ಉಡುಪಿ ಜಿಲ್ಲೆಯಾದ್ಯಂತ ಸೌಹಾರ್ದ ಮೇ ದಿನಾಚರಣೆ
ಉಡುಪಿ : ಕಾರ್ಮಿಕ ವರ್ಗದ ಅಂತಾರಾಷ್ಟ್ರೀಯ ಸೌಹಾರ್ದ ದಿನವಾದ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಮೇ 1ರಂದು ಉಡುಪಿ ಜಿಲ್ಲೆ ಯಾದ್ಯಂತ ಹಮ್ಮಿಕೊಳ್ಳಲಾಗಿದೆ.
ಉಡುಪಿ ಸಿಂಡಿಕೇಟ್ ಸರ್ಕಲ್‌ನಿಂದ ಸಂಜೆ ೪ ಗಂಟೆಗೆ ಮೆರವಣಿಗೆ ಹೊರಟು ಅಜ್ಜರಕಾಡು ಹುತಾತ್ಮರ ಸ್ಮಾರಕ ಬಳಿ, ಕಾರ್ಕಳದ ಬಸ್ ನಿಲ್ದಾಣದ ಬಳಿ ಬೆಳಿಗ್ಗೆ ೧೦.೩೦ ಗಂಟೆಗೆ, ಬ್ರಹ್ಮಾವರದಲ್ಲಿ ಬೆಳಿಗ್ಗೆ ೧೧ ಗಂಟೆಗೆ, ಕುಂದಾಪುರ ದಲ್ಲಿ ಬೆಳಿಗ್ಗೆ ೧೦ಗಂಟೆಗೆ ಶಾಸ್ತ್ರಿ ವೃತ್ತದಿಂದ ಮೆರವಣಿಗೆ ಹೊರಟು ಹಾಗೂ ಬೈಂದೂರು ಸಿಐಟಿಯು ಕಚೇರಿಯಿಂದ ಬೆಳಿಗ್ಗೆ ೧೦ ಗಂಟೆಗೆ ಮೆರವಣಿಗೆ ಹೊರಟು ಪೇಟೆಯಲ್ಲಿ ಬಹಿರಂಗ ಸಭೆ ನಡೆಯಲಿದೆ.
ಜಿಲ್ಲೆಯ ಹಂಚು, ಕಟ್ಟಡ, ಬೀಡಿ, ಅಂಗನವಾಡಿ, ಅಕ್ಷರ ದಾಸೋಹ ನೌಕರರು, ಕ್ಯಾಶು ಕಾರ್ಮಿಕರು, ಆಟೋ ರಿಕ್ಷಾ ಮತ್ತು ವಾಹನ ಚಾಲಕರು, ಬಸ್ಸು ನೌಕರರು, ಜನರಲ್ ವರ್ಕರ್ಸ್ ಸದಸ್ಯರು, ಸೆಕ್ಯೂರಿಟಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ಮೀನುಗಾರರು ಹಾಗು ಮೀನು ಕಾರ್ಮಿಕರು, ಕೃಷಿ ಕೂಲಿಕಾರರು, ರೈತರು, ವಿದ್ಯಾರ್ಥಿ ಯುವಜನರು ಭಾಗವಹಿಸಲಿದ್ದಾರೆ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ.ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.