ಬೆಂಗಳೂರು | ಲೆಕ್ಕಾಧಿಕಾರಿಯ ಕೊಲೆ

ಬೆಂಗಳೂರು, ಎ.29: ಖಾಸಗಿ ಕಂಪೆನಿವೊಂದರಲ್ಲಿ ಲೆಕ್ಕಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದಿರುವ ಘಟನೆ ಇಲ್ಲಿನ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಂಕೆ ನಗರದ ಶಂಕರ್ ರೆಡ್ಡಿ(35) ಕೊಲೆಯಾಗಿರುವ ಲೆಕ್ಕಾಧಿಕಾರಿ ಎಂದು ಪೊಲೀಸರು ಗುರುತಿಸಿದ್ದಾರೆ.
ಗುರುವಾರ ಮಧ್ಯರಾತ್ರಿ ಶಂಕರ್ ರೆಡ್ಡಿ ಅವರನ್ನು ಮನೆಯಲ್ಲೇ ಚಾಕುವಿನಿಂದ ಕುತ್ತಿಗೆ ಇರಿದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಇವರ ಪತ್ನಿ ಹೇಳಿಕೆ ಪ್ರಕಾರ ರಾತ್ರಿ ಮನೆಗೆ ದುಷ್ಕರ್ಮಿಗಳು ಬಂದು ಹಲ್ಲೆ ಮಾಡಿದ್ದು, ಆಗ ನಾನು ಮೂರ್ಛೆ ಹೋಗಿದ್ದೇ. ಪ್ರಜ್ಞೆ ಬಂದು ನೋಡಿದಾಗ ನನ್ನ ಪತಿ ಕೊಲೆಯಾಗಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.
ಯಶವಂತಪುರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story





