ಬಾವಿಗೆ ಬಿದ್ದು ಮಹಿಳೆ ಮೃತ್ಯು
ಬೈಂದೂರು : ಬಾವಿಯಿಂದ ನೀರು ಸೇದುತ್ತಿದ್ದ ಮಹಿಳೆಯೊಬ್ಬರು ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೈಂದೂರು ಪಡುವರಿ ಗ್ರಾಮದ ಚರ್ಚ್ ರೋಡ್ ಎಂಬಲ್ಲಿ ಎ.29ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಚರ್ಚ್ ರೋಡ್ ಇಮಿಲಿಯಾ ನಜ್ರೇತ್ (75) ಎಂದು ಗುರು ತಿಸಲಾಗಿದೆ.
ಇವರು ಮನೆಯ ಆವರಣದೊಳಗೆ ಇರುವ ಬಾವಿಯಿಂದ ನೀರನ್ನು ಸೇದುತ್ತಿರುವಾಗ ಆಯತಪ್ಪಿ ಬಾವಿಯ ನೀರಿಗೆ ಬಿದ್ದರು. ಕೂಡಲೇ ಇವರನ್ನು ಮೇಲಕ್ಕೆತ್ತಿ ಬೈಂದೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story