ಮಂಗಳೂರು; ರಸ್ತೆ ಕಾಮಗಾರಿ: ಬದಲಿ ಸಂಚಾರ ವ್ಯವಸ್ಥೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸೆಂಟ್ರಲ್ ಮಾರ್ಕೆಟ್ ರಸ್ತೆ (ಕಲ್ಪನಾ ಸ್ಟೀಟ್ಸ್‌ನಿಂದ ಮೈದಾನ 1ನೇ ಅಡ್ಡರಸ್ತೆ) ಯವರೆಗೆ ಅಭಿವೃದ್ಧಿ ಕಾಮಗಾರಿ ನಡೆಯಲಿರುವುದರರಿಂದ ಎ.28ರಿಂದ ಜೂ.26ರವರೆಗೆ 60 ದಿನಗಳ ಕಾಲ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾಮಗಾರಿ ನಡೆಯುವ ವೇಳೆ ಕಲ್ಪನಾ ಸ್ಟೀಟ್ಸ್‌ನಿಂದ ಮೈದಾನ 1ನೇ ಅಡ್ಡರಸ್ತೆಯವರೆಗೆ ಎಲ್ಲಾ ತರಹದ ವಾಹನಗಳನ್ನು ನಿಷೇಧಿಸಿ ಮೈದಾನ 1ನೇ ಅಡ್ಡರಸ್ತೆಯ (ಫಾತಿಮಾ ಸ್ಟೋರ್ ಎದುರು ರಸ್ತೆ) ಮೂಲಕ ಕ್ಲಾಕ್ ಟವರ್ ಕಡೆಗೆ ಸಂಚರಿಸಿ ಅಲ್ಲಿಂದ ಮುಂದಕ್ಕೆ ಸಂಚರಿಸಲು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





