ಕಾಂಗ್ರೆಸ್ ನಾಯಕಿ ಮೇಘನಾ ದಾಸ್ ನಿಧನ
ಮಂಗಳೂರು : ಕಾಂಗ್ರೆಸ್ ನಾಯಕಿ, ನಗರದ ಮಠದ ಕಣಿ ನಿವಾಸಿ ಮೇಘನಾ ದಾಸ್ (37) ಅಸೌಖ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ.
ಮೃತರು ಪತಿ ಹಾಗೂ ಪುತ್ರಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದು, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಣ್ಣಗುಡ್ಡ 28ನೇ ವಾರ್ಡ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಬೆಂಗಳೂರು ಹಾಗೂ ದುಬೈಯ ಖಾಸಗಿ ಕಂಪನಿಗಳಲ್ಲಿ ಹಲವು ವರ್ಷಗಳ ಉದ್ಯೋಗಿಯಾಗಿದ್ದರು.
Next Story





