ಬ್ಲ್ಯಾಕ್ ಫಂಗಸ್ ನಿಯಂತ್ರಣಕ್ಕೆ ಕೊನೊಝೋಲ್ ಸೂಕ್ತ ಔಷಧ: ಸಿಡಿಎಸ್‍ಸಿಓದಿಂದ ಅನುಮತಿ

ಬೆಂಗಳೂರು, ಎ. 30: ದೇಶದ ಪ್ರಮುಖ ಔಷಧ ತಯಾರಿಕಾ ಸಂಸ್ಥೆಗಳ ಪೈಕಿ ಒಂದಾಗಿರುವ ಗುಫಿಕ್ ಬಯೋಸೈನ್ಸ್ ಲಿಮಿಟೆಡ್ ಬ್ಲ್ಯಾಕ್ ಫಂಗಸ್ ಸೋಂಕಿತರಿಗಾಗಿ ಆಭಿವೃದ್ಧಿಪಡಿಸಿರುವ ಇಸಾವುಕೊನೊಝೋಲ್ ಚುಚ್ಚುಮದ್ದು 200 ಎಂಜಿಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ(ಸಿಡಿಎಸ್‍ಸಿಓ) ಅನುಮತಿ ನೀಡಿದೆ.
18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ರೋಗಿಗಳಿಗೆ ಆಕ್ರಮಣಕಾರಿ ಆಸ್ಪರ್ಜಿಲೊಸಿಸ್ ಮತ್ತು ಆಕ್ರಮಣಕಾರಿ ಮ್ಯೂಕಾರ್ಮೈಕೋಸಿಸ್ ಚಿಕಿತ್ಸೆಗೆ ಈ ಔಷಧ ಅತ್ಯಂತ ಸೂಕ್ತ ಎಂದು ಸೂಚಿಸಲಾಗುತ್ತದೆ.
ಭಾರತದಲ್ಲಿ 2ನೇ ಅಲೆ ಸಮಯದಲ್ಲಿ ಕೋವಿಡ್-19 ಸೋಂಕಿಗೆ ತುತ್ತಾಗಿ ತೀವ್ರ ಅಸ್ವಸ್ಥರಾದವರಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದವರಲ್ಲಿ ಬ್ಲ್ಯಾಕ್ ಫಂಗಸ್ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿತ್ತು. ಇಂತಹ ರೋಗಿಗಳಿಗೆ ಕೊನೊಝೋಲ್ ವರದಾನವಾಗಿ ಬಂದಿದೆ.
ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದ ರೋಗಿಯ ಮಾರಣಾಂತಿಕ ಸ್ಥಿತಿಯ ವಿರುದ್ಧ ಹೋರಾಡಲು ಪರಿಣಾಮಕಾರಿ ಆಂಟಿಫಂಗಲ್ ಔಷಧಿಯ ತುರ್ತು ಅಗತ್ಯವಿತ್ತು. ಇಸಾವುಕೊನೊಝೋಲ್ ಚುಚ್ಚುಮದ್ದು ಬ್ಲ್ಯಾಕ್ ಫಂಗಸ್ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಗುಫಿಕ್ ಬಯೋಸೈನ್ಸ್ ಲಿಮಿಟೆಡ್‍ನ ವೈದ್ಯಕೀಯ ವ್ಯವಹಾರಗಳ ಜನರಲ್ ಮ್ಯಾನೇಜರ್ ಡಾ. ಆದರ್ಶ್ ಶೆಟ್ಟಿ ಹೇಳಿದರು.
ಶಿಲೀಂಧ್ರಗಳ ಸೋಂಕು ಕೋವಿಡ್-19 ಸೋಂಕಿಗೆ ತುತ್ತಾಗಿ ತೀವ್ರ ಅಸ್ವಸ್ಥರಾದವರಿಗೆ; ಮಧುಮೇಹ ನಿಯಂತ್ರಣದಲ್ಲಿ ಇರದವರಿಗೆ; ಅಮಗಾಂಗ ಕಸಿ ಮಾಡಿಸಿಕೊಂಡವರಿಗೆ; ದೇಹದಲ್ಲಿ ಆಮ್ಲದ ಪ್ರಮಾಣ ನಿಯಂತ್ರದಲ್ಲಿ ಇರದಿದ್ದರೆ ಹಾಗೂ ಸ್ಟಿರಾಯ್ಡ್ ಚಿಕಿತ್ಸೆ ಪಡೆಯುತ್ತಿರುವವರಿಗೆ ಬ್ಲ್ಯಾಕ್ ಫಂಗಸ್ ಹೆಚ್ಚು ಅಪಾಯಕಾರಿ ಎಂದು ವೈದ್ಯಕೀಯ ಮೂಲ ತಿಳಿಸಿದೆ.







