ಬಹುಕೋಟಿ ಪಾನ್ ಮಸಾಲಾ ಜಾಹೀರಾತು ನಿರಾಕರಿಸಿದ ನಟ ಯಶ್

ಯಶ್
ಬೆಂಗಳೂರು: ಪಾನ್ ಮಸಾಲಾ ಬ್ರಾಂಡ್ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಬಾಲಿವುಡ್ ನಟ ಅಕ್ಷಯ ಕುಮಾರ್ ಕ್ಷಮೆ ಯಾಚಿಸಿದ ಒಂದು ವಾರದಲ್ಲೇ ಕನ್ನಡದ ಸೂಪರ್ ಸ್ಟಾರ್ ಯಶ್ ಇದೀಗ ಪಾನ್ ಮಸಾಲಾ ಬ್ರಾಂಡ್ನ ಜಾಹೀರಾತು ಒಪ್ಪಂದ ತಿರಸ್ಕರಿಸಿದ್ದಾರೆ.
ಕೆಜಿಎಫ್ ಚಾಪ್ಟರ್-2 ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಯಶಸ್ಸು ಸಾಧಿಸಿದ ಬೆನ್ನಲ್ಲೇ ಯಶ್, ಪಾನ್ ಮಸಾಲಾ ಮತ್ತು ಕಾರ್ಡಮಮ್ ಬ್ರಾಂಡ್ಗಳ ಜತೆಗಿನ ಬಹುಕೋಟಿ ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ಈ ಸುದ್ದಿಯನ್ನು ಯಶ್ ಜತೆಗೆ ಒಪ್ಪಂದ ನಿರ್ವಹಿಸುತ್ತಿದ್ದ ಎಕ್ಸೀಡ್ ಎಂಟರ್ ಟೈನ್ಮೆಂಟ್ ದೃಢಪಡಿಸಿದೆ.
"ನಾವು ಯಶ್ ತಂಡದ ಭಾಗವಾದಾಗ ಮತ್ತು 2020ರ ಮಾರ್ಚ್ನಲ್ಲಿ ಪ್ರಶಾಂತ್ ಜತೆ ಸಹಯೋಗ ಮಾಡಿಕೊಂಡಾಗ, ಪರಸ್ಪರ ಸಂವಾದಕ್ಕಾಗಿ 'ಸ್ಟಾರ್ಮ್ ಈಸ್ ಕಮಿಂಗ್' ಎಂಬ ಒಂದು ಅನೌಪಚಾರಿಕ ಗುಂಪು ರಚಿಸಿಕೊಂಡಿದ್ದನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ. ಇದು ಅವರು ನಮ್ಮಲ್ಲಿ ಬೇರೂರಿಸಿದ ನಂಬಿಕೆ. ಆಗ ಕೆಜಿಎಫ್-2 ಚಿತ್ರೀಕರಣ ಯಾವಾಗ ಪೂರ್ಣಗೊಳ್ಳುತ್ತದೆ, ಬಿಡುಗಡೆಯಾಗುತ್ತದೆ ಮತ್ತು ಅದ್ಭುತ ಯಶಸ್ಸು ಗಳಿಸುತ್ತದೆ ಎಂಬ ಮಾಹಿತಿ ಯಾರಿಗೂ ಇರಲಿಲ್ಲ" ಎಂದು ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ ಹೇಳಿದ್ದಾರೆ.
ಈ ಹಂತದಲ್ಲಿ, ಪ್ರಮುಖ ಹೂಡಿಕೆ, ದೃಢೀಕರಣ ಅಥವಾ ಈಕ್ವಿಟಿ ಒಪ್ಪಂದ ಯಾವುದೇ ಇರಲಿ; ನಮ್ಮ ತಂಡ ಧೀರ್ಘಾವಧಿ ಪಾಲುದಾರಿಕೆಯನ್ನು ಮಾತ್ರ ಎದುರು ನೋಡುತ್ತಿತ್ತು. ಇತ್ತೀಚೆಗೆ ನಾವು ಪಾನ್ ಮಸಾಲಾ ಬ್ರಾಂಡ್ನಿಂದ ಬಂದ ಎರಡಂಕಿಯ ಬಹುಕೋಟಿ ಆಫರ್ ಅನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸಿದ್ದೇವೆ. ಅಖಿಲ ಭಾರತಮಟ್ಟದ ಅಭಿಮಾನಿಗಳನ್ನು ಹೊಂದಿರುವ ದೃಷ್ಟಿಯಿಂದ ಅಭಿಮಾನಿಗಳಿಗೆ ಮತ್ತು ಅನುಯಾಯಿಗಳಿಗೆ ವಿಶಿಷ್ಟ ಸಂದೇಶ ನೀಡಲು ಈ ಅವಕಾಶವನ್ನು ನಾವು ಬಳಸಿಕೊಂಡಿದ್ದೇವೆ. ಆತ್ಮಸಾಕ್ಷಿಯ, ಸಮಾನ ಮನಸ್ಕ ಬ್ರಾಂಡ್ಗಳ ಜತೆ ಮಾತ್ರ ಸಹಯೋಗ ಹೊಂದಲು ನಮ್ಮ ಸಮಯ ಹಾಗೂ ಶ್ರಮ ಹೂಡಿಕೆ ಮಾಡುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.







