ಮಂಗಳೂರಿನಲ್ಲಿ ಈದ್ ನಮಾಝ್: ಪೂರ್ವಾಭಾವಿ ಸಭೆ
ಮಂಗಳೂರು : ನಗರದ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಈದ್ ಉಲ್ ಫಿತರ್ ಪ್ರಯುಕ್ತ ಸಾಮೂಹಿಕ ಈದ್ ನಮಾಝ್ ನಡೆಸುವ ಕುರಿತು ಶುಕ್ರವಾರ ಈದ್ಗಾ ಮಸೀದಿಯಲ್ಲಿ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಅಧ್ಯಕ್ಷ ಹಾಜಿ ಯೆನೆಪೊಯ ಅಬ್ದುಲ್ಲಾ ಕುಂಞಿ ಅವರ ಅಧ್ಯಕ್ಷತೆಯಲ್ಲಿ ಪುರ್ವಭಾವಿ ಸಭೆ ನಡೆಯಿತು.
ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಸಾಮೂಹಿಕ ಈದ್ ನಮಾಝ್ ಬೆಳಗ್ಗೆ 8ಕ್ಕೆ ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿಯವರು ನಿರ್ವಹಿಸುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಸೀದಿಯ ಉಪಾಧ್ಯಕ್ಷ ಕೆ.ಅಶ್ರಫ್, ಕೋಶಾಧಿಕಾರಿ ಹಾಜಿ ಸೈಯದ್ ಅಹ್ಮದ್ ಬಾಷಾ ತಂಳ್, ಆಡಳಿತ ಸಮಿತಿಯ ಸದಸ್ಯರುಗಳಾದ ಹಾಜಿ ಎಸ್‌ಎಂ ರಶೀದ್, ಹಾಜಿ ಅಬ್ದುಲ್ ಸಮದ್, ಮುಹಮ್ಮದ್ ಅಶ್ರಫ್ ಹಳೆಮನೆ, ಅದ್ದು ಹಾಜಿ, ಹಾಜಿ ಐ. ಮೊಯ್ದಿನಬ್ಬ, ಈದ್ಗಾ ಮಸೀದಿಯ ಖತೀಬ್ ಸದಖತುಲ್ಲಾ ನದ್ವಿ, ಸಿ. ಮಹ್ಮೂದ್ ಹಾಜಿ ಕಾಪಿರಗುಡ್ಡೆ ಮಂಗಳೂರು, ಮಾಜಿ ಕೌನ್ಸಿಲರ್ ಅಹ್ಮದ್ ಬಾವ, ಮಂಗಳೂರು ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಹಾಜಿ ರಿಯಾಝುದ್ದೀನ್, ಹಾಜಿ ಫಕೀರಬ್ಬ ಮಂಗಳೂರು, ಮುಹಮ್ಮದ್ ಸಾಲಿ ಹಾಜಿ ಮಂಗಳೂರು, ಶಮೀಮ್ ಹುಸೈನ್ ಕಸೈಗಲ್ಲಿ, ಹಮೀದ್ ಕಚ್‌ಮೀನ್ ಬಂದರ್, ಸಿ.ಎಂ. ಮುಸ್ತಫಾ ಬಂದರ್, ಸ್ಥಳೀಯ ಮಸೀದಿಗಳ ಪದಾಧಿಕಾರಿಗಳಾದ ಶಫಿಯುಲ್ಲಾ, ಬಶೀರ್ ಅಹ್ಮದ್ ಕೆ., ಕೆ. ಶಮೀಮ್ ಅಹ್ಮದ್, ಉಮರುಲ್ ಫಾರೂಕ್,ಅಶ್ರಫ್, ಸೈಯದ್, ಅಹ್ಮದ್, ಶೇಕ್ ಮುಹಮ್ಮದ್ ಆರಿಫ್, ಸಂಘಟನೆಗಳ ಮುಖಂಡರಾದ ಮುನವ್ವರ್, ಡಿ.ಎಂ ಅಸ್ಲಂ ಮತ್ತಿತರು ಉಪಸ್ಥಿತರಿದ್ದರು.