PSI ನೇಮಕಾತಿಯನ್ನು ರದ್ದುಗೊಳಿಸಿ ಹಗರಣ ನಡೆದಿದ್ದು ನಿಜ ಎಂದು ಒಪ್ಪಿಕೊಂಡ ಸರಕಾರ: ಕಾಂಗ್ರೆಸ್

PSI ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾದ ಆರೋಪಿ ದಿವ್ಯಾ ಹಾಗರಗಿ
ಬೆಂಗಳೂರು: 'ಪಿಎಸ್ ಐ ಪರೀಕ್ಷೆಯಲ್ಲಿ ಅಕ್ರಮವೇ ನಡೆದಿಲ್ಲ ಎಂದು ಗೃಹಸಚಿವರು ಸದನದಲ್ಲಿ ಪ್ರತಿಪಾಸಿದ್ದರು. ಈಗ ನೇಮಕಾತಿಯನ್ನು ರದ್ದುಗೊಳಿಸಿ ಹಗರಣ ನಡೆದಿದ್ದು ನಿಜ ಎಂದು ಒಪ್ಪಿಕೊಂಡಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಸಮರ್ಥನೆ ಮಾಡಿಕೊಂಡಿದ್ದ ಗೃಹಸಚಿವರೇ, ನೀವು ಇನ್ನೂ ಹುದ್ದೆಯಲ್ಲಿ ಮುಂದುವರಿಯಲು ಅರ್ಹರೇ? ಸಾರ್ವಜನಿಕ ಲಜ್ಜೆ ಎನ್ನುವುದು ನಿಮಗಿದ್ದರೆ ಕೂಡಲೇ ರಾಜೀನಾಮೆ ಕೊಟ್ಟುಬಿಡಿ' ಎಂದು ಕಾಂಗ್ರೆಸ್ ಒತ್ತಾಯಿಸಿದೆ.
'ದಿವ್ಯಾ ಹಾಗರಗಿಯನ್ನು ಬಂಧಿಸಿ ಆಗಿದೆ, ಅದೂ ಕೂಡ ನ್ಯಾಯಾಲಯ ಆಸ್ತಿ ಜಪ್ತಿಗೆ ಆದೇಶ ಕೊಟ್ಟಿದ್ದಕ್ಕಾಗಿ. ಇಲ್ಲದಿದ್ದರೆ ಶತಾಯ ಗತಾಯ ಸರ್ಕಾರ ಬಂಧಿಸುತ್ತಿರಲಿಲ್ಲ. ಬಂಧಿಸುವುದಿದ್ದರೆ ಇಷ್ಟು ದಿನ ಬೇಕಿರಲಿಲ್ಲ. ಈಗ ಸಾಕ್ಷ್ಯ ನಾಶಕ್ಕೆ ಅನುವು ಮಾಡಿಕೊಡದೆ 40% ಭ್ರಷ್ಟ ಕೆ.ಎಸ್ ಈಶ್ವರಪ್ಪ ಅವರನ್ನು ಯಾವಾಗ ಬಂಧಿಸುತ್ತೀರಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
PSI ಪರೀಕ್ಷೆಯಲ್ಲಿ ಅಕ್ರಮವೇ ನಡೆದಿಲ್ಲ ಎಂದು ಗೃಹಸಚಿವರು ಸದನದಲ್ಲಿ ಪ್ರತಿಪಾಸಿದ್ದರು.
— Karnataka Congress (@INCKarnataka) April 29, 2022
ಈಗ ನೇಮಕಾತಿಯನ್ನು ರದ್ದುಗೊಳಿಸಿ ಹಗರಣ ನಡೆದಿದ್ದು ನಿಜ ಎಂದು ಒಪ್ಪಿಕೊಂಡಿದೆ.
ಸಮರ್ಥನೆ ಮಾಡಿಕೊಂಡಿದ್ದ ಗೃಹಸಚಿವರೇ, ನೀವು ಇನ್ನೂ ಹುದ್ದೆಯಲ್ಲಿ ಮುಂದುವರೆಯಲು ಅರ್ಹರೇ? ಸಾರ್ವಜನಿಕ ಲಜ್ಜೆ ಎನ್ನುವುದು ನಿಮಗಿದ್ದರೆ ಕೂಡಲೇ ರಾಜೀನಾಮೆ ಕೊಟ್ಟುಬಿಡಿ.







