ್ಯಾಂಡ್ಗಳ ತರಂಗಾಂತರಗಳನ್ನು ಹರಾಜು ಮಾಡುವ ಬೃಹತ್ ಯೋಜನೆಯನ್ನು ರೂಪಿಸಿದೆ.
20 ವರ್ಷಗಳ ಅವಧಿಗಾದರೆ, ಪ್ರಸ್ತಾವಿತ ತರಂಗಗುಚ್ಛದ ಹರಾಜನಿನ ವೌಲ್ಯವು 5.07 ಲಕ್ಷ ಕೋಟಿ ರೂ. ಆಗಿರುವುದು. ಹಿಂದಿನ ದರಕ್ಕೆ ಹೋಲಿಸಿದರೆ ಟ್ರಾಯ್ ಸಂಸ್ಥೆಯು ತರಂಗಗುಚ್ಛ ಹರಾಜಿನ ದರವನ್ನು ಮೀಸಲು ದರದಲ್ಲಿ 5.07 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ. 5ಜಿ ಗೆ ಹರಾಜಿಗೆ ಸಂಬಂಧಿಸಿದಂತೆ ಶಿಫಾರಸು ಮಾಡಲಾದ ದರಗಳು ಜಾಗತಿಕ ಮಾನದಂಡಕ್ಕಿಂತ ಅಧಿಕವಾಗಿದೆ.







